ತಿಂಗಳಾಡಿ : ಹಿಂದು ಮಹಿಳೆಗೆ ಕಿರುಕುಳ ನೀಡಿದ ಆರೋಪಿ ಬಂಧನ

ಪುತ್ತೂರು ತಾಲೂಕಿನ ತಿಂಗಳಾಡಿಯಲ್ಲಿ ಬುಧವಾರ ಸಂಜೆ ಹಿಂದೂ ಯುವತಿಯ ಜೊತೆ ಅನ್ಯಕೋಮಿನ ಯುವಕ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

 

ಆರೋಪಿ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸೊರಕೆ ನಿವಾಸಿ ಬದ್ರುದ್ದೀನ್ ಕಿರುಕುಳ ನೀಡಿ‌ ಪರಾರಿಯಾಗಿದ್ದ,ಬಳಿಕ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಸೆ.15 ಗುರುವಾರ ಬೆಳಿಗ್ಗೆ 8.00 ಗಂಟೆಯ ಒಳಗೆ ಪೊಲೀಸ್ ಇಲಾಖೆ ಬಂಧಿಸದೇ ಇದ್ದಲ್ಲಿ ತಿಂಗಳಾಡಿ ಪೇಟೆ ಬಂದ್ ಮಾಡುವುದರ ಜೊತೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಹಿಂದೂ ಸಂಘಟನೆಯ ಪ್ರಮುಖರು ತಿಳಿಸಿದ್ದರು.

ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ :

ಪುತ್ತೂರು: ತಿಂಗಳಾಡಿಯಲ್ಲಿ ಅಂಗಡಿಗೆ ಸಾಮಾನು ಖರೀದಿಸಲೆಂದು ಬಂದ ಹಿಂದೂ ಮಹಿಳೆಯೋರ್ವಳಿಗೆ ಅಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕನೋರ್ವ, ಲೈಂಗಿಕ ಕಿರುಕುಳ ನೀಡಿದ ಘಟನೆ‌ ನಡೆದಿದೆ. ಈ ನೀಚ ಕೃತ್ಯ ಅಂಗಡಿ ಮಾಲಕನಿಲ್ಲದ ಸಂದರ್ಭದಲ್ಲಿ ನಡೆದಿದೆ.

ಸೆ.14ರಂದು ಅಂದರೆ ಇಂದು ಸರ್ವೆ ನೇರೋಳ್ತಡ್ಕದ ಮಹಿಳೆಯೋರ್ವರು ಸಂಜೆ ಸಮಯದಲ್ಲಿ ತಿಂಗಳಾಡಿಯಲ್ಲಿರುವ ಸುಪರ್ ಬಝಾರ್ ಅಂಗಡಿಗೆಂದು ಬಂದಿದ್ದರು. ಸಾಮಾನು ಖರೀದಿಸಲೆಂದು ಬಂದ ಮಹಿಳೆ, ಸಾಮಾನು ಖರೀದಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ, ಅಂಗಡಿ ಮಾಲಕ ಹಮೀದ್ ಪಟ್ಟೆ ಚಹಾ ಕುಡಿಯಲೆಂದು ಹೊರಗಡೆ ಹೋಗಿದ್ದರು.

ಆವಾಗ ಅಂಗಡಿಯಲ್ಲಿದ್ದ ಸೊರಕೆ ಓಲೆಮುಂಡೋವು ಸಮೀಪದ ಬದ್ರುದ್ದೀನ್ ಯಾನೆ ಬದ್ರು ಎಂಬಾತ ಮಹಿಳೆಯ ಮೈಮೇಲೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ್ದ. ಈ ವೇಳೆ ಮಹಿಳೆ ಬೊಬ್ಬೆ ಹೊಡೆದ ಪರಿಣಾಮ ಅಲ್ಲಿ ಜನ ಸೇರಿದ್ದಾರೆ. ಕೂಡಲೇ ಆರೋಪಿ ಬದ್ರುದ್ದೀನ್ ಯಾನೆ ಬದ್ರು ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಘಟನೆ ಸುದ್ದಿಯಾಗುತ್ತಲೇ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಹಿಂದೂ ಯುವಕರು ಸ್ಥಳದಲ್ಲಿ ಜಮಾಯಿಸಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು, ನೆರೆದವರು ಪೊಲೀಸರನ್ನು ಆಗ್ರಹಿಸಿದ್ದು ಸೆ.15ರ ಬೆಳಿಗ್ಗೆ 8 ಗಂಟೆಯೊಳಗೆ ಆರೋಪಿಯನ್ನು ಬಂಧಿಸದೇ ಇದ್ದಲ್ಲಿ ಉಗ್ರ ರೀತಿಯ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.

Leave A Reply

Your email address will not be published.