KCET 2022: ಯಾವ ಕಾಲೇಜುಗಳಲ್ಲಿ ಎಷ್ಟು ‘CET’ ಸೀಟು ಲಭ್ಯ? ಹೆಚ್ಚಿನ ವಿವರ ಇಲ್ಲಿದೆ
ಕರ್ನಾಟಕ ರಾಜ್ಯ ಪತ್ರದ ವಿಶೇಷ ರಾಜ್ಯ ಪತ್ರಿಕೆಯಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಇಂಜಿನಿಯರಿಂಗ್ ಯು.ಜಿ. ಕೋರ್ಸ್ಗಳ ಕರಡು ಸೀಟ್ ಮ್ಯಾಟ್ರಿಕ್ಸ್ ಅನ್ನು ಸಾರ್ವಜನಿಕ ಆಕ್ಷೇಪಣೆಗಾಗಿ ಅವಕಾಶ ನೀಡಿ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಯುಜಿಸಿಇಟಿ -2022ರ ಕುರಿತು ಮಹತ್ವದ ಅಧಿಸೂಚನೆಯನ್ನು ಹೊರಡಿಸಿದೆ.
ಕರ್ನಾಟಕ ರಾಜ್ಯಪತ್ರ ವಿಶೇಷ ರಾಜ್ಯ ಪತ್ರಿಕೆ ಅಧಿಸೂಚನೆ ಹೊರಡಿಸಿದ್ದು, ಈ ಅಧಿಸೂಚನೆಯಲ್ಲಿ ಎಐಸಿಟಿಇ, ನವದೆಹಲಿ ಮತ್ತು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್, ನವದೆಹಲಿ ಅವರುಗಳು ವೃತ್ತಿಪರ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಕೋರ್ಸ್ಗಳಿಗೆ ನೀಡಿರುವ ಅನುಮೋದಿತ ಇನ್ಟೇಕ್ನಂತೆ ರಾಜ್ಯದಲ್ಲಿನ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಇಂಜಿನಿಯರಿಂಗ್, ಆರ್ಕಿಟೆಕ್ಟರ್ ಕೋರ್ಸ್ಗಳಿಗೆ 2022 – 23ನೇ ಶೈಕ್ಷಣಿಕ ಸಾಲಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕೈಗೊಳ್ಳಬೇಕಿರುತ್ತದೆ.
ಕರಡು ಸೀಟು ಮ್ಯಾಟ್ರಿಕ್ಸ್ ಅನ್ನು ಸಿದ್ಧಪಡಿಸಿ ಲಗತ್ತಿಸಲಾಗಿದೆ. ಈ ಬಗ್ಗೆ ಯಾವುದಾದರೂ ಲೋಪದೋಷ/ ಆಕ್ಷೇಪಣೆ/ ಸಲಹೆಗಳಿದ್ದಲ್ಲಿ, ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು ತಮ್ಮ ಆಕ್ಷೇಪಣೆ, ಸಲಹೆಗಳನ್ನು ನೇರವಾಗಿ ಸರ್ಕಾರದ ಉಪ ಕಾರ್ಯದರ್ಶಿ (ಯೋಜನೆ ಮತ್ತು ತಾಂತ್ರಿಕ), ಉನ್ನತ ಶಿಕ್ಷಣ ಇಲಾಖೆ, 3ನೇ ಗೇಟ್, 6 ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು ಇಲ್ಲಿಗೆ ಲಿಖಿತವಾಗಿ ದೂರು ನೀಡಬಹುದಾಗಿದೆ.
ಅಥವಾ edstechadplang@gmail.com, undersecretaryte@gmail.com, prshigh edu@karnataka.gov.in ಇಮೇಲ್ ಗೆ ಐದು ದಿನದೊಳಗೆ ಸಲ್ಲಿಸಬಹುದು. ಅವಧಿ ಮುಗಿದ ನಂತರ ಸ್ವೀಕೃತವಾಗುವ ಯಾವುದೇ ಆಕ್ಷೇಪಣೆ, ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಹ ತಿಳಿಸಲಾಗಿದೆ.
2022-23ನೇ ಶೈಕ್ಷಣಿಕ ಸಾಲಿನ ಇಂಜಿನಿಯರಿಂಗ್ ಯು.ಜಿ. ಕೋರ್ಸ್ಗಳ ಕರಡು ಸೀಟ್ ಮ್ಯಾಟ್ರಿಕ್ಸ್ ಪಿಡಿಎಫ್ ಈ ಕೆಳಗೆ ನೀಡಲಾಗಿದೆ.