EPFO : ಉದ್ಯೋಗಿಗಳಿಗೆ ದೀಪಾವಳಿಗೂ ಮುನ್ನ ಭರ್ಜರಿ ಗಿಫ್ಟ್ !!!
ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಅಸಂಘಟಿತ ವಲಯದ ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ್ದು, ಅವರನ್ನೂ ಈ ಯೋಜನೆಯಲ್ಲಿ ಸೇರಿಸಲಾಗುವುದು ಎಂದು ಘೋಷಿಸಿದೆ. ಪಿಂಚಣಿ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ದೀಪಾವಳಿಗೆ ಮೊದಲು ಪಿಎಫ್ ಖಾತೆದಾರರಿಗೆ
ಸಿಹಿ ಸುದ್ದಿ ಸಿಗಲಿದೆ. ಖಾಸಗಿ ವಲಯದ ಉದ್ಯೋಗಿಗಳಿಗೆ, ಇಪಿಎಫ್ಒ ದೀಪಾವಳಿಗೆ ಮೊದಲು ಬಡ್ಡಿಯನ್ನು ಕ್ರೆಡಿಟ್ ಮಾಡುತ್ತದೆ. ಶೇಕಡಾ 8.1ರಷ್ಟು ಬಡ್ಡಿ ದರವನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಗ್ರಾಹಕರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎನ್ನಲಾಗಿದೆ.
ಈ ಉದ್ದೇಶಿತ ಯೋಜನೆಯಲ್ಲಿ ನಿವೃತ್ತಿ ಪಿಂಚಣಿ, ವಿಂತತು ಪಿಂಚಣಿ, ಮಕ್ಕಳ ಪಿಂಚಣಿ ಮತ್ತು ಅಂಗವೈಕಲ್ಯ ಪಿಂಚಣಿಗೆ ವಿಶೇಷ ನಿಬಂಧನೆಗಳನ್ನು ಒಳಗೊಂಡಿದೆ. ಇದನ್ನು ಪಡೆಯಲು, ಸೇವೆಯಕನಿಷ್ಠ ಅರ್ಹತಾ ಅವಧಿಯನ್ನು 10 ರಿಂದ 15 ವರ್ಷಗಳಿಗೆ ಹೆಚ್ಚಿಸಲಾಗುವುದು.
ಅಸಂಘಟಿತ ವಲಯದಲ್ಲಿ 60 ವರ್ಷ ತುಂಬಿದ ನಂತರ ಈ ಯೋಜನೆ ಜಾರಿಗೆ ಬಂದರೆ ತಿಂಗಳಿಗೆ 3,000 ರೂ. ಸಿಗಲಿದೆ.
ಈ ಯೋಜನೆಯ ಪ್ರಕಾರ, ನೀವು 60 ವರ್ಷಕ್ಕಿಂತ ಮೊದಲು ಮೃತಪಟ್ಟರೇ, ಅದನ್ನು ನಿಮ್ಮ ಕುಟುಂಬ ಸದಸ್ಯರಿಗೆ ನೀಡಲಾಗುತ್ತದೆ. ಈ ಹಣವನ್ನು ಪಡೆಯಲು, ನೀವು 5.4 ಲಕ್ಷ ರೂ.ಗಳನ್ನ ಠೇವಣಿ ಇಡಬೇಕು. ನಂತರ ತಿಂಗಳಿಗೆ 3,000 ರೂಪಾಯಿ ಲಭ್ಯವಾಗಲಿದೆ. ಇನ್ನು ಈ ಪಿಂಚಣಿಯು ಏನನ್ನು ಪಾವತಿಸಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅಂದ್ದಾಗೆ. ತಿಂಗಳಿಗೆ 15,000 ರೂ.ಗಳನ್ನ ಗಳಿಸುವ ಎಲ್ಲರೂ ಇಪಿಎಫ್ಒಗೆ ಪಾವತಿಸಬಹುದು.