ಗಮನಿಸಿ | LPG ಬುಕ್ ಮಾಡಲು ಈ ನಾಲ್ಕು ಆಫರ್ ಉಪಯೋಗಿಸಿ, ಸಿಲಿಂಡರ್ ಕಮ್ಮಿ ದರದಲ್ಲಿ ಸಿಗುತ್ತೆ.!

Share the Article

ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಒಂದು ಸಿಹಿ ಸುದ್ದಿ. ಪ್ರತಿಯೊಬ್ಬ ವ್ಯಕ್ತಿಯು ಸಿಲಿಂಡರ್ ಬುಕಿಂಗ್ ಒಂದೊಂದು ವಿಧದಲ್ಲಿ ಮಾಡುತ್ತಾರೆ. ಕೆಲವರು ಫೋನ್ ಕರೆ ಮೂಲಕ ಬುಕಿಂಗ್ ಮಾಡುತ್ತಿದ್ದರೆ, ಇತರರು ಕಂಪನಿಯ ಅಪ್ಲಿಕೇಶನ್ ಮೂಲಕ ಸಿಲಿಂಡರನ್ನು ಬುಕ್ ಮಾಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಪೇಟಿಎಂ, ಗೂಗಲ್ ಪೇ ಮತ್ತು ಇತರ ಅಪ್ಲಿಕೇಶನ್‌ಗಳ ಮೂಲಕ ಬುಕಿಂಗ್ ಮಾಡುತ್ತಿದ್ದಾರೆ. ಆದಾಗ್ಯೂ, ನೀವು ಅದನ್ನ ವಿಭಿನ್ನವಾಗಿ ಕಾಯ್ದಿರಿಸಿದ್ರೆ, ಆಫರ್ ಇರುತ್ತದೆ. ಹೇಗೆ ಎಂದು ಈ ಕೆಳಗಿನ ಮಾಹಿತಿಯಲ್ಲಿ ನೀಡಲಾಗಿದೆ.

ನೀವು ಬಜಾಜ್ ಫಿನ್ಸರ್ವ್ ಅಪ್ಲಿಕೇಶನ್ ಮೂಲಕ ಸಿಲಿಂಡರ್ ಕಾಯ್ದಿರಿಸಿದ್ರೆ, ನಿಮಗೆ 70 ರೂ.ಗಳವರೆಗೆ ಕ್ಯಾಶ್ ಬ್ಯಾಕ್ ಲಭ್ಯವಿರುತ್ತದೆ. ನೀವು ಬಜಾಜ್ ಪೇ ಯುಪಿಐ ಮೂಲಕ ಗ್ಯಾಸ್ ಸಿಲಿಂಡರ್‌ಗೆ ಪಾವತಿಸಿದರೆ ಈ ಕೊಡುಗೆಯನ್ನು ಪಡೆಯಬಹುದು. ವಿದ್ಯುತ್ ಬಿಲ್, ಮೊಬೈಲ್ ರೀಚಾರ್ಜ್ ಮತ್ತು ಡಿಟಿಎಚ್ ರೀಚಾರ್ಜ್‌’ಗೆ ಸಹ ಆಫರ್’ಗಳಿವೆ. ಇವುಗಳ ಮೇಲೆ 230ರೂ.ಗಳವರೆಗೆ ಕ್ಯಾಶ್ ಬ್ಯಾಕ್ ಬರುತ್ತದೆ.

ಹೀಗಾದಲ್ಲಿ ನೀವು ಪೇಟಿಎಂನಲ್ಲಿ ಸಿಲಿಂಡರ್ ಬುಕಿಂಗ್‌ನಲ್ಲಿ ಕೊಡುಗೆಗಳನ್ನಯ ಸಹ ಪಡೆಯಬಹುದು. ಇದರಲ್ಲಿ ನೀವು 10 ರಿಂದ 1,000 ರೂ.ಗಳ ಕ್ಯಾಶ್ ಬ್ಯಾಕ್ ಪಡೆಯಬಹುದು. ಈ ಕೊಡುಗೆಯನ್ನು ಪಡೆಯಲು ಗ್ಯಾಸ್ 1000 ಪ್ರೋಮೋ ಕೋಡ್’ನ್ನ ಬಳಸಬೇಕು. ಅಂತೆಯೇ, ನೀವು ಪಿಎನ್ಬಿ ಕ್ರೆಡಿಟ್ ಕಾರ್ಡ್ ಮೂಲಕ ಸಿಲಿಂಡರ್ ಕಾಯ್ದಿರಿಸಿದರೆ, ನೀವು 30 ರೂಪಾಯಿ ಪಡೆಯಬಹುದು. ಇದಕ್ಕಾಗಿ ನೀವು ಫ್ರೀಗಾಸ್ ಎಂಬ ಪ್ರೋಮೋ ಕೋಡ್’ನ್ನು ಬಳಸಬೇಕು.

Leave A Reply