ಅಳುವಾಗ ಕಣ್ಣಿಂದ ನೀರಿನ ಬದಲು ರಕ್ತ ಬರುತ್ತೆ …ಯಾಕಾಗಿ? ಏನಿದು ಕಾಯಿಲೆ?

ನೀವು ಎಂದಾದರೂ ಊಹಿಸಿದ್ದೀರಾ ? ಮನುಷ್ಯ ಅಳುವಾಗ ಕಣ್ಣೀರಿನ ಬದಲು ರಕ್ತ ಬರುತ್ತೆ ಎಂದು ?ಯಾರೂ ಊಹಿಸೋಕೆ ಸಾಧ್ಯನೇ ಇಲ್ಲ. ಆದರೆ ನಿಜಕ್ಕೂ ಇದೊಂದು ತುಂಬಾ ಭಯಾನಕ ಸ್ಥಿತಿ. ಇದು ಹಿಮೋಲಾಕ್ರಿಯಾ ಎಂಬ ಅಪರೂಪದ ಸ್ಥಿತಿಯಾಗಿದೆ. ಈ ರೀತಿಯಾದರೆ ಇದನ್ನು ವಯಸ್ಸಿನ ಮೂಲಕ ತಿಳಿಯಬಹುದಾಗಿದೆ.

 

ಅನೇಕ ವೈಜ್ಞಾನಿಕ ಉದಾಹರಣೆಗಳನ್ನು ತಜ್ಞರು ನೀಡಿದರೂ, ಇತ್ತೀಚಿನವರೆಗೂ, ಜನರು ಈ ಕಾಯಿಲೆ ಯಾಕಾಗಿ ಉಂಟಾಗುತ್ತದೆ ಎಂಬುದು ತಿಳಿದುಬಂದಿಲ್ಲ ಎನ್ನಲಾಗಿದೆ.

ಈ ಸ್ಥಿತಿಯ ಸಂಭವದ ಹಿಂದೆ ಹಲವು ಕಾರಣಗಳಿವೆ ಎಂದು ವೈದ್ಯರು ಹೇಳುತ್ತಾರೆ. ಋತುಚಕ್ರದ (Menstruation) ಸಮಯದಲ್ಲಿ ಮಹಿಳೆಯರಲ್ಲಿ (Woman) ಹಾರ್ಮೋನುಗಳ ಬದಲಾವಣೆಗಳು ಸಾಮಾನ್ಯ. ಹೀಗಾಗಿ ಈ ರೀತಿಯ ರಕ್ತ ಕಣ್ಣೀರು (Blood tears) ಉಂಟಾಗುತ್ತದೆ ಎಂದು ತಜ್ಞರು (Expert) ಹೇಳುತ್ತಾರೆ. ಆದರೆ ಈ ಸ್ಥಿತಿಯು ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ.

ಬ್ಯಾಕ್ಟೀರಿಯಾ ಕಾಂಜಂಕ್ಟಿವಿಟಿಸ್, ಪರಿಸರ ಹಾನಿ ಮತ್ತು ಕಣ್ಣಿನ (Eyes) ಆಂತರಿಕ ಗಾಯಗಳಂತಹ ಸ್ಥಳೀಯ ಅಂಶಗಳಿಂದ ಹಿಮೋಲಾಕ್ರಿಯಾವು ಹೆಚ್ಚಾಗಿ ಈ ರಕ್ತ ಕಣ್ಣೀರು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಕಾಂಜಂಕ್ಟಿವಿಟಿಸ್ ಅನ್ನು ಹೊರತುಪಡಿಸಿ, ಕಣ್ಣೀರಿನ ನಾಳಗಳಲ್ಲಿ ಉಂಟಾಗುವ ಗೆಡ್ಡೆಗಳಿಂದಲೂ ಇಂಥಾ ಸಮಸ್ಯೆ ಉಂಟಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ಹಿಮೋಫಿಲಿಯಾ ದಂತಹ ರಕ್ತದ ಕಾಯಿಲೆಗಳು (Blood disease) ಹೆಪ್ಪುಗಟ್ಟುವಿಕೆಯಿಂದ ಅಧಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು. ಹಿಮೋಫಿಲಿಯಾದಿಂದ ಬಳಲುತ್ತಿರುವ ಜನರಲ್ಲಿ ಗಾಯವಾದಾಗ ಸುಲಭವಾಗಿ ರಕ್ತಸ್ತ್ರಾವವಾಗುತ್ತದೆ. ಹೆಚ್ಚಾಗಿ ಗಾಯಗಳು ಹಿಮೋಲಾಕ್ರಿಯಾಕ್ಕೆ ಕಾರಣವಾಗಬಹುದು ಎಂದು ವೈದ್ಯರು (Doctors) ಅಭಿಪ್ರಾಯ. ಇಂಥಾ ಪರಿಸ್ಥಿತಿಯು ಹೆಚ್ಚಿನ ಸಂದರ್ಭಗಳಲ್ಲಿ ತಲೆಗೆ ಗಾಯ (Head Injury), ಗೆಡ್ಡೆ, ರಕ್ತ ಹೆಪ್ಪುಗಟ್ಟುವಿಕೆ ಅಥವಾ ಸಾಮಾನ್ಯ ಸೋಂಕು ರಕ್ತಸಿಕ್ತ ಕಣ್ಣೀರನ್ನು ಉಂಟುಮಾಡುತ್ತದೆ.

ಆಸ್ಪಿರಿನ್ ಅಥವಾ ಹೆಪಾರಿನ್‌ನಂತಹ ಔಷಧಿಗಳ (Medicine) ಅತಿಯಾದ ಸೇವನೆ ಮಾಡಿದರೂ ಈ ರಕ್ತಕಣ್ಣೀರು ಬರೋ ಸಾಧ್ಯತೆ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಅಪರೂಪವಾಗಿದ್ದರೂ, ರಕ್ತ ಕಣ್ಣೀರು ಸಹ ಸಂಸ್ಕರಿಸದ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದೆ. ಹೆಚ್ಚಿನ ಸಂದರ್ಭಗಳಲ್ಲಿ ಅಧಿಕ ರಕ್ತದೊತ್ತಡವು ಅಧಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು.

Leave A Reply

Your email address will not be published.