Bigg Boss Kannada : ನಂದಿನಿ ಔಟ್ ಆದ ತಕ್ಷಣವೇ ಸಾನ್ಯಾ ಜೊತೆ ಇನ್ನಷ್ಟು ಸಲುಗೆ ಹೆಚ್ಚಿಸಿಕೊಂಡ ಜಶ್ವಂತ್ | ಈ ಸ್ನೇಹ ನೋಡಿ ರೂಪೇಶ್‌ಗೆ ಟೆನ್ಶನೋ ಟೆನ್ಶನ್

ಬಿಗ್ ಬಾಸ್ ಅಂತಿಮ ಘಟ್ಟ ತಲುಪಿದೆ. ಇನ್ನೊಂದೇ ವಾರ ಬಾಕಿ ಇರುವುದು. ಹಾಗಾಗಿ ಹಲವು ಇಂಟೆರೆಸ್ಟಿಂಗ್ ಘಟನೆಗಳು ನಡೆಯುತ್ತಾ ಇರುತ್ತದೆ. ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋನಲ್ಲಿ ಹಲವು ಇಂಟರೆಸ್ಟಿಂಗ್ ಘಟನೆಗಳು ನಡೆಯುತ್ತಿವೆ. ಈ ವಾರ ಅಂದರೆ ನಿನ್ನೆ ( ಶನಿವಾರ ) ಅಚ್ಚರಿಯ ರೀತಿಯಲ್ಲಿ ನಂದಿನಿ ಎಲಿಮಿನೇಷನ್ ಆಗಿದ್ದಾರೆ. ಏಕೆಂದರೆ ಯಾರೂ ಊಹಿಸದ ಎಲಿಮಿನೇಷನ್ ಇದಾಗಿತ್ತು.ಎಲ್ಲರ ಊಹೆ ಜಯಶ್ರೀ ಆಗಿತ್ತು. ಆದರೆ ನಂದಿನಿ ಎಲಿಮಿನೇಟ್ ಆಗಿ ಮನೆಯಿಂದ ಆಚೆ ಹೋಗಿದ್ದಾರೆ.

 

ಇಷ್ಟು ದಿನ ನಂದಿನಿ ಮತ್ತು ಜಸ್ವಂತ್ ಬೋಪಣ್ಣ (Jashwanth Bopanna) ಬಿಗ್ ಬಾಸ್ ಮನೆಯಲ್ಲಿ ಜೋಡಿಯಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಎಲ್ಲರಿಗೂ ತಿಳಿದಿರುವಂತೆ ಜಸ್ವಂತ್ ಬೋಪಣ್ಣ ಮತ್ತು ನಂದಿನಿ ಅವರು ರಿಯಲ್ ಲೈಫ್‌ನಲ್ಲಿಯೂ ಪ್ರೇಮಿಗಳು. ಅವರು ಜೋಡಿ ಸ್ಪರ್ಧಿಗಳಾಗಿಯೇ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋಗೆ ಕಾಲಿಟ್ಟಿದ್ದರು. ಆದರೆ ಎರಡನೇ ವಾರದಿಂದ ಅವರಿಬ್ಬರು ಪ್ರತ್ಯೇಕ ಸ್ಪರ್ಧಿಗಳಾಗಿ ಮುಂದುವರಿಯಬೇಕು ಎಂದು ಬಿಗ್ ಬಾಸ್ ಕಡೆಯಿಂದ ಆದೇಶ ಬಂತು. ಹಾಗಿದ್ದರೂ ಕೂಡ ಪ್ರೇಮಿಗಳು ಎಂಬ ಕಾರಣಕ್ಕೆ ಹೆಚ್ಚಾಗಿ ಅವರಿಬ್ಬರು ಜೊತೆಯಲ್ಲೇ ಇರುತ್ತಿದ್ದರು.

ಹಾಗಾಗಿ ನ್ಯಾಚುರಲಿ ಎಲ್ಲರ ದೃಷ್ಟಿ ಸಾನಿಯಾ ಅಯ್ಯರ್ ಕಡೆ ವಾಲಿರುವುದಂತೂ ನಿಜ. ಏಕೆಂದರೆ, ಜಶ್ವಂತ್ ಗೆ ಗರ್ಲ್ ಫ್ರೆಂಡ್ ಇದ್ದಾಳೆಂದು ಗೊತ್ತಿದ್ದರೂ ಕೂಡಾ, ಸಾನಿಯಾ ಫ್ರೆಂಡ್ ಅಂತ ಸಲುಗೆಯಿಂದ ಹತ್ತಿರವಾಗಿದ್ದಾಳೆ.

