WhatsApp ಬಳಕೆದಾರರಿಗೆ ಮತ್ತೊಂದು ಸೂಪರ್ ಅಪ್ಡೇಟ್ !!! ಏನದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಹೊಸ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿರುವ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಎಂದರೆ WhatsApp ಎಂದೇ ಹೇಳಬಹುದು. ಇತ್ತೀಚೆಗಂತೂ ತುಂಬಾ ಅಪ್ಡೇಟ್ಸ್ ಗಳನ್ನು ವಾಟ್ಸಪ್ ನೀಡಿದೆ. ಇದೀಗ ಮತ್ತೊಂದು ಬೆಸ್ಟ್ ಅಪ್‌ಡೇಟ್ ಒಂದನ್ನು ಒದಗಿಸಲು ಸಜ್ಜಾಗಿದೆ.

 

WhatsApp ಬೀಟಾ ಟ್ರ್ಯಾಕರ್ WABetalnfo ಪ್ರಕಟಿಸಿರುವ ಇತ್ತೀಚಿನ ವರದಿ ಪ್ರಕಾರ, WhatsApp ಬಳಕೆದಾರರು ತಮ್ಮ ಹಳೆಯ ಸಂದೇಶಗಳನ್ನು ಸುಲಭವಾಗಿ ಹುಡುಕಬಹುದಾದ ಹೊಸ ಫೀಚರ್ ಅನ್ನು ತರಲು ಮುಂದಾಗಿದೆ.

WhatsApp ಟೆಸ್ಟಫೈಟ್ ಬೀಟಾ ಪ್ರೋಗ್ರಾಂನಲ್ಲಿ ಇಂತಹದೊಂದು ನವೀಕರಣವನ್ನು ಪರೀಕ್ಷಿಸಲಾಗುತ್ತಿದ್ದು, ಇದರಿಂದ ವರ್ಷದ ಯಾವುದೇ ದಿನಾಂಕವನ್ನು ನಮೂದಿಸುವ ಮೂಲಕ ಹಳೆಯ WhatsApp ಸಂದೇಶಗಳನ್ನು ಸುಲಭವಾಗಿ ಹುಡುಕಬಹುದು ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಈ ಹೊಸ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದೆ ಮತ್ತು ಬೀಟಾ ಪರೀಕ್ಷಕರಿಗೂ ಸಹ ಲಭ್ಯವಾಗಿಲ್ಲ. ಆದರೆ, ಅಭಿವೃದ್ಧಿ ಹಂತದಲ್ಲಿರುವ ಈ ವೈಶಿಷ್ಟ್ಯದಿಂದ ಬಹುತೇಕ ಜನರಿಗೆ ಸಂದೇಶ ಹುಡುಕಾಡಲು ಸಹಾಯಕವಾಗಲಿದೆ ಎಂದು WABetalnfo ವರದಿಯು ತಿಳಿಸಿದೆ.

WABetalnfo ನೀಡಿರುವ ಮಾಹಿತಿಯಲ್ಲಿ, WhatsApp ಕ್ಯಾಲೆಂಡರ್ ಐಕಾನ್ ನೀಡಲಾಗುತ್ತದೆ. ಇದರಿಂದ ಬಳಕೆದಾರರು ತಮಗೆ ಬೇಕಾದ ದಿನಾಂಕ ಹೊಂದಿಸಿ, ಆ ದಿನದ ಸಂದೇಶಗಳನ್ನು ನೋಡಬಹುದೆಂದು ಹೇಳಲಾಗಿದೆ.

ಗೌಪ್ಯತೆ, ರಕ್ಷಣೆಗೆ ಹೆಚ್ಚಿನ ಭದ್ರತೆ ಒದಗಿಸುವ ದೃಷ್ಟಿಯಿಂದ, ಗೌಪ್ಯವಾಗಿ ಗ್ರೂಪ್‌ಗಳಿಂದ ನಿರ್ಗಮಿಸುವ, ಆನ್‌ಲೈನ್‌ನಲ್ಲಿರುವ ಬಗ್ಗೆ ನಿಯಂತ್ರಣ ಮತ್ತು ಒಮ್ಮೆ ಮಾತ್ರ ನೋಡಲು ಅನುಮತಿಸುವ ಸಂದೇಶಗಳು ಸೇರಿದಂತೆ ಈ ಹೊಸ ಮೂರು ವೈಶಿಷ್ಟ್ಯಗಳನ್ನು ಮಾರ್ಕ್ ಜುಕರ್‌ಬರ್ಗ್ ಅವರು ಇತ್ತೀಚಿಗಷ್ಟೇ ಘೋಷಣೆ ಮಾಡಿದ್ದು, ಅದನ್ನು ವಿಶ್ವದಾದ್ಯಂತ WhatsApp ಬಳಕೆದಾರರು ಸ್ವಾಗತಿಸಿದ್ದಾರೆ.

Leave A Reply

Your email address will not be published.