ಮದುವೆ ಮಂಟಪಕ್ಕೆ ಬಾಂಡ್​ ಪೇಪರ್​ ಹಿಡಿದುಕೊಂಡು ಬಂದು ವಧುವಿನ ಸಹಿ ಹಾಕಿಸಿಕೊಂಡ ವರನ ತರ್ಲೆ ಗ್ಯಾಂಗ್ | ಅಷ್ಟಕ್ಕೂ ಆ ಒಪ್ಪಂದದ ಪತ್ರದಲ್ಲಿ ಇದ್ದಿದ್ದೇನು ಗೊತ್ತಾ?

ಈಗಿನ ಕಾಲದ ಮದುವೆ ಅಂದ್ರೆ, ಅದು ಜೋಡಿಗಿಂತಲೂ ಅವರ ಸ್ನೇಹಿತರಿಗೆ ತುಂಬಾ ಖುಷಿಯ ಕ್ಷಣ ಅಂತಾನೇ ಹೇಳಬಹುದು. ಯಾಕಂದ್ರೆ, ಫ್ರೆಂಡ್ ನನ್ನು ಕಾಲು ಎಳೆಯಲು ಇದು ಬೆಸ್ಟ್ ಟೈಮ್ ಆಗಿರುತ್ತೆ. ಹೌದು. ಅದೆಷ್ಟೋ ಜನ ಗೆಳೆಯ ಅಥವಾ ಗೆಳತಿಯ ಮದುವೆಗೆ ಹಾಸ್ಯ ಭರಿತವಾದ ಗಿಫ್ಟ್ ನೀಡಿ ಇಡೀ ಸಂಭ್ರಮಕ್ಕೆ ಮತ್ತಷ್ಟು ಬಣ್ಣ ತುಂಬುತ್ತಾರೆ.

 

ಅದೇ ರೀತಿ ಇಲ್ಲೊಂದು ಕಡೆ ಗೆಳೆಯನ ಮದುವೆಗೆ ಬಂದ ಫ್ರೆಂಡ್ಸ್ ಗಿಫ್ಟ್ ಬದಲಿಗೆ ತಂದಿದ್ದು ಒಪ್ಪಂದದ ಪತ್ರ. ಅರೆ, ಇದೇನು ಮದುವೆ ದಿನ ಹುಡುಗಿ ಒಪ್ಪಂದ ಪತ್ರಕ್ಕೆ ಸಹಿ ಹಾಕೋದು ಇತ್ತೀಚೆಗೆ ಟ್ರೆಂಡ್, ಆದ್ರೆ, ಹುಡುಗನ ಫ್ರೆಂಡ್ಸ್..!?. ಅಷ್ಟಕ್ಕೂ ಅದ್ರಲ್ಲಿ ಇರೋದೆನು ಎಂಬ ಕುತೂಹಲ ನಿಮ್ಮಲ್ಲಿ ಪಕ್ಕಾ ಇರುತ್ತೆ. ಅದೇನೆಂದು ಮುಂದೆ ಓದಿ..

ಈ ಫನ್ನಿ ಘಟನೆ ತಮಿಳುನಾಡಿನ ಮದುರೈ ಸಮೀಪ ನಡೆದ ವಿವಾಹ ಸಮಾರಂಭವೊಂದರಲ್ಲಿ ನಡೆದಿದೆ. ಹರಿ ಪ್ರಸಾದ್ ಎಂಬುವವರು ಮಧುರೈ ಜಿಲ್ಲೆಯ ಉಸಿಲಂಪಟ್ಟಿಯ ಕೀಲಾ ಪುದೂರು ನಿವಾಸಿ. ಥೇಣಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಶ್ರೇಷ್ಠ ಕ್ರಿಕೆಟ್ ಆಟಗಾರರೂ ಹೌದು. ಅವರು ಸ್ಥಳೀಯ ಕ್ಲಬ್ ‘ಸೂಪರ್ ಸ್ಟಾರ್ ಕ್ರಿಕೆಟ್ ತಂಡ’ದ ನಾಯಕರಾಗಿದ್ದಾರೆ. ಹರಿಪ್ರಸಾದ್ ಸೆ. 9ರಂದು ಥೇಣಿ ಮೂಲದ ಪೂಜಾರನ್ನು ಉಸಿಲಂಪಟ್ಟಿಯ ಖಾಸಗಿ ಮದುವೆ ಮಂಟಪದಲ್ಲಿ ವಿವಾಹವಾದರು. ಈ ವೇಳೆ ಒಪ್ಪಂದದ ಪತ್ರದೊಂದಿಗೆ ಬಂದ ವರನ ಸ್ನೇಹಿತರು ವಧುವಿನ ಬಳಿ ಒಂದು ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಅದ್ರಲ್ಲಿ ಇದ್ದಿದ್ದೇನು ಎಂಬುದನ್ನು ಮುಂದೆ ಓದಿ..

ಕ್ರಿಕೆಟ್ ಅಂದ್ರೆ ಹೆಚ್ಚಿನ ಯುವಕರಿಗೆ ತುಂಬಾನೇ ಇಷ್ಟ. ಆದ್ರೆ, ಮದುವೆ ಆದ ಮೇಲೆ ಅಂತೂ ಎಲ್ಲದರಿಂದಲೂ ದೂರ ಹೋಗುತ್ತಾರೆ. ಫ್ಯಾಮಿಲಿ ಕೆಲಸನೋ ಅಥವಾ ಇನ್ನೇನೋ ಕಾರಣಕ್ಕೆ. ಇದೇ ಉದ್ದೇಶ ಇಟ್ಟುಕೊಂಡು ವರನ ಸ್ನೇಹಿತರು ಒಪ್ಪಂದದ ಪತ್ರ ನೀಡಿದ್ದಾರೆ. ಮದುವೆಯ ಬಳಿಕವೂ ಸ್ನೇಹಿತನಿಗೆ ಕ್ರಿಕೆಟ್​ ಆಡಲು ಅವಕಾಶ ನೀಡಬೇಕೆಂದು ವಧುವಿನ ಬಳಿ ಬಾಂಡ್​ ಪೇಪರ್​ ಮೇಲೆ ಬರೆಸಿಕೊಂಡಿದ್ದಾರೆ.

ಮದುವೆಯ ನಂತರವೂ ಹರಿ ಪ್ರಸಾದ್​ಗೆ ಕ್ರಿಕೆಟ್ ಆಡಲು ಅವಕಾಶ ನೀಡುವಂತೆ ಪೂಜಾ ಬಳಿ ಮನವಿ ಮಾಡಿದ್ದಾರೆ. ಹಾಗೆಯೇ ಶನಿವಾರ ಮತ್ತು ಭಾನುವಾರದಂದು ವರನಿಗೆ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಅವಕಾಶ ನೀಡುವುದಾಗಿ ವಧು ಬಾಂಡ್​ ಪೇಪರ್​ಗೆ ಸಹಿ ಹಾಕಿದ್ದಾರೆ. ಇದೀಗ ಇವರ ಈ ಬಾಂಡ್​ ಪೇಪರ್​ ಎಲ್ಲೆಡೆ ವೈರಲ್ ಆಗಿದ್ದು, ವಿನೂತನ ಐಡಿಯಾಗೆ ಮೆಚ್ಚುಗೆಗೆ ಪಾತ್ರವಾಗಿದೆ.

Leave A Reply

Your email address will not be published.