ನೀರಿನಿಂದ ಮೇಲೆ ಬಂದ ಪುರಾತನ ಮಸೀದಿ | ಭಾರೀ ಕುತೂಹಲ ಕೆರಳಿಸಿದ ಘಟನೆ
ನೀರಿನಲ್ಲಿ ಮುಳುಗಿದ್ದ ಪ್ರಾಚೀನ ಮಸೀದಿಯೊಂದು ಮೇಲೆ ಬಂದಿದ್ದು ನಿಜಕ್ಕೂ ವಿಸ್ಮಯವೆಂದೇ ಹೇಳಬಹುದು. ಹಲವಾರು ವರ್ಷಗಳಿಂದ ಜಲಾವೃತವಾಗಿದ್ದ ಬಿಹಾರದ ಚಿರೈಲಾ ಗ್ರಾಮದ ಮಸೀದಿಯೊಂದು ಇದೀಗ ಸಂಪೂರ್ಣ ಗೋಚರಿಸಿ ಕೊಂಡಿದ್ದು, ನಿಜಕ್ಕೂ ಕುತೂಹಲಕ್ಕೆ ಕಾರಣವಾಗಿದೆ.
ಅಷ್ಟು ಮಾತ್ರವಲ್ಲದೇ, ಈ ಸುದ್ದಿ ಇಡೀ ಪ್ರದೇಶದಲ್ಲಿ ಹಬ್ಬಿದ್ದು, ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. 120 ವರ್ಷಗಳಷ್ಟು ಹಳೆಯದು ಎಂದು ಹೇಳಲಾದ ಈ ಮಸೀದಿಯು ಬಿಹಾರದ (Bihar) ನವಾಡ ಜಿಲ್ಲೆಯ ರಲಿ ಬ್ಲಾಕ್ನ ಫುಲ್ವಾರಿಯಾ ಅಣೆಕಟ್ಟಿನ ದಕ್ಷಿಣ ಭಾಗದಲ್ಲಿ ಪತ್ತೆಯಾಗಿದೆ.
ಸುಮಾರು ಮೂರು ದಶಕಗಳ ಕಾಲ ಈ ಮಸೀದಿಯು (Mosque In Water) ಸಂಪೂರ್ಣ ನೀರಿನಲ್ಲಿ ಮುಳುಗಿದ್ದರೂ, ಕಿಂಚಿತ್ತೂ ಹಾನಿಯಾಗಿಲ್ಲ ಎಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಭಾರೀ ಕುತೂಹಲಗೊಂಡ ಜನರು, ನೀರಿನಲ್ಲಿ ಮುಳುಗಿದ್ದ ಈ ಮಸೀದಿ ನೀರಿನಿಂದ ಹೊರಬಂದು ಸಂಪೂರ್ಣ ಕಾಣಲಾರಂಭಿಸಿದ ನಂತರ, ಅನೇಕ ಮುಸ್ಲಿಂ ಯುವಕರು ಕೈಯಲ್ಲಿ ಗುದ್ದಲಿ ಹಿಡಿದು ಕೆಸರು ಪ್ರವೇಶಿಸಿ ಮಸೀದಿ ಬಳಿ ತಲುಪಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಮಸೀದಿಯ ಬಳಿ ತೆರಳಲು ಪ್ರಯತ್ನಿಸಿದರೂ ಕೆಸರು ಮತ್ತು ನೀರಿನಿಂದ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಹಾಗೆನೇ ಅನೇಕ ಮುಸ್ಲಿಂ ಮಹಿಳೆಯರು ಸಹ ಮಸೀದಿಯನ್ನು ನೋಡಲು ಕುತೂಹಲದಿಂದ ಸ್ಥಳಕ್ಕೆ ಆಗಮಿಸಿದ್ದಾರೆ.
ಗುಮ್ಮಟದ ಒಂದು ಭಾಗ ಮಾತ್ರ ಈ ಮೊದಲು ಕಾಣುತ್ತಿತ್ತು. ಈ ಫುಲ್ವಾರಿಯಾ ಅಣೆಕಟ್ಟನ್ನು 1984 ರಲ್ಲಿ ನಿರ್ಮಿಸಲಾಗಿದ್ದು, ಹೆಚ್ಚಿನ ಜನಸಂಖ್ಯೆ ಹೊಂದಿದ್ದರಿಂದ ಅಣೆಕಟ್ಟು ನಿರ್ಮಾಣಕ್ಕಾಗಿ ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.
ಅನಂತರ ಈ ಸ್ಥಳಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರ ಮಾಡಲಾಯಿತು. ಅವರೆಲ್ಲರೂ ಸಮೀಪದ ಹಾರ್ದಿಯಾ ಎಂಬ ಪ್ರದೇಶದಲ್ಲಿ ನೆಲೆ ನಿಂತರು. ಆಮೇಕೆ ಅಣೆಕಟ್ಟು ಕಟ್ಟಿದ ನಂತರ ಮಸೀದಿಯನ್ನು ಹಾಗೆಯೇ ಬಿಡಲಾಗಿತ್ತು. ಈ ಹಿಂದೆ ನೀರಿನ ಮಟ್ಟ ಕಡಿಮೆಯಾದಾಗ, ಮಸೀದಿಯ ಮೇಲಿನ ಗುಮ್ಮಟದ ಒಂದು ಭಾಗ ಮಾತ್ರ ಗೋಚರಿಸುತ್ತಿತ್ತು. ಆದರೆ ಈ ಬಾರಿ ಇಡೀ ಮಸೀದಿಯೇ ಕಾಣುತ್ತಿರುವುದು ಸ್ಥಳೀಯರ ಕುತೂಹಲ ಕೆರಳಿಸಿದೆ.
ಸುಮಾರು 30 ಅಡಿ ಎತ್ತರದ ಮಸೀದಿ ಜನರು ಈ ಮಸೀದಿಯ ಬಗ್ಗೆ ಏನೂ ಮಾಡಲು ಸಾಧ್ಯವಾಗಿರಲಿಲ್ಲ. ಈಗ ನೀರು ಇಳಿದಿದ್ದು ಮಸೀದಿಯು ಸಂಪೂರ್ಣವಾಗಿ ಗೋಚರಿಸಿದೆ. ಹೀಗಾಗಿ ಮಸೀದಿಯನ್ನು ಸಂಪೂರ್ಣವಾಗಿ ನೋಡಲು ಮತ್ತು ಈ ಕಟ್ಟಡದ ವಾಸ್ತುಶಿಲ್ಪವನ್ನು ವೀಕ್ಷಿಸಬಹುದಾಗಿದೆ. ನೆಲದಿಂದ ಮೇಲಿನ ಗುಮ್ಮಟದವರೆಗೆ ಮಸೀದಿಯ ಎತ್ತರ ಸುಮಾರು 30 ಅಡಿ ಎಂದು ಹೇಳಲಾಗಿದೆ.