ರಾಹುಲ್ ಗಾಂಧಿಗೆ ಮದುವೆ ಫಿಕ್ಸ್, ಹುಡುಗಿ ಯಾರು ಗೊತ್ತಾ?
ಭಾರತ್ ಜೋಡೋ ಸಂದರ್ಭ ಜೋಡಿ ಹುಡುಕಿಕೊಂಡ ರಾಹುಲ್ ಗಾಂಧಿ !!

ಭಾರತದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ರಾಹುಲ್ ಗಾಂಧಿ ಮದುವೆ ಆಗುವ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಇದೀಗ ರಾಹುಲ್ ಗಾಂಧಿಯವರು ಮದುವೆಯಾಗಲು ಸಿದ್ಧತೆ ನಡೆಸಿದ್ದಾರಂತೆ. ಸೋನಿಯಾ ಗಾಂಧಿ ಅವರ ಮಗಳು ಪ್ರಿಯಾಂಕ ಗಾಂಧಿ ಮದುವೆಯಾಗಿ ಮಕ್ಕಳು ಕೂಡ ಮಾಡಿಕೊಂಡಿದ್ದು ಅವರಿಗೆ ರಾಹುಲ್ ಗಾಂಧಿಯವರ ಚಿಂತೆಯಾಗಿತ್ತು. ಮಗ ಕೂಡ ಸಂಸಾರ ಹೂಡಲಿ ಎನ್ನುವುದು ಸಹಜವಾಗಿ ತಾಯಿ ಸೋನಿಯಾ ಗಾಂಧಿ ಅವರ ಬಯಕೆಯಾಗಿತ್ತು. ಈ ನಿಟ್ಟಿನಲ್ಲಿ ಇವತ್ತು ರಾಹುಲ್ ಗಾಂಧಿಯವರು ಮದುವೆಯಾಗಲು ಹೊರಟಿದ್ದಾರೆ. ರಾಹುಲ್
ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಇದೊಂದು ಉಲ್ಲಾಸದ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

 

ಕಾಂಗ್ರೆಸ್ ಪಕ್ಷ ಕೈಗೊಂಡಿರುವ ‘ಭಾರತ್ ಜೋಡೋ ಯಾತ್ರೆ’ ಭರದಿಂದ ಸಾಗುತ್ತಿದ್ದು, ತಮಿಳುನಾಡಿನಲ್ಲಿ ಭಾರತ್ ಜೋಡೋ ಯಾತ್ರೆಯ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಸ್ಥಳೀಯ ಮಹಿಳಾ ಎಂಜಿಎನ್‍ಆರ್‌ಇಜಿಎ ಕಾರ್ಯಕರ್ತೆಯೊಬ್ಬರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ತಮಿಳುನಾಡು ಹುಡುಗಿಯನ್ನು ಮದುವೆಯಾಗಲು ಆಫರ್ ನೀಡಿರುವುದಾಗಿ ತಿಳಿಸಿದ್ದಾರೆ. ಭಾರತ್ ಜೋಡೋ ಅಂತ ಹೊರಟ ರಾಹುಲ್ ತಮಿಳು ಪೊನ್ನಾಚಿಯನ್ನು ಜೋಡಿ ಮಾಡಿಕೊಂಡು ಭಾರತ ಜೋಡೋ ಮುಂದುವರೆಸಿದರು ಅಚ್ಚರಿ ಇಲ್ಲ. ಹಾಗಂತ ರಾಹುಲ್ ಗಾಂಧಿಯ ಅಭಿಮಾನಿಗಳು ಆಸೆಯಿಂದ ನಿರೀಕ್ಷಿಸುತ್ತಿದ್ದಾರೆ.

ನೀನೇ, ಶನಿವಾರ ಮಧ್ಯಾಹ್ನ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯ ಮಾರ್ತಾಂಡಂನಲ್ಲಿ ಮಹಿಳಾ ಎಂಜಿಎನ್‍ಆರ್‌ಇಜಿಎ ಕಾರ್ಯಕರ್ತರನ್ನು ಭೇಟಿಯಾದರು. ಈ ವೇಳೆ ಮಹಿಳೆಯೊಬ್ಬರು ರಾಹುಲ್ ಗಾಂದಿ ಅವರು ತಮಿಳುನಾಡನ್ನು ಪ್ರೀತಿಸುತ್ತಾರೆ. ಹೀಗಾಗಿ ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆಂದು ಹೇಳಿದ್ದಾರೆ. ಇದನ್ನು ಗಮನಿಸಿದ ಜೈರಾಮ್ ರಮೇಶ್ ಅವರು ಇದೊಂದು ‘ಉಲ್ಲಾಸದ ಕ್ಷಣ’ ಎಂದು ಹೇಳಿದ್ದಾರೆ.

ಜೈರಾಮ್ ರಮೇಶ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ರಾಹುಲ್ ಗಾಂಧಿ ಅವರ ಫೋಟೋವನ್ನು ಹಂಚಿಕೊಂಡಿದ್ದು, ಇಂದು ಮಧ್ಯಾಹ್ನ ಮಾರ್ತಾಂಡಂನಲ್ಲಿ ಮಹಿಳಾ ಎಂಜಿಎಎನ್‍ಆರ್‌ಇಜಿಎ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿಯವರು ಸಂವಾದ ನಡೆಸುತ್ತಿದ್ದರು. ಈ ವೇಳೆ ಮಹಿಳೆಯೊಬ್ಬರು ರಾಹುಲ್ ಗಾಂಧಿ ತಮಿಳುನಾಡನ್ನು ಪ್ರೀತಿಸುತ್ತಾರೆ ಎಂದು ತಿಳಿದಿದೆ ಮತ್ತು ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಅಂತ ಹೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅವರ ಮಾತು ಕೇಳಿದ ನಸುಗೊಪ್ಪು ಮುಖದ ತಮಿಳು ಸುಂದರಿಯರ ಕಣ್ಣುಗಳಲ್ಲಿ ಫಳ ಫಳ ಹೊಳಪು ಮೂಡಿದೆ. ರಾಹುಲ್ ಗಾಂಧಿಯವರ ಜೀವನದ ಈ ಮಧುರ ಕ್ಷಣಕ್ಕಾಗಿ ಇಡೀ ಭಾರತ ಕಾದು ಕೂತಿದೆ.

Leave A Reply

Your email address will not be published.