ದೇಶದಲ್ಲಿ ಮೊತ್ತ ಮೊದಲನೇ ಬಾರಿಗೆ ನಡೆಯುತ್ತಿದೆ ಅದ್ಧೂರಿ ವಿಚ್ಛೇದಿತರ ಸಮಾರಂಭ | ಎಲ್ಲಿ, ಹೇಗೆ ?

ಕಂಡು ಕೇಳರಿಯದ ಎಂತೆಂತಹ ಸಮಾರಂಭಗಳು ಈ ಜಗತ್ತಿನಲ್ಲಿ ನಡೆಯುತ್ತಾ ಇರುತ್ತದೆ. ಅದರ ಪಾಲಿಗೆ ಈಗ ಹೊಸ ಸೇರ್ಪಡೆ, ವಿಚ್ಛೇದಿತರ ಸಮಾರಂಭ. ಹೌದು,
ಸೆಪ್ಟೆಂಬರ್ 18 ರಂದು ಭೋಪಾಲ್ ನಲ್ಲಿ ಈ ವಿಚ್ಛೇದಿತರ ಮದುವೆ ಆಚರಣೆ ನಡೆಯಲಿದೆ. ಈ ಮದುವೆಯಲ್ಲಿ ಎಲ್ಲಾ ಆಚರಣೆಗಳನ್ನು ನಡೆಸಲಾಗುತ್ತದೆ, ಸಂಗೀತ ಸಮಾರಂಭದಿಂದ ಹಿಡಿದು ಬ್ಯಾಂಡ್ ಬಾಜ, ಬಾರಾತ್, ಎಲ್ಲಾ ಕಾರ್ಯಕ್ರಮಗಳು ಮದುವೆ ಸಮಾರಂಭದಲ್ಲಿ ನಡೆಯುತ್ತವೆ. ಆದರೆ ಗಮನಿಸಬೇಕಾದ ಅಂಶವೆಂದರೆ ಈ ಮದುವೆಯಲ್ಲಿ ಎಲ್ಲಿಯೂ ವಧು ಇರುವುದಿಲ್ಲ.

 

ಇದು ಸ್ವಲ್ಪ ವಿಚಿತ್ರ ಅನಿಸಿರಬಹುದು. ಆದರೆ ಇದು ಕಟು ಸತ್ಯ. ವಾಸ್ತವವಾಗಿ, ಭೋಪಾಲ್ ನ ಭಾಯ್ ವೆಲ್ಫೇರ್ ಸೊಸೈಟಿ ಸೆಪ್ಟೆಂಬರ್ 18 ರಂದು ವಿಚ್ಛೇದನ ಸಮಾರಂಭವನ್ನು ಮಾಡಲಿದೆ. ಇದರಲ್ಲಿ ಸುಮಾರು ಅರ್ಧ ಡಜನ್ ಪುರುಷರು ಭಾಗಿಯಾಗಲಿದ್ದಾರೆ. ಎಲ್ಲರೂ ವಿಚ್ಛೇದಿತರು. ಈ ಸಮಾರಂಭದಲ್ಲಿ ಮದುವೆಯ ರೀತಿಯ ಕಾರ್ಡ್ ಅನ್ನು ಮುದ್ರಿಸಿ, ಎಲ್ಲಾ ಮದುವೆಯ ಶಾಸ್ತ್ರಗಳನ್ನು ಮಾಡಲಾಗುತ್ತದೆ. ಕೊನೆಗೆ ಮುಖ್ಯ ಅತಿಥಿಯಿಂದ ವಿಚ್ಛೇದನದ ಆದೇಶವನ್ನು ನೀಡುವುದು ಮತ್ತೊಂದು ವೈಶಿಷ್ಟ್ಯ ವಾಗಿದೆ. ಮತ್ತು ಭರ್ಜರಿ ಔತಣಕೂಟವನ್ನು ಸಹ ಇಡಲಾಗಿದೆ.

5 ರಿಂದ 10 ವರ್ಷಗಳ ಸುದೀರ್ಘ ಹೋರಾಟದ ನಂತರ, ಒಬ್ಬ ವ್ಯಕ್ತಿಯು ದಣಿದ ನಂತರ ವಿಚ್ಛೇದನ ಪಡೆದಾಗ, ಅವನೊಂದಿಗೆ ತಮ್ಮ ಹೊಸ ಜೀವನವನ್ನು ಆಚರಿಸಲು ಯಾರೂ ಇರಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಮ್ಮ ಸಹೋದರ ಕ್ಷೇಮಾಭಿವೃದ್ಧಿ ಸಂಘವು ಮುಂದೆ ಬಂದಿದೆ, ಅದು ಅವರ ಸಂತೋಷ ಮತ್ತು ದುಃಖದಲ್ಲಿ ಅವರೊಂದಿಗೆ ಇದೆ ಅಂತ ಭಾಯಿ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಜಾಕಿ ಅಹ್ಮದ್ ಹೇಳುತ್ತಾರೆ.

Leave A Reply

Your email address will not be published.