ರೈತರ ಖಾತೆಗೆ ಬೆಳೆ ಪರಿಹಾರ ಜಮಾ: ಬಹು ವಾರ್ಷಿಕ ಬೆಳೆಗೆ 28 ಸಾವಿರ ರೂ., ಒಣ ಭೂಮಿ 13,500 ರೂ., ನೀರಾವರಿ 25 ಸಾವಿರ ರೂ., ಬೆಳೆ ಪರಿಹಾರ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು,
ರಾಜ್ಯದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾಗಿದ್ದರ ಕುರಿತು ಇನ್ನೆರಡು ದಿನಗಳಲ್ಲಿ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ( CM Basavaraja Bommai) ಅವರು 1.04 ಲಕ್ಷ ಇತ್ತು ಬೆಳೆ ಹಾನಿಯಾದ ಸಮೀಕ್ಷೆಯ ವರದಿಯಾಗಿದ್ದು, 116 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂಬ ಮಾತನ್ನು ಹೇಳಿದ್ದಾರೆ.

ರಾಷ್ಟ್ರೀಯ ವಿಪತ್ತು ಪರಿಹಾರ ಮಾರ್ಗಸೂಚಿಯ ಪರಿಹಾರದೊಂದಿಗೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪರಿಹಾರ ನೀಡಲಾಗುವುದು, ಇನ್ನೆರಡು ದಿನಗಳಲ್ಲಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿ, ಒಣ ಭೂಮಿಗೆ 13500 ರೂ., ನೀರಾವರಿಗೆ 25,000 ರೂ., ಬಹುವಾರ್ಷಿಕ ಬೆಳೆಗೆ 28,000 ರೂ. ಹೆಕ್ಟೇರ್ ಗೆ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಳೆಯಾಶ್ರಿತ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ ಗೆ ಎನ್.ಡಿ.ಆರ್.ಎಫ್. ನಿಯಮದ ಅನುಸಾರ ಒಣ ಭೂಮಿಗೆ ಹೆಕ್ಟೇರ್ ಗೆ 10,800 ರೂ. ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿಗಾಗಿ 6,800 ರೂ. ಸೇರಿಸಿ 13,500 ರೂ. ನೀಡಲಾಗುವುದು. ನೀರಾವರಿ ಜಮೀನಿನ ಬೆಳೆ ಹಾನಿಗೆ ಎನ್.ಡಿ.ಆರ್.ಎಫ್. ನಿಯಮದ ಪ್ರಕಾರ 13,500 ಮತ್ತು ರಾಜ್ಯ ಸರ್ಕಾರದ 11,500 ಸೇರಿ 25,000 ರೂ. ನೀಡಲಾಗುವುದು. ಬಹು ವಾರ್ಷಿಕ ಬೆಳೆ ಪ್ರತಿ ಹೆಕ್ಟೇರ್ ಗೆ ಎನ್.ಡಿ.ಆರ್.ಎಫ್. 18,000 ರೂ. ಜೊತೆಗೆ ರಾಜ್ಯ ಸರ್ಕಾರದಿಂದ 10,000 ಸೇರಿ 28,000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

Leave A Reply

Your email address will not be published.