ಪ್ರಾಣಿ ಪ್ರಿಯರೇ ಎಚ್ಚರ | ನಿಮಗೂ ಬರಬಹುದು ‘ರೇಬೀಸ್’ ಕಾಯಿಲೆ!
ಇಂದು ಸಾಕು ಪ್ರಾಣಿಗಳನ್ನು ಮುದ್ದಿಸುವವರ ಸಂಖ್ಯೆ ಅತಿಯಾಗಿಯೇ ಇದ್ದು, ಇದರಿಂದಲೇ ಮನುಷ್ಯರಿಗೂ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿದೆ. ಇದೀಗ ರೇಬೀಸ್ ಕಾಯಿಲೆ ಹರಡುತ್ತಿದ್ದು, ಬೀದಿ ನಾಯಿಗಳಷ್ಟೇ ಅಲ್ಲ, ಬೆಕ್ಕು, ನರಿ, ತೋಳ, ಮುಂಗುಸಿ ಕಚ್ಚದಾಗಲೂ ಮನುಷ್ಯನಲ್ಲಿ ರೇಬೀಸ್ ವೈರಸ್ ಕಂಡು ಬಂದಿದೆ.
ಅಷ್ಟೇ ಅಲ್ಲದೆ, ರೇಬೀಸ್ ವೈರಸ್ ಈ ಪ್ರಾಣಿಗಳಲ್ಲಿ ಜೀವಂತವಾಗಿದ್ದಾಗ ಕಚ್ಚಿದರೆ ಮನುಷ್ಯನಿಗೆ ರೇಬೀಸ್ ಕಾಯಿಲೆ ಬರುತ್ತದೆ. ಶೇ.98 ಪ್ರಕರಣಗಳಲ್ಲಿ ನಾಯಿ ಕಚ್ಚಿದಾಗಲೇ ರೇಬೀಸ್ ಕಾಣಿಸಿಕೊಳ್ಳುತ್ತದೆ. ಈ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಬೀದಿ ನಾಯಿಗಳು ಯಾರ ಮೇಲಾದರೂ ದಾಳಿ ಮಾಡಿ ಗಾಯಗೊಳಿಸಿದರೆ ಸಂತ್ರಸ್ಥರ ಖರ್ಚು-ವೆಚ್ಚಗಳನ್ನು ಆಹಾರ ಹಾಕುವವರೇ ಭರಿಸಬೇಕು ಎಂದು ಹೇಳಿದೆ.
ರೇಬೀಸ್ ವೈರಸ್ ರಕ್ತದ ಮೂಲಕ ದೇಹ ಪ್ರವೇಶಿಸುವುದಿಲ್ಲ. ಬದಲಾಗಿ ನರಗಳ ಮೂಲಕ ಸ್ಪೈನಲ್ ಕಾರ್ಡ್ ಸೇರಿ ಅಲ್ಲಿಂದ ಮಿದುಳಿಗೆ ತಲುಪುತ್ತದೆ. ರೋಗ ಲಕ್ಷಣ ಯಾವುವೂ ಕಂಡು ಬರುವುದಿಲ್ಲ. ಮಿದುಳಿಗೆ ವೈರಸ್ ತಲುಪಿದಾಗಲೇ ರೋಗ ಗೊತ್ತಾಗುತ್ತದೆ. ಆದರೆ ನಾಯಿ ಕಚ್ಚಿದ ಮಾತ್ರಕ್ಕೆ ಎಲ್ಲ ಪ್ರಕರಣಗಳೂ ರೇಬೀಸ್ ಆಗಿರುವುದಿಲ್ಲ. ಇದಕ್ಕೆ ಇದುವರೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಹಾಗಾಗಿ ಆಂಟಿ ರೇಬೀಸ್ ಮತ್ತು ರೇಬೀಸ್ ಇಮ್ಯೂನೋ ಗ್ಲಾಬಿನ್ ಲಸಿಕೆ ಪಡೆಯುವುದೇ ಸದ್ಯಕ್ಕಿರುವ ಮಾರ್ಗ. ನಾಯಿ ಕಚ್ಚಿದಾಗ ತಕ್ಷಣ ಎಚ್ಚರವಹಿಸಬೇಕು. ಸೂಕ್ತ ಚಿಕಿತ್ಸೆ ಪಡೆಯಲೇಬೇಕು.