ಪುರುಷರ ಲೈಂಗಿಕ ಸಾಮರ್ಥ್ಯವನ್ನು ‘ಎರಡು ನಿಮಿಷ’ದ ‘ಮ್ಯಾಗಿ’ ಗೆ ಹೋಲಿಸಿದ ಸ್ಟಾರ್ ‌ನಟಿ | ಹೇಳಿಕೆಗೆ ಭಾರೀ ಟೀಕೆ

Share the Article

ನಮ್ಮ‌ ದೇಶದಲ್ಲಿ ಸಿನಿಮಾ‌ ತಾರೆಯರನ್ನು ಫಾಲೋ ಮಾಡೋ ಜನ ತುಂಬಾ ಇದ್ದಾರೆ. ಹಾಗೆನೇ ಅವರು ಹೇಳೋ ಒಂದೊಂದು ಮಾತನ್ನು ಕೂಡಾ ಸಾಕಷ್ಟು ಮಂದಿ ಅನುಸರಿಸುತ್ತಾರೆ. ಇದಕ್ಕೆ ವಿರುದ್ಧವಾಗಿ ಕೆಲವೊಂದು ಸೆಲೆಬ್ರಿಟಿಗಳು ನೀಡುವ ಹೇಳಿಕೆಗಳು ನಿಜಕ್ಕೂ ವಿವಾದ ಸೃಷ್ಟಿಸಿದ ಎಷ್ಟೋ ಘಟನೆಗಳು ಇದೆ. ಕೆಲವರು ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಕೆಲವರು ಇಲ್ಲ.
ತಮಗೆ ಏನು ಹೇಳಬೇಕು ಅನಿಸುತ್ತದೆಯೋ ಅದನ್ನೇ ಹೇಳುತ್ತಾರೆ.

ಈಗ ಈ ಸಾಲಿಗೆ ನಟಿ ರೆಜಿನಾ ಕ್ಯಾಸಂಡ್ರಾ (Regina Cassandra) ನೀಡಿದ ಹೇಳಿಕೆ ಭಾರೀ ಚರ್ಚೆ ಹುಟ್ಟು ಹಾಕಿದೆ. ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ಅವರು ಜೋಕ್ ಮಾಡಿದ್ದಾರೆ. ಹೌದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆಗುತ್ತಿದೆ.

ರೆಜಿನಾ ಹಾಗೂ ನಿವೇದಾ ಥಾಮಸ್ ಅವರು ‘ಸಾಕಿನಿ ಧಾಕಿನಿ’ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಇತ್ತೀಚೆಗೆ ಒಂದು ಮಾಧ್ಯಮಕ್ಕೆ ಸಂದರ್ಶನ ನೀಡುವಾಗ ರೆಜಿನಾ ಡಬಲ್ ಮೀನಿಂಗ್ ಜೋಕ್ ಹೇಳಿದ್ದಾರೆ.

ರೆಜಿನಾ ಹಾಗೂ ನಿವೇದಾ ಥಾಮಸ್ ಅವರು ‘ಸಾಕಿನಿ ಧಾಕಿನಿ’ ಚಿತ್ರದಲ್ಲಿ ಬಿಡುಗಡೆ ಪ್ರಚಾರದಲ್ಲಿದ್ದಾರೆ. ಸುಧೀರ್ ವರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಸದ್ಯ ಇಬ್ಬರೂ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಒಂದು ಮಾಧ್ಯಮಕ್ಕೆ ಸಂದರ್ಶನ ನೀಡುವಾಗ ರೆಜಿನಾ ಡಬಲ್ ಮೀನಿಂಗ್ ಜೋಕ್ ಹೇಳಿದ್ದಾರೆ.

ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಅವರು ಮ್ಯಾಗಿಗೆ ಹೋಲಿಕೆ ಮಾಡಿದ್ದಾರೆ. ‘ಹುಡುಗರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. ಆದರೆ, ಅದನ್ನು ಹೇಳಬೇಕೋ ಅಥವಾ ಬೇಡವೋ ಎಂಬುದು ತಿಳಿಯುತ್ತಿಲ್ಲ’ ಎಂದು ಕೆಲ ಕಾಲ ಯೋಚಿಸಿದರು ಅವರು. ನಂತರ ಹೇಳಿಯೇ ಬಿಟ್ಟರು. ‘ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ’ ಎಂದು ನಕ್ಕರು. ಈ ಮಾತನ್ನು ಕೇಳಿ ಅಲ್ಲಿದ್ದವರೂ ನಕ್ಕರು. ಸದ್ಯ ಈ ಜೋಕ್‌ಗೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ‘ನಿಮಗೆ ಹೇಗೆ ಗೊತ್ತು’ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಮಾಡಿದ್ದಾರೆ.

ಪೋಲಿಸ್ ಅಕಾಡೆಮಿಯ ಇಬ್ಬರು ವಿದ್ಯಾರ್ಥಿಗಳು ಮಾನವ ಕಳ್ಳ ಸಾಗಣೆಯನ್ನು ಬಯಲಿಗೆ ಎಳೆಯುವ ಕಥಾ ಹಂದರವನ್ನು ಹೊಂದಿರುವ ಕಥೆಯೇ ಈ ಸಾಕಿನಿ ಧಾಕಿನಿ ಸಿನಿಮಾ. ಈ ಸಿನಿಮಾ 2017ರಲ್ಲಿ ತೆರೆಗೆ ಬಂದಿತ್ತು. ಮೂಲ ಸಿನಿಮಾದಲ್ಲಿ ಇಬ್ಬರು ನಟರನ್ನು ಹಾಕಿಕೊಂಡು ಸಿನಿಮಾ ಮಾಡಲಾಗಿತ್ತು. ಆದರೆ, ಇಲ್ಲಿ ಇಬ್ಬರು ನಟಿಯರನ್ನು ಹಾಕಿಕೊಂಡು ಸಿನಿಮಾ ಮಾಡಲಾಗುತ್ತಿದೆ. 2010ರಲ್ಲಿ ತೆರೆಗೆ ಬಂದ ‘ಸೂರ್ಯಕಾಂತಿ’ ಎಂಬ ಕನ್ನಡ ಸಿನಿಮಾದಲ್ಲೂ ರೆಜಿನಾ ನಟಿಸಿದ್ದರು. ಅಂದ ಹಾಗೇ ಈ ಸಿನಿಮಾಗೆ ಚೇತನ್ ಕುಮಾರ್ ಹೀರೋ.

https://twitter.com/prettyGowri/status/1568159736503349251?ref_src=twsrc%5Etfw%7Ctwcamp%5Etweetembed%7Ctwterm%5E1568159736503349251%7Ctwgr%5E87ba69701f15d73f900a7a8df27363a7acbd32b1%7Ctwcon%5Es1_c10&ref_url=https%3A%2F%2Fd-1932888132257451311.ampproject.net%2F2208242209000%2Fframe.html
Leave A Reply