ನಾಲ್ಕು ಹೊಸ ‘ಆಧಾರ್’ ಸೇವೆ ಪರಿಚಯಿಸಿದ ‘UMANG’

ಎಲ್ಲಾ ಭಾರತೀಯ ನಾಗರಿಕರಿಗೆ ಒಂದೇ
ಡಿಜಿಟಲ್ ವೇದಿಕೆಯ ಮೂಲಕ ಕೇಂದ್ರದಿಂದ ಸ್ಥಳೀಯ ಸರ್ಕಾರಿ ಸಂಸ್ಥೆಗಳವರೆಗೆ ಪ್ಯಾನ್-ಇಂಡಿಯಾ ಇ-ಗೌವ್ ಸೇವೆಗಳನ್ನು ಒದಗಿಸಲು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗ (NeGD) ಉಮಂಗ್ (ಹೊಸ ಯುಗದ ಆಡಳಿತಕ್ಕಾಗಿ ಏಕೀಕೃತ ಮೊಬೈಲ್ ಅಪ್ಲಿಕೇಶನ್) ಅನ್ನು ಅಭಿವೃದ್ಧಿಪಡಿಸಿದವು.

ಕಾರ್ಡ್‌ದಾರರಿಗೆ ಹೊಸ ಡಿಜಿಟಲ್ ಸೇವೆಗಳನ್ನು ಪರಿಚಯಿಸಲಾಗಿದೆ, ಇದು ಆಧಾರ್ ಡೇಟಾಬೇಸ್‌ಗೆ ಲಿಂಕ್ ಮಾಡಲಾದ ಸೇವೆಗಳನ್ನು ಸಹ ನೀಡುತ್ತದೆ.

ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಡಿಜಿಟಲ್ ಇಂಡಿಯಾದ ಅಧಿಕೃತ ಟ್ವಿಟ್ ಪ್ರಕಾರ, ”ಉಮಂಗ್ ಅಪ್ಲಿಕೇಶನ್‌ನಲ್ಲಿ ನನ್ನ ಆಧಾರ್ ಹೊಸ ಶ್ರೇಣಿಯ ನಾಗರಿಕ-ಕೇಂದ್ರಿತ ಸೇವೆಗಳನ್ನ ಸೇರಿಸಿದೆ! ಈಗ
ಉಮಂಗ್ ಆಯಪ್ ಡೌನ್ಲೋಡ್ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ; 97183-97183 ಗೆ
ಮಿಸ್ ಕಾಲ್ ನೀಡಿ’ ಎಂದಿದೆ.

ಉಮಂಗ್ ಆಪ್ ನಿಂದ ಹೊಸ ಆಧಾರ್ ಸೇವೆಗಳು.! ಡಿಜಿಟಲ್ ಇಂಡಿಯಾ ಮಾಡಿದ ಟ್ವಿಟ್ ಪ್ರಕಾರ, ಆಧಾರ್ ಬಳಕೆದಾರರಿಗೆ ಈಗ ಲಭ್ಯವಾಗುವ 4 ಹೊಸ ಡಿಜಿಟಲ್ ಸೇವೆಗಳು ಇಲ್ಲಿವೆ.

ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಮತ್ತು ಇಮೇಲ್ ಪರಿಶೀಲಿಸಿ

ಇಐಡಿ / ಆಧಾರ್ ಸಂಖ್ಯೆಯನ್ನು ಹಿಂಪಡೆಯಿರಿ: ಆಧಾರ್ ಸಂಖ್ಯೆ ಅಥವಾ ದಾಖಲಾತಿ ಐಡಿ (ಇಐಡಿ) ಅನ್ನು ಕಂಡುಹಿಡಿಯಲು ಈ ಸೇವೆಯನ್ನು ಬಳಸಿ.

ಆಧಾರ್ ಪರಿಶೀಲಿಸಿ: ನಾಗರಿಕರು ಆಧಾರ್ ಸ್ಥಿತಿಯನ್ನು ಪರಿಶೀಲಿಸಲು ಈ ಸೇವೆಯನ್ನು ಬಳಸಬಹುದು.

ದಾಖಲಾತಿಯ ಸ್ಥಿತಿಯನ್ನು ಪರಿಶೀಲಿಸಿ ಅಥವಾ ವಿನಂತಿಯನ್ನು ನವೀಕರಿಸಿ

Leave A Reply

Your email address will not be published.