ತನ್ನ ಸಿಬ್ಬಂದಿಗಳನ್ನೇ ಲಾಕ್ ಅಪ್ ಗೆ ತಳ್ಳಿದ ಹಿರಿಯ ಅಧಿಕಾರಿ!! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!!

ಕರ್ತವ್ಯದಲ್ಲಿ ಲೋಪವೆಸಗಿದ್ದಾರೆ ಎನ್ನುವ ಕಾರಣಕ್ಕೆ ತನ್ನ ಕೆಳಗಿನ ಪೊಲೀಸ್ ಅಧಿಕಾರಿಗಳನ್ನು ಲಾಕ್ಅಪ್ ನಲ್ಲಿ ಕೂಡಿಹಾಕಿದ ಅಪರೂಪದ ಘಟನೆಯೊಂದು ಬಿಹಾರದಲ್ಲಿ ನಡೆದಿದ್ದು, ಈ ಬಗೆಗಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಬಿಹಾರದ ನವಾಡ ಜಿಲ್ಲಾ ಪೊಲೀಸ್ ಅಧಿಕ್ಷಕ ಗೌರವ್ ಮಂಗ್ಲಾ ಅವರೇ ಈ ರೀತಿಯ ಶಿಕ್ಷೆ ವಿಧಿಸಿ ಸಿಬ್ಬಂದಿಗಳ ಹಾಗೂ ಪೊಲೀಸ್ ಇಲಾಖೆಯ ಕೆಂಗಣ್ಣಿಗೆ ಗುರಿಯಾದ ಅಧಿಕಾರಿಯಾಗಿದ್ದಾರೆ.

ಕಳೆದ ರಾತ್ರಿ ಅನಿರೀಕ್ಷಿತವಾಗಿ ಠಾಣೆಗೆ ಆಗಮಿಸಿದ್ದ ವೇಳೆ ಕಿರಿಯ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದು, ಇದರಿಂದ ಕೋಪಗೊಂಡ ಎಸ್ಪಿ ತಪ್ಪು ಮಾಡಿದವರನ್ನು ಲಾಕ್ಅಪ್ ನಲ್ಲಿರಿಸಲು ಸೂಚಿಸಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಎಸ್.ಐ ಸಹಿತ ಐವರನ್ನು ಲಾಕ್ ಅಪ್ ನಲ್ಲಿರಿಸಲಾಗಿತ್ತು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

Leave A Reply

Your email address will not be published.