Acidity : ಹೊಟ್ಟೆ ಉಬ್ಬರದ ಸಮಸ್ಯೆ ಅಥವಾ ಆಸಿಡಿಟಿಯಾ ಸಮಸ್ಯೆ ಗೆ ಈ ಸಿಂಪಲ್ ಮನೆ ಮದ್ದುಗಳನ್ನು ಟ್ರೈ ಮಾಡಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಫಾಸ್ಟ್ ಫುಡ್, ಬೇಕರಿ ಉತ್ಪನ್ನಗಳನ್ನು ಹೆಚ್ಚಾಗಿ ತಿನ್ನುವುದರಿಂದ ಆರೋಗ್ಯದಲ್ಲಿ ವ್ಯತ್ಯಯವಾಗಿ ಹೊಟ್ಟೆಯುಬ್ಬರದಂತಹ ಸಮಸ್ಯೆಗಳು ಉದ್ಭವಿಸುತ್ತಿದೆ. ಆರೋಗ್ಯದಲ್ಲಿ ವ್ಯತ್ಯಾಸಗಳಾದಾಗ ನಿರ್ಲಕ್ಷ್ಯ ಧೋರಣೆ ತೋರಿದರೆ ಬೇರೆ ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಹಾಗಾಗಿ ಜಾಗ್ರತೆ ವಹಿಸುವುದು ಅಗತ್ಯ.

 

ನಾವು ಸೇವಿಸಿದ ಆಹಾರವನ್ನು ಪಚನ ಮಾಡಲು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇದು ಆಹಾರವನ್ನು ವಿಭಜಿಸುವ ಮೂಲಕ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಇದರಿಂದ ಮುಂದೆ ಸಣ್ಣ ಕರುಳು, ಯಕೃತ್ತು ಸ್ರವಿಸುವ ರಸಗಳು ಪಚನವನ್ನು ಮುಂದುವರಿಸುತ್ತವೆ. ಊಟದಲ್ಲಿರುವ ಸಾರಾಂಶವನ್ನು ದೇಹಕ್ಕೆ ಹೀರಿಕೊಂಡು, ತ್ಯಾಜ್ಯ ವಸ್ತುವನ್ನು ಮುಂದೆ ತಳ್ಳುತ್ತವೆ. ಮತ್ತೆ ದೊಡ್ಡ ಕರುಳಿನ ಗ್ರಂಥಿಗಳು ತ್ಯಾಜ್ಯ ವಸ್ತುವಿನಲ್ಲಿನ ನೀರಿನಾಂಶವನ್ನು ಹೀರಿಕೊಂಡು ಮಲವನ್ನು ಗಟ್ಟಿಗೊಳಿಸುತ್ತವೆ. ಇದು ಸಕಾಲಿಕವಾಗಿ ದೇಹದಿಂದ ಹೊರಹೋಗುತ್ತದೆ. ಈ ಇಡೀ ಪ್ರಕ್ರಿಯೆಯಲ್ಲಿ ಆಗುವ ವ್ಯತ್ಯಾಸವೇ ಸಮಸ್ಯೆ ತಂದೊಡ್ಡುತ್ತದೆ.

ಹೊಟ್ಟೆ ಉಬ್ಬರವು ಜಠರದ ಗ್ರಂಥಿಗಳಲ್ಲಿ ಈ ಆಮ್ಲವನ್ನು ನೈಸರ್ಗಿಕವಾಗಿ ಉತ್ಪಾದಿಸುತ್ತದೆ. ಆಲ್ಕೋಹಾಲ್, ಒತ್ತಡ ಅಥವಾ ಬದಲಾದ ಆಹಾರ ಕ್ರಮದಿಂದ ಆಮ್ಲವು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ಆಮ್ಲೀಯತೆ ಉಂಟಾಗುತ್ತದೆ. ಇದನ್ನು ಆಸಿಡಿಟಿ ಎಂದು ಕರೆಯಲಾಗುತ್ತದೆ.

ಹೊಟ್ಟೆ ಉಬ್ಬುವಿಕೆಗೆ ಹಲವು ಕಾರಣಗಳಿವೆ. ಅಸಿಡಿಟಿ, ಅಜೀರ್ಣ ಸಮಸ್ಯೆ, ಉದರ ಮತ್ತು ಕರುಳಿನ ಕಾಯಿಲೆಗಳು. ಅಲ್ಲದೇ ಕೆಲ ಆಹಾರದಿಂದ ಮಲಬದ್ಧತೆ ಹಾಗೂ ಅಜೀರ್ಣ ಸಮಸ್ಯೆಯೂ ಉಂಟಾಗಬಹುದು. ಕೆಲವರಿಗೆ ಆಹಾರ ಸೇವಿಸಲು ಮನಸ್ಸು ಆಗದೆ ಇರುವುದೂ ಕೆಲವೊಂದು ಬಾರಿ ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಇದ್ದವರಲ್ಲಿ ಹೊಟ್ಟೆ ಉಬ್ಬರ, ಅತಿಯಾದ ತೇಗು, ಗುದದ್ವಾರದಿಂದ ವಾಯು ಹೊರಬರುವುದು, ಹೊಟ್ಟೆ ಹಿಂಡಿದಂತೆ ನೋವು, ಎದೆಯುರಿ, ಮಲ ವಿಸರ್ಜನೆಯಲ್ಲಿ ತೊಂದರೆ, ಹಸಿವಿನ ತೊಂದರೆ ಇರುತ್ತದೆ.