ದಿನ ಕಳೆಯುತ್ತಿದ್ದಂತೆಯೇ ಜಸ್ವಂತ್ ಅವರು ಸಾನ್ಯಾ ಅಯ್ಯರ್ ಜೊತೆ ಹೆಚ್ಚು ಮಾತನಾಡಲು ಆರಂಭಿಸಿದರು. ಅದರಿಂದ ನಂದಿನಿಗೆ ಕಸಿವಿಸಿ ಆಗುತ್ತಿತ್ತು. ತಮಗೆ ಜಶ್ವಂತ್ ಹೆಚ್ಚು ಸಮಯ ನೀಡುತ್ತಿಲ್ಲ ಎಂದು ನಂದಿನಿ ಆಗಾಗ ತಕರಾರು ತೆಗೆಯಲು ಶುರುಮಾಡಿದ್ದರು. ಇದರಿಂದ ಇಬ್ಬರ ನಡುವೆ ಯಾವಾಗಲೂ ಜಗಳ ಆಗುತ್ತಲೇ ಇತ್ತು.

ಇದು ಮನೆಮಂದಿಯ ಗಮನಕ್ಕೆ ಬಂದಿದೆ. ಅಷ್ಟು ಮಾತ್ರವಲ್ಲ ನಂದಿನಿ ಹಾಗೂ ಜಶ್ವಂತ್ ಪ್ರೀತಿಯಲ್ಲಿ ಇದು ಯಾವಾಗಲೂ ಕಿರಿಕ್ ಆಗ್ತಾ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ವೀಕ್ಷಕರೂ ಇದನ್ನು ಗಮನಿಸಿದ್ದಾರೆ. ಈಗ ನಂದಿನಿ ಎಲಿಮಿನೇಷನ್ ಆಗಿರುವುದರಿಂದ ಇನ್ನು ಮುಂದೆ ಸಾನಿಯಾ ಹಾಗೂ ಜಶ್ವಂತ್ ಸ್ನೇಹ ಹೆಚ್ಚಾಗಲಿದೆ. ಇದು ಕಾಣಿಸಿಕೊಂಡಿದೆ ಒಂದೇ ದಿನದಲ್ಲಿ.

ಅಷ್ಟೇ ಅಲ್ಲದೇ, ಬಿಗ್ ಬಾಸ್ ನಡೆಸಿಕೊಡುವ ಕಿಚ್ಚ ಸುದೀಪ್ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ಸೂಪರ್ ಸಂಡೇ ವಿತ್ ಸುದೀಪ್ ‘ಎಪಿಸೋಡ್‌ನಲ್ಲಿ ಇದರ ಬಗ್ಗೆ ಚರ್ಚೆ ಆಗಿದೆ. ಜಶ್ವಂತ್ ಮತ್ತು ಸಾನ್ಯಾ (Sanya Iyer) ಹತ್ತಿರ ಆಗುತ್ತಿದ್ದಂತೆಯೇ ರೂಪೇಶ್ ಅವರು ಯಾಕೋ ಟೆನ್ಶನ್ ಮಾಡಿಕೊಂಡಿದ್ದಾರೆ ಎಂದು ಸುದೀಪ್ ಕಾಲೆಳೆದಿದ್ದಾರೆ, ತಮಾಷೆ ಮಾಡಿದ್ದಾರೆ.

ನಂದಿನಿ ಮನೆಯಲ್ಲಿ ಇದ್ದಷ್ಟು ದಿನ ಸಾನ್ಯಾ ಅವರು ಜಶ್ವಂತ್‌ಗಿಂತಲೂ ಹೆಚ್ಚಾಗಿ ರೂಪೇಶ್ ಶೆಟ್ಟಿ ಜೊತೆ ಇರುತ್ತಿದ್ದರು. ಆದರೆ ನಂದಿನಿ ಹೋದ ಬಳಿಕ ರೂಪೇಶ್ ಮತ್ತು ಸಾನ್ಯಾ ನಡುವೆ ಜಶ್ವಂತ್ ಬಂದಿದ್ದಾರೆ. ಇದರಿಂದ ರೂಪೇಶ್‌ಗೆ ಟೆನ್ಶನ್ ಹೆಚ್ಚಾಗಿದೆ ಎನಿಸುತ್ತಿದೆ. ಒಟ್ಟಾರೆ, ಒಂದೇ ವಾರದಲ್ಲಿ ಅಂತಿಮವಾಗಿ ಯಾರು ‘ಬಿಗ್ ಬಾಸ್ ಕನ್ನಡ ಒಟಿಟಿ’ ಟ್ರೋಫಿ ಗೆಲ್ಲುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬೀಳುವ ಸಮಯ ಹತ್ತಿರ ಆಗುತ್ತಿದೆ.

Leave A Reply

Your email address will not be published.