UGC ಮಹತ್ವದ ಮಾಹಿತಿ |ದೂರಶಿಕ್ಷಣ, ಆನ್‌ಲೈನ್, ಮುಕ್ತ ಪದವಿಗಳು ರೆಗ್ಯುಲರ್ ಪದವಿಗೆ ಸಮಾನ

ಮುಕ್ತ, ದೂರ ಶಿಕ್ಷಣ ಅಥವಾ ಆನ್‌ಲೈನ್ ಮೋಡ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಸಾಂಪ್ರದಾಯಿಕ ವಿಧಾನದ ಮೂಲಕ ನೀಡಲಾಗುವ ಇತರೆ ಪದವಿಗಳಿಗೆ ಸಮನವಾಗಿ ಪರಿಗಣಿಸಲಾಗುವುದು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಘೋಷಿಸಿದೆ.

 

ಮುಕ್ತ, ದೂರ ಶಿಕ್ಷಣ ಅಥವಾ ಆನ್‌ಲೈನ್ ಮೋಡ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ಗುಡ್ ನ್ಯೂಸ್ ನೀಡಿದೆ. ಮುಕ್ತ, ದೂರ ಶಿಕ್ಷಣ ಅಥವಾ ಆನ್‌ಲೈನ್ ಮೋಡ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಸಾಂಪ್ರದಾಯಿಕ ವಿಧಾನದ ಮೂಲಕ ನೀಡಲಾಗುವ ಇತರೆ ಪದವಿಗಳಿಗೆ ಸಮಾನವಾಗಿ ಪರಿಗಣಿಸಲಾಗುವುದು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಘೋಷಿಸಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಮುಕ್ತ ಮತ್ತು ದೂರಶಿಕ್ಷಣ ಕಾರ್ಯಕ್ರಮಗಳು ಮತ್ತು ಆನ್‌ಲೈನ್ ಕಾರ್ಯಕ್ರಮಗಳು, ನಿಯಮಾವಳಿಗಳು, 2022ರ ನಿಯಮ 22 ರ ಪ್ರಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕಾರ್ಯದರ್ಶಿ ರಜನೀಶ್ ಜೈನ್ ಮಾಹಿತಿ ನೀಡಿದರು.

ಈ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗವು, ಪದವಿ ನೀಡುವ ಉನ್ನತ ಶಿಕ್ಷಣ ಸಂಸ್ಥೆಗಳು ಆಯೋಗವು ನಿಗದಿಪಡಿಸಿದ ನಿಯಮಗಳ ಅಡಿಯಲ್ಲಿ ಮಾನ್ಯತೆ ಪಡೆದರೆ, ಪದವಿ ಮತ್ತು ಸ್ನಾತಕೋತ್ತರ ಪದವಿಯು, ಮುಕ್ತ, ದೂರ ಶಿಕ್ಷಣ ಅಥವಾ ಆನ್‌ಲೈನ್ ಮೋಡ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಸಾಂಪ್ರಧಾಯಿಕ ವಿಧಾನದ ಮೂಲಕ ಪದವಿಗೆ ಸಮನವಾಗಿ ಪರಿಗಣಿಸಬೇಕು ಎಂದು ಈ ಮೂಲಕ ತಿಳಿಸಿದೆ.

Leave A Reply

Your email address will not be published.