ಪತ್ನಿಯ ಗುಪ್ತಾಂಗಕ್ಕೆ ಫೆವಿಕ್ವಿಕ್ ಗಮ್ ತುಂಬಿಸಿ ಮುಚ್ಚಿದ ಪತಿ

ಮಧ್ಯಪ್ರದೇಶದ ಶಿಯೋಪುರದ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯೊಬ್ಬ ಮೃಗೀಯ ವರ್ತನೆ ತೋರಿದ್ದಾನೆ. ತನ್ನ ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್ ಗಮ್ ತುಂಬಿಸಿ ಮುಚ್ಚಿದ್ದಾನೆ.

 

ಸೇನ್ ನ ಈ ಮಾದಕ ವ್ಯಸನಿ  ಹೀಗಾಗಿ ಮನೆಯಲ್ಲಿ ಗಂಡ ಹೆಂಡತಿ ನಡುವೆ ಆಗಾಗ ಜಗಳಗಳು ನಡೆಯುತ್ತಿತ್ತು.
ಮೊನ್ನೆ ಸೇನ್ ನ ನಶೆ ಮಿತಿ ಮೀರಿತ್ತು. ಮತ್ತಷ್ಟು ಅಮಲೇರಿಸಿಕೊಳ್ಳಲು ಆತ ಹೆಂಡತಿಯ ಬಳಿ ಹಣ ನೀಡುವಂತೆ ಕೇಳಿದ್ದಾನೆ. ಪತ್ನಿ ಕೊಡದೆ ಇದ್ದಾಗ ಮತ್ತಷ್ಟು ಪೀಡಿಸಿದ್ದಾನೆ. ಕೊನೆಗೆ ಪತ್ನಿಯ ಕೈ ಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದಾನೆ. ಇದಾದ ಬಳಿಕ‌ ಪತ್ನಿಯ ಜನನಾಂಗಕ್ಕೆ  ಫೆವಿಕ್ವಿಕ್ ಗಮ್ ಹಾಕಿದ್ದಾನೆ.

ಈ ಘಟನೆಯಿಂದ ನೋವು ತಾಳಲು ಸಾಧ್ಯವಾಗದೆ ಪತ್ನಿ ಜೋರಾಗಿ ಕಿರುಚಿದ್ದಾಳೆ.‌ ಆಗ ನೆರೆಹೊರೆಯವರು ಆಕೆಯ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ‌ಪಾಪಿ ಪತಿ ಮಾಡಿದ ಕೃತ್ಯ ಕಂಡು ಒಮ್ಮೆ ಬೆಚ್ಚಿ ಬಿದ್ದಿದ್ದಾರೆ. ಗಮ್ ಹಾಕಿರುವ ವಿಚಾರ ಗೊತ್ತಾಗುತ್ತಿದಂತೆ‌ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಮಾನುಷವಾಗಿ ವರ್ತಿಸಿದ ಪತಿ ಈಗ ಪೊಲೀಸರ ಅತಿಥಿ.

Leave A Reply

Your email address will not be published.