ಈ ಸಮಸ್ಯೆ ಇಷ್ಟಕ್ಕೆ ಇದ್ದರೆ ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ನಿಯಂತ್ರಣಕ್ಕೆ ತಂದುಕೊಳ್ಳಬಹುದು. ಜಂಕ್‌ ಫುಡ್‌, ಮೈದಾದಿಂದ ತಯಾರಿಸಿದ ಆಹಾರ, ಅಂಗಡಿಗಳಲ್ಲಿ ಸಿಗುವ ಪ್ಯಾಕಿಂಗ್‌ ಫುಡ್‌ಗಳ ಸೇವನೆ, ನೂಡಲ್ಸ್‌, ಅತಿಯಾದ ಮಾಂಸದ ಸೇವನೆ ಜೀರ್ಣಕ್ರಿಯೆ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಇದರಿಂದ ಮಲ ಹೊರಗೆ ಹೋಗದೆ ಗ್ಯಾಸ್ ರೂಪದಲ್ಲಿ ಹೊಟ್ಟೆ ಉಬ್ಬುವಿಕೆಗೆ ಕಾರಣವಾಗಬಹುದು.

ಪರಿಹಾರ : ನಿಯಮಿತ ವ್ಯಾಯಾಮ ಮತ್ತು ಯೋಗ ಕೂಡ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಹಿತಮಿತವಾದ ಬೆಲ್ಲದ ಸೇವನೆಯಿಂದ ಜೀರ್ಣಕ್ರಿಯೆಗೆ ಸಹಕರಿಸಿ ಆಮ್ಲೀಯತೆ ಕಡಿಮೆಗೊಳಿಸುತ್ತದೆ. ಪ್ರತಿದಿನ ಆಹಾರ ಸೇವಿಸಿದ ನಂತರ ಏಲಕ್ಕಿ ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ದಾಲ್ಚಿನ್ನಿ ಸೇವನೆ ಹೊಟ್ಟೆಯ ಆಮ್ಲೀಯತೆಗೆ ನೈಸರ್ಗಿಕ ಆಂಟಾಸಿಡ್ ಆಗಿ ಕಾರ್ಯನಿರ್ವಹಿಸಿ, ಜೀರ್ಣಕ್ರಿಯೆ ಸರಾಗವಾಗಲು ಸಹಕರಿಸುತ್ತದೆ.

ನೀರು ಮಜ್ಜಿಗೆ, ಪುದೀನಾ ಎಲೆಗಳ ಚಹಾ ,ಮಜ್ಜಿಗೆಗೆ ಹಿಂಗು, ಕರಿಬೇವು ಸೇರಿಸಿ ಕುಡಿದರೆ ಹೊಟ್ಟೆಯ ನುಲಿತ ಕಡಿಮೆಯಾಗುತ್ತದೆ. ನೆಲ್ಲಿಕಾಯಿ ಪುಡಿಯನ್ನು ಮಜ್ಜಿಗೆಯಲ್ಲಿ ಸೇರಿಸಿ ಕುಡಿಯುವುದರಿಂದಲೂ ಹೊಟ್ಟೆಯುಬ್ಬರ ಕಡಿಮೆ ಯಾಗುತ್ತದೆ. ತುಳಸಿ ಎಲೆಗಳ ಹಿತವಾದ ಮತ್ತು ಕಾರ್ಮಿನೇಟಿವ್ ಗುಣಲಕ್ಷಣಗಳಿಂದ ಆಮ್ಲೀಯತೆಯಿಂದ ತ್ವರಿತ ಪರಿಹಾರವನ್ನು ಪಡೆಯಬಹುದು.

ನಿಯಮಿತ ಪ್ರಮಾಣದಲ್ಲಿ ಶುಚಿಯಾದ ಆಹಾರ ಮತ್ತು ನೀರಿನ ಸೇವನೆ ಮಾಡುವುದು ಉತ್ತಮ. ಕರಿದ ಕುರುಕಲು ತಿಂಡಿಗಳು, ಸೋಡಾ ಬಳಸಿರುವಂತಹ ಆಹಾರ ಸೇವನೆ ಮೈದಾ ಹೆಚ್ಚಿರುವ ಆಹಾರಗಳ ಸೇವನೆ ಕಡಿಮೆ ಮಾಡಿ, ಆರೋಗ್ಯದ ಕಾಳಜಿ ಮಾಡುವುದು ಒಳಿತು.

Leave A Reply

Your email address will not be published.