ರಕ್ತದಲ್ಲಿ ಪೇಂಟಿಂಗ್ ಗಿಫ್ಟ್ ಕೊಟ್ಟ ಅಭಿಮಾನಿಗೆ ‘ ರಕ್ತ ಹಾಳ್ ಮಾಡ್ಬೇಡ್ವೋ ‘ ಎಂದು ಖಡಕ್ ವಾರ್ನಿಂಗ್ ಕೊಟ್ಟ ಸೋನು ಸೂದ್

ನಟ ಸೋನು ಸೂದ್  ತೆರೆಯ ಮೇಲೆ ಅಷ್ಟೇ ಹೀರೋ ಅಲ್ಲ, ತೆರೆಯ ಹಿಂದೆ ಕೂಡ ರಿಯಲ್ ಹೀರೋ ಎಂಬುದನ್ನ ಈಗಾಗಲೇ ಪ್ರೂವ್ ಮಾಡಿದ್ದಾರೆ. ಇದೀಗ ಮತ್ತೆ ಅದನ್ನು ಪ್ರೂವ್ ಮಾಡಿದ್ದಾರೆ.
ಕೊರೊನಾ ಸಮಯದಲ್ಲಿ ಜನರಿಗೆ ಸೋನು ಸೂದ್ ಸಹಾಯ ಮಾಡಿ, ಸಾಕಷ್ಟು ಅಭಿಮಾನಿಗಳ ಮನ ಗೆದ್ದಿದ್ದರು. ಇದೀಗ ತನ್ನ ಪ್ರೀತಿಯ ನಟನಿಗೆ ಅಭಿಮಾನಿ ಒಬ್ಬ ರಕ್ತದಿಂದ ಬರೆದ ಪೇಂಟಿಂಗ್ ರಚಿಸಿ ಗಿಫ್ಟ್ ಕೊಟ್ಟಿದ್ದಾನೆ. ಅಭಿಮಾನಿಯ ಈ ಹುಚ್ಚು ಪ್ರೀತಿ ನೋಡಿ ಖುಷಿಯಾಗುವ ಬದಲು, ಸೋನು ಸೂದ್ ಅವರು ಗರಂ ತನ್ನ ಅಭಿಮಾನಿಗೆ ಖಾರವಾಗಿ ವಾರ್ನಿಂಗ್ ರವಾನಿಸಿದ್ದಾರೆ.

 

ಸಂಕಷ್ಟದಲ್ಲಿರುವ ಅಭಿಮಾನಿಗಳಿಗೆ ಸಹಾಯ ಹಸ್ತಕ್ಕೆ ಹಿಂದೆ ಮುಂದೆ ನೋಡದೆ ನಿಲ್ಲುವ ಸೋನು ಸೂದ್ ಗುಣ, ಅಭಿಮಾನಿಗಳ ಮನ ಮಿಡಿದಿದೆ. ಅಂತಹ  ಅಭಿಮಾನಿಯೊಬ್ಬ
ರಕ್ತದಿಂದ ಮಾಡಿದ ವರ್ಣಚಿತ್ರವನ್ನು ಸೋನು ಸೂದ್ ಉಡುಗೊರೆಯಾಗಿ ನೀಡಿದ್ದಾರೆ. ಈ ಹುಚ್ಚು ಪ್ರೀತಿ ನೋಡಿ, ಸ್ವತಃ ಸೋನು ಸೂದ್ ಗರಂ ಆಗಿದ್ದು, ಅಭಿಮಾನಿಯ ಈ ನಡೆ ನೋಡಿ ಸೋನು ಸೂದ್ ರಕ್ತವನ್ನು ದಾನ ಮಾಡಿ, ರಕ್ತದಿಂದ ನನ್ನ ಪೇಂಟಿಂಗ್ ಮಾಡೋದು ಸರಿಯಲ್ಲ. ರಕ್ತವನ್ನು ವ್ಯರ್ಥ ಮಾಡಬೇಡಿ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಅದಕ್ಕೆ ಅಭಿಮಾನಿ, ನಿಮಗಾಗಿ ಪ್ರಾಣ ತ್ಯಾಗ ಮಾಡೋದಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನು ಅಭಿಮಾನಿಯ ಹುಚ್ಚು ಪ್ರೀತಿ ನೋಡಿ ಕೋಪ ಮಾಡಿ ಕೊಂಡಿರುವ ಆಗಿರುವ ಸೋನು ಸೂದ್, ಆ ಅಭಿಮಾನಿಗೆ  ಕ್ಲಾಸ್ ಮಾಡಿ ” ಬ್ಲಡ್ ವೇಸ್ಟ್ ಮಾಡ್ಬೇಡ್ರೋ ‘ ಎಂದು ಹೇಳುತ್ತಲೇ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.

Leave A Reply

Your email address will not be published.