Bigg Boss Kannada Season 9 : ಕಿಚ್ಚ ಸುದೀಪ್ ಅವರಿಂದ ಬಿಗ್ ಬಾಸ್ ಒಟಿಟಿ ಸ್ಪರ್ಧಿಗಳಿಗೆ ಭರ್ಜರಿ ಸಿಹಿ ಸುದ್ದಿ !!!ಏನದು? ವೆರಿ ಇಂಟೆರೆಸ್ಟಿಂಗ್ !!

‘ಬಿಗ್ ಬಾಸ್ ಒಟಿಟಿ’ (Bigg Boss OTT) ಸೀಸನ್ ಬಿಗ್ ಬಾಸ್ ವೀಕ್ಷಕರ ಪಾಲಿಗೆ ಹೊಸತಾದರೂ ಈ ಸೀಸನ್ ಸಾಕಷ್ಟು ಮಟ್ಟಿಗೆ ಗಮನ ಸೆಳೆದಿದೆ. ಇದೊಂದು ರೀತಿಯ ಹೊಸ ಅನುಭವ ಪ್ರೇಕ್ಷಕರಿಗೆ. ಟಿವಿಯಲ್ಲಿ ಪ್ರಸಾರ ಕಾಣದೆ ಕೇವಲ ವೂಟ್ ಒಟಿಟಿಯಲ್ಲಿ ದಿನದ 24 ಗಂಟೆ ಈ ಶೋ ವೀಕ್ಷಿಸುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಲಾಗಿತ್ತು.

 

ಈಗ ಬಿಗ್ ಬಾಸ್ ಟಿವಿ ಸೀಸನ್ ಗೆ ದಿನಗಣನೆ ಶುರುವಾಗಿದೆ. ‘ಬಿಗ್‌ ಬಾಸ್ ಕನ್ನಡ ಸೀಸನ್ 9’ ಯಾವಾಗ ಎಂಬ ಬಗ್ಗೆ ಘೋಷಣೆ ಆಗಿದೆ. ಇದರ ಜತೆಗೆ ಒಟಿಟಿ ಮಂದಿಗೆ ಸರ್‌ಪ್ರೈಸ್ ಒಂದು ದೊರಕಿದೆ.
‘ಬಿಗ್ ಬಾಸ್’ ಮನೆಯಲ್ಲಿ ಸದ್ಯ 8 ಸ್ಪರ್ಧಿಗಳು ಬಂಧಿಯಾಗಿದ್ದಾರೆ. ಒಟಿಟಿ ಸೀಸನ್ ಮುಗಿಯುತ್ತಿದ್ದ ತಕ್ಷಣ ಟಿವಿ ಸೀಸನ್ ಆರಂಭ ಆಗಲಿದೆ ಎಂದು ಈ ಮೊದಲು ಘೋಷಣೆ ಆಗಿತ್ತು. ಆದರೆ, ಈಗ ಆ ರೀತಿ ಮಾಡುತ್ತಿಲ್ಲ. ಒಂದು ವಾರ ಗ್ಯಾಪ್‌ನ ನಂತರದಲ್ಲಿ ಟಿವಿ ಸೀಸನ್ ಆರಂಭ ಆಗಲಿದೆ. ಒಟಿಟಿಯಿಂದ ನಾಲ್ಕು ಸ್ಪರ್ಧಿಗಳು ಟಿವಿ ಸೀಸನ್‌ಗೆ ತೆರಳುತ್ತಾರೆ. ಒಟಿಟಿಯಿಂದ ಟೀವಿ ಸೀಸನ್ ಹೋಗುವ ಮುನ್ನ ನಾಲ್ಕು ಸ್ಪರ್ಧಿಗಳಿಗೆ ಒಂದು ವಾರ ಗ್ಯಾಪ್ ಸಿಗಲಿದೆ. ಇದು ಒಟಿಟಿಯಿಂದ ಟಿವಿ ಪರದೆಗೆ ಹೋಗುವವರಿಗೆ ನಿಜಕ್ಕೂ ಖುಷಿಯ ವಿಚಾರ ಎಂದೇ ಹೇಳಬಹುದು.

ಈ ಬಾರಿ ಟಿವಿ ಬಿಗ್ ಬಾಸ್ ಹೊಸ ರೀತಿಯಲ್ಲಿ ಮೂಡಿ ಬರಲಿದೆ. ಈ ಮೊದಲು ಬಿಗ್ ಬಾಸ್‌ನಲ್ಲಿ ಆಡಿದಂತಹ ಸ್ಪರ್ಧಿಗಳಾದ ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ ಮೊದಲಾದ ಸ್ಪರ್ಧಿಗಳು ದೊಡ್ಡನೆಗೆ ಮತ್ತೆ ರೀ ಎಂಟ್ರಿ ಕೊಡುತ್ತಿದ್ದಾರೆ. ಸೆಪ್ಟೆಂಬರ್ 24ರಂದು ಸಂಜೆ 6 ಗಂಟೆಗೆ ಬಿಗ್ ಬಾಸ್ ಆರಂಭ ಆಗಲಿದೆ. ವೀಕ್ಷಕರಲ್ಲಿ ನಿಜಕ್ಕೂ ಕುತೂಹಲ ಹೆಚ್ಚಾಗಿದೆ.

Leave A Reply

Your email address will not be published.