‘ಮಗಳು ಜಾನಕಿ’ ಧಾರಾವಾಹಿ ಖ್ಯಾತಿಯ ರವಿ ಮಂಡ್ಯ ನಿಧನ
ಬೆಂಗಳೂರು : ಮಗಳು ಜಾನಕಿ ಖ್ಯಾತಿಯ ಹಿರಿಯ, ಪ್ರತಿಭಾನ್ವಿತ ಕಲಾವಿದ ರವಿಪ್ರಸಾದ್ ಮಂಡ್ಯ ಅವರು ವಿಧಿವಶರಾಗಿದ್ದಾರೆ. ರವಿಯವರ ತಂದೆ ಡಾ. ಮುದ್ದೇಗೌಡರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಿರುತೆರೆ ಚಿತ್ರರಂಗದ ಪ್ರಸಿದ್ಧ ಕಲಾವಿದ ರವಿ ಮಂಡ್ಯ ನಿಧನರಾಗಿದ್ದಾರೆ. ಅಲ್ಪ ಕಾಲದ ಅಸೌಖ್ಯದಿಂದ ಬಿಜಿಎಸ್ ಹಾಸ್ಪಿಟಲ್ ನಲ್ಲಿ ದಾಖಲಾಗಿದ್ದ ಇವರು ಇಂದು ನಿಧನರಾಗಿದ್ದಾರೆ. ನಿಧನದ ಸುದ್ದಿ ಕೇಳಿದ ನಿರ್ದೇಶಕ ಟಿ ಎನ್ ಸೀತಾರಾಮ್ ಅವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಬೆಂಗಳೂರು ಬಿಜಿಎಸ್ ನಿಂದ ಮಂಡ್ಯಕ್ಕೆ ಶರೀರ ರವಾನೆಗೆ ಸಿದ್ಧತೆ ಮಾಡಲಾಗುತ್ತಿದೆ. ಅಂತಿಮ ದರ್ಶನ ಹಾಗೂ ಅಂತಿಮ ಕ್ರಿಯೆ ಮಂಡ್ಯದಲ್ಲಿ ನಡೆಯಲಿದೆ.
ಇವರು ಮಿಂಚು, ಮುಕ್ತ ಮುಕ್ತ, ಚಿತ್ರಲೇಖ ,ಯಶೋದೆ ,ವರಲಕ್ಷ್ಮಿ ಸ್ಟೋರ್ಸ್ ಮುಂತಾದ ಧಾರವಾಹಿಗಳಲ್ಲಿ ನಟಿಸಿದ್ದಾರೆ.
ಟಿ.ಎನ್.ಸೀತಾರಾಮ್ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಮಂಡ್ಯ ರವಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ರಾಜಕಾರಣಿ ಚಂದು ಭಾರ್ಗಿ ಪಾತ್ರಕ್ಕೆ ಮಂಡ್ಯ ರವಿ ಅವರು ಜೀವ ತುಂಬಿದ್ದರು. ರಂಗಭೂಮಿ, ಸಿನಿಮಾ ಹಾಗೂ ಚಲನಚಿತ್ರರಂಗದಲ್ಲಿ ಮಂಡ್ಯ ರವಿ ಗುರುತಿಸಿಕೊಂಡಿದ್ದಾರೆ.