Bigg Boss ಗಾಗಿ ಈ ಜನಪ್ರಿಯ ಧಾರಾವಾಹಿಗಳಿಗೆ ಅಂತ್ಯ ಹಾಡಲಿದೆ ಕಲರ್ಸ್ ಕನ್ನಡ ವಾಹಿನಿ

Share the Article

ಬಿಗ್ ಬಾಸ್ ಒಟಿಟಿ ( Bigg Boss OTT) ಇನ್ನೇನು ಮುಗಿಯೋ ಹಂತಕ್ಕೆ ಬಂತು. ಇದರಿಂದ ಕೆಲವರು ಟಿವಿ ಬಿಗ್ ಬಾಸ್ ಗೆ ಹೋಗುತ್ತಾರೆ. ಅದು ಇನ್ನಷ್ಟೇ ತಿಳಿಯಬೇಕಿದೆ. ಬಿಗ್ ಬಾಸ್ ಕನ್ನಡ 9 ನೇ ಆವೃತ್ತಿ ಟಿವಿಯಲ್ಲಿ ಆರಂಭವಾಗಲು ಕೆಲವೇ ದಿನ ಬಾಕಿಯಿದೆ. ಹಾಗಾಗಿ ಈ ಕಲರ್ಸ್ ವಾಹಿನಿ ಬಿಗ್ ಬಾಸ್ ಶೋ ಪ್ರಸಾರಕ್ಕೆ ಸಮಯ ನಿಗದಿಪಡಿಸಲು ಕೆಲವೊಂದು ಧಾರವಾಹಿಗಳಿಗೆ ಕತ್ತರಿ ಹಾಕಲು ಹೊರಟಿದೆ.

ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿಯಲ್ಲಿ ಪ್ರಸಾರವಾಗಲಿರುವುದರಿಂದ , ಹೀಗಾಗಿ ಕಲರ್ಸ್ ವಾಹಿನಿ ತನ್ನ ಜನಪ್ರಿಯ ಧಾರವಾಹಿಗಳಾದ ನಮ್ಮನೆ ಯುವರಾಣಿ, ಕನ್ಯಾಕುಮಾರಿ, ಮಂಗಳಗೌರಿ ಮದುವೆ ಮತ್ತು ನನ್ನರಸಿ ರಾಧೆ ಎಂಬ ಮೂರು ಧಾರವಾಹಿಗಳನ್ನು ಅಂತ್ಯಗೊಳಿಸುತ್ತಿದೆ.

ಈ ಪೈಕಿ ನಮ್ಮನೆ ಯುವರಾಣಿ ಮತ್ತು ಮಂಗಳ ಗೌರಿ ಮದುವೆ ಈಗಾಗಲೇ 1000 ಸಂಚಿಕೆಗಳನ್ನು ದಾಟಿ ಎಷ್ಟೋ ದಿನಗಳಾಗಿವೆ. ನನ್ನರಸಿ ರಾಧೆ 650 ಪ್ಲಸ್ ಸಂಚಿಕೆಗಳನ್ನು ಕಂಡಿದೆ. ಇನ್ನು ಕನ್ಯಾಕುಮಾರಿ 300 ಪ್ಲಸ್ ಸಂಚಿಕೆ ಪ್ರಸಾರವಾಗಿದೆಯಷ್ಟೇ. ಬಿಗ್ ಬಾಸ್ ಗಾಗಿ ಮೂರು ಕಡಿಮೆ ಟಿಆರ್ ಪಿ ಬರುವ ಧಾರವಾಹಿಗಳನ್ನು ಕಲರ್ಸ್ ವಾಹಿನಿ ಸ್ಥಗಿತಗೊಳಿಸುತ್ತಿದೆ.

Leave A Reply