“ನಾನು ಅತ್ಯಂತ ಸುಂದರವಾಗಿದ್ದೇನೆಂದು ನನ್ನನ್ನು ಏರ್ ಪೋರ್ಟ್ ನಲ್ಲಿ ಬಂಧಿಸಲಾಯಿತು”- ಅರೇ ಯಾರೀಕೆ?

ಎಷ್ಟೋ ಸುದ್ದಿಗಳನ್ನು ನಾವು ಓದಿದಾಗ, ಕೆಲವೊಂದು ಸುದ್ದಿಗಳು ಅಚ್ಚರಿ ಮೂಡಿಸಿದರೆ ಇನ್ನು ಕೆಲವು ನಗು ತರುತ್ತದೆ. ಹಾಗೇನೇ ಅಂತಹುದೇ ಒಂದು ಸುದ್ದಿ ನಿಜಕ್ಕೂ ನಮಗೇ ನಿಜಕ್ಕೂ ಇದು ನಗು ಬರಿಸುವಂತಹ ಸುದ್ದಿ ಎಂದೇ ಹೇಳಬಹುದು. ಅಮೆರಿಕಾದ ಲಾಸ್ ವೇಗಾಸ್ (Las Vegas) ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಇತ್ತೀಚೆಗೆ ರೆಸ್ಟೋರೆಂಟ್‌ನಿಂದ ಬಿಲ್ ಪಾವತಿಸದೆ ಪರಾರಿಯಾಗಿದ್ದಳು. ಹಾಗಾಗಿ ವಿಮಾನ ನಿಲ್ದಾಣದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಈ 28 ವರ್ಷದ ಯುವತಿಯನ್ನು ಪತ್ತೆಗೆ ಪೊಲೀಸರು ಸನ್ನದ್ಧರಾಗಿದ್ದತು. ಆದರೆ ಈ ಯುವತಿ ಈ ಪ್ರಕರಣವನ್ನು ತನಗೆ ಬೇಕಾದಂತೆ ತಿರುಚಿದ್ದು, ತಾನು ತುಂಬಾ ಸುಂದರವಾಗಿರುವುದರಿಂದ ತನ್ನನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡಿದ್ದಾಳೆ.

 

ವಾಸ್ತವವಾಗಿ, ಈ ಮಹಿಳೆ ವಿಮಾನ ನಿಲ್ದಾಣದಲ್ಲಿನ ಕೆಲವೊಂದು ನಿಯಮಗಳನ್ನು ಉಲ್ಲಂಘಿಸಿದ ಕಾರಣ ಲಾಸ್ ವೇಗಾಸ್ ಮೆಟ್ರೋಪಾಲಿಟನ್ ಪೋಲಿಸ್ ಘಟನಾ ಸ್ಥಳಕ್ಕೆ ಕರೆದಿದ್ದಾರೆ. ಆದರೆ, ಹೆಂಡ್ ಬುಸ್ತಮಿ ( 28ವ) ಎಂಬ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಹ್ಯಾರಿ ರೀಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಮಹಿಳೆಯನ್ನು ಪತ್ತೆ ಹಚ್ಚಿದ್ದಾರೆ.

ಕಟ್ಟ ಕಡೆಗೂ ಪೋಲೀಸರು 28 ವರ್ಷದ ಮಹಿಳೆಯನ್ನು ಲಗೇಜ್ ಕ್ರೈಮ್ ಪ್ರದೇಶದಲ್ಲಿ ಪತ್ತೆಹಚ್ಚಿದರು. ಆದರೆ, ಆಕೆ ಪೊಲೀಸರಿಗೆ ಸಹಕರಿಸದೆ ಗಲಾಟೆ ಮಾಡಿದ್ದಾಳೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆ ಯುವತಿ, ನಾನು ಬಹಳ ಸುಂದರವಾಗಿದ್ದರಿಂದ ನನ್ನನ್ನು ಬಂಧಿಸಿದ್ದಾರೆ. ಆ ಪೊಲೀಸರು ನನ್ನನ್ನು ನೋಡಿ ಜೊಲ್ಲು ಸುರಿಸುತ್ತಿದ್ದರು. ಅವರು ವಿಕೃತ ಮನಸ್ಥಿತಿಯವರಾಗಿದ್ದರು. ನನ್ನಷ್ಟು ಸುಂದರಿಯನ್ನು ಅವರು ಬೇರೆಲ್ಲೂ ನೋಡದ ಕಾರಣ ನನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಹೇಳಿದ್ದಾಳೆ.

Leave A Reply

Your email address will not be published.