ಭಾರತೀಯ ಮಾರುಕಟ್ಟೆಯಲ್ಲಿ 6 ವರ್ಷಗಳನ್ನು ಪೂರೈಸಿದ ರಿಲಯನ್ಸ್ ಜಿಯೋ | ತನ್ನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪರಿಚಯಿಸಿದೆ ಗ್ರಾಹಕರಿಗೆ ವಿಶೇಷ ಕೊಡುಗೆ

ದೇಶದ ಟೆಲಿಕಾಂ (Telecom) ವಲಯದಲ್ಲಿ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ (Airtel vs Jio vs Vi) ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಹೊಸ-ಹೊಸ ಆಫರ್ ಗಳನ್ನು ನೀಡುತ್ತಾ ಒಂದೊಂದು ಕಂಪನಿಗೆ ಚಾಲೆಂಜ್ ಹಾಕುತ್ತಾ ಮುನ್ನುಗ್ಗುತ್ತಲೇ ಇದೆ. ಅದರ ಜೊತೆಗೆ 5G ಸೇವೆ ನೀಡುವುದರಲ್ಲಿ ಕಂಪನಿ ಬ್ಯುಸಿಯಾಗಿದೆ. ಇದೀಗ ರಿಲಯನ್ಸ್ ಜಿಯೋ ಭಾರತೀಯ ಮಾರುಕಟ್ಟೆಯಲ್ಲಿ 6 ವರ್ಷಗಳನ್ನು ಪೂರೈಸಿದೆ.

 

ಹೀಗಾಗಿ, ಕಂಪನಿಯು ತನ್ನ ಆರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಪರಿಚಯಿಸಿದ್ದು, ಕಂಪನಿಯು ತನ್ನ ರೂ 2,999 ವಾರ್ಷಿಕ ಯೋಜನೆಯಲ್ಲಿ ಪ್ರಯೋಜನಗಳನ್ನು ಪ್ರಕಟಿಸಿದೆ. ರಿಲಯನ್ಸ್ ಜಿಯೋ ಯೋಜನೆಯನ್ನು ರೀಚಾರ್ಜ್ ಮಾಡಿದಾಗ 6 ಪ್ರಯೋಜನಗಳನ್ನು ನೀಡಲಾಗುವುದು.

ರಿಲಯನ್ಸ್ ಜಿಯೋ (Reliance Jio) ಪ್ರಯೋಜನಗಳನ್ನು ರೂ 2,999 ರ ವಾರ್ಷಿಕ ಯೋಜನೆಯಲ್ಲಿ ನೀಡಲಾಗುತ್ತದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ. ಹೀಗಾಗಿ, ಸಾಧ್ಯವಾದಷ್ಟು ಬೇಗ ಈ ಕೊಡುಗೆಯ ಲಾಭವನ್ನು ಪಡೆದುಕೊಳ್ಳಿ ಮತ್ತು ಪ್ರಯೋಜನಗಳನ್ನು ಪಡೆಯಿರಿ. ಆನ್ಲೈನ್ ಮತ್ತು ಆಫ್ಲೈನ್ ಚಾನಲ್ಗಳಿಂದ ರೀಚಾರ್ಜ್ ಮಾಡಬಹುದಾಗಿದೆ. ಅಲ್ಲದೆ ಇದರ ಅಡಿಯಲ್ಲಿ ಲಭ್ಯವಿರುವ ಡೇಟಾ ವೋಚರ್ಗಳು ಮತ್ತು ಕೂಪನ್ಗಳನ್ನು ವರ್ಗಾಯಿಸಲಾಗುವುದಿಲ್ಲ.

ಈ ರೂ 2,999 ಯೋಜನೆಯೊಂದಿಗೆ ನಿಮ್ಮ ಫೋನ್ ಅನ್ನು ರೀಚಾರ್ಜ್ ಮಾಡಿದ ನಂತರ ವೋಚರ್ಗಳು ಮತ್ತು ಕೂಪನ್ಗಳು MyJio ಅಪ್ಲಿಕೇಶನ್ನಲ್ಲಿ ನಿಮ್ಮ ವೈಯಕ್ತಿಕ ಖಾತೆಯ My Coupons ಅಡಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇಲ್ಲಿಂದ ನೀವು ಈ ಕೂಪನ್ಗಳನ್ನು ಬಳಸಬಹುದು.

ರಿಲಯನ್ಸ್ ಜಿಯೋ ರೂ 2,999 ಯೋಜನೆಯ ಮಾನ್ಯತೆ 365 ದಿನಗಳು. ಇದರಲ್ಲಿ ದಿನಕ್ಕೆ 2.5 ಜಿಬಿ ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತಿದೆ. ಸಂಪೂರ್ಣ ಮಾನ್ಯತೆಯ ಅವಧಿಯಲ್ಲಿ ಬಳಕೆದಾರರಿಗೆ 912.5 GB ಡೇಟಾವನ್ನು ನೀಡಲಾಗುತ್ತದೆ. ಇದರೊಂದಿಗೆ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಸಹ ಒದಗಿಸಲಾಗುವುದು.ಇದಲ್ಲದೇ ದಿನಕ್ಕೆ 100 ಎಸ್‌ಎಂಎಸ್ ಕೂಡ ನೀಡಲಾಗುವುದು. ಅದೇ ಸಮಯದಲ್ಲಿ ಡಿಸ್ನಿ + ಹಾಟ್ಸ್ಟಾರ್ಗೆ 1 ವರ್ಷದ ಚಂದಾದಾರಿಕೆಯನ್ನು ಸಹ ನೀಡಲಾಗುತ್ತಿದೆ. ಇದರೊಂದಿಗೆ JioTV, JioCinema, JioSecurity, JioCloud ಚಂದಾದಾರಿಕೆಯನ್ನು ಸಹ ನೀಡಲಾಗುತ್ತಿದೆ.

Leave A Reply

Your email address will not be published.