ದೇವಸ್ಥಾನ ಮತ್ತು ಸಾರಾಯಿ ಅಂಗಡಿಗೆ ಹೋಗುವುದು ಒಂದೇ | ವ್ಯಾಟ್ಸಾಪ್ ಸ್ಟೇಟಸ್ ಹಾಕಿದ ಎಸ್ಡಿಪಿಐ ಮುಖಂಡ ಮಾರ್ಟೀಸ್ ವಿರುದ್ಧ ಠಾಣೆಗೆ ದೂರು
ಕಡಬ: ದೇವಸ್ಥಾನ ಮತ್ತು ಸಾರಾಯಿ ಅಂಗಡಿಗೆ ಹೋಗುವುದು ಒಂದೇ ಎನ್ನುವ ಸ್ಟೇಟಸ್ ಅಳವಡಿಸಿಕೊಂಡಿರುವ ಬಗ್ಗೆ ಎಸ್.ಡಿ.ಪಿ.ಐ ಮುಖಂಡ ವಿಕ್ಟರ್ ಮಾರ್ಟಿಸ್ ವಿರುದ್ದ ಹಿಂದೂ ಸಂಘಟನೆಯ ಮುಖಂಡರು ಕಡಬ ಪೋಲಿಸರಿಗೆ ದೂರು ನೀಡಿದ್ದಾರೆ.
ದೂರು ನೀಡಿದ ಬೆನ್ನಲ್ಲೆ ವಿಕ್ಟರ್ ಮಾರ್ಟಿಸ್ ಸ್ಟೇಟಸ್ ಡಿಲಿಟ್ ಮಾಡಿ ಕ್ಷಮೆಯಾಚಿಸುವ ಸ್ಟೇಟಸ್ ಅಳವಡಿಸಿಕೊಂಡ ಘಟನೆ ಸೆ.10 ರಂದು ನಡೆದಿದೆ.
ಎಸ್.ಡಿ.ಪಿ.ಐ ಸಕ್ರೀಯ ಮುಖಂಡರಾಗಿರುವ ವಿಕ್ಟರ್ ಮಾರ್ಟಿಸ್ ತನ್ನ ಸ್ಟೇಟಸ್ ನಲ್ಲಿ ದೇವಸ್ಥಾನಕ್ಕೆ ಮತ್ತು ಬಾರ್ ಗೆ ಅಂಗಡಿಗೆ ಹೋಗುವುದು ಕ್ಷಣಿಕ ನೆಮ್ಮದಿಗಾಗಿ ಎಂದು ಸ್ಟೇಟಸ್ ಹಾಕಿಕೊಂಡಿದ್ದರು.
ಈ ಸ್ಟೇಟಸ್ ನಿಂದ ಹಿಂದೂಗಳ ಭಾವನೆ ಗೆ ನೋವಾಗಿದೆ ಎಂದು ಕಡಬ ವಿ.ಹಿಂ.ಪ ವತಿಯಿಂದ ಕಡಬ ಪೋಲಿಸರಿಗೆ ದೂರು ನೀಡಲಾಗಿದೆ. ಕಡಬ ಸಮೀಪದ ಬೆಳ್ಳಾರೆ ಪ್ರವೀಣ್ ನೆಟ್ಟಾರ್ ಹತ್ಯಾ ಕಾರಣದಿಂದ ಪ್ರಕ್ಷ್ಯುಬ್ದ ಗೊಂಡು ಇನ್ನೇನು ಜನಜೀವನ ಸಹಜಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ ಒಂದಲ್ಲ ಒಂದು ಕಾರಣದಿಂದ ಮತ್ತೆ ಮನಸ್ಸು ಕಲಕುವ ಪ್ರಸಂಗಗಳು ನಡೆಯುತ್ತಿವೆ. ಇವತ್ತು ತಾನೇ ಪ್ರವೀಣ್ ನೆಟ್ಟಾರ್ ಹತ್ಯಾ ಆರೋಪಿಯ ತಮ್ಮನೊಬ್ಬ ಹೋಟೆಲ್ ಉದ್ಯಮಿಗೆ ಬೆದರಿಕೆ ಹಾಕಿದ ಪ್ರಕರಣ ನಡೆದಿದೆ. ಸಂಜೆಯ ಹೊತ್ತಿಗೆ ಈ ಬಾರ್ ಮತ್ತು ದೇವಸ್ಥಾನವನ್ನು ಕಂಪ್ಯಾರ್ ಮಾಡಿದ ಈ ಸುದ್ದಿ.
ಈ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಪ್ರಮುಖರಾದ ವಾಸುದೇವ ಕೊಳ್ಳೆಸಾಗು, ಸಂತೋಷ್ ಕುಮಾರ್ ಕೊಡಿಬೈಲು, ಪ್ರಮೋದ್ ರೈ, ಗಿರೀಶ್ ಎ.ಪಿ. ಪ್ರಕಾಶ್ ಎನ್ .ಕೆ.ರಘುರಾಮ ನಾಯ್ಕ್, ಮಾಧವ ಕೋಲ್ಪೆ, ಸೀತಾರಾಮ ಗುರುಕೃಪಾ, ಲಿಂಗಪ್ಪ ದೊಡ್ಡಕೊಪ್ಪ, ಸದಾನಂದ, ಜಿನಿತ್ ಕುಮಾರ್, ಗಣೇಶ್ ಮೀನಾಡಿ, ತಿಲಕ್ ರೈ, ಮನೋಜ್ ಖಂಡಿಗ ಮೊದಲಾದವರು ಇದ್ದರು.