KPSC ಯಿಂದ ಮತ್ತೊಂದು ಅಧಿಸೂಚನೆ ಪ್ರಕಟ
ಕರ್ನಾಟಕ ಲೋಕ ಸೇವಾ ಆಯೋಗವು ಇದೀಗ ರಾಜ್ಯೇತರ ಸಿವಿಲ್ ಸರ್ವೀಸ್ (Non State Civil Service) ಹುದ್ದೆಗಳಲ್ಲಿನ ಅಧಿಕಾರಿಗಳನ್ನು ಭಾರತೀಯ ಸೇವಾ ವೃಂದಕ್ಕೆ ಆಯ್ಕೆ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 08-09-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-09-2022
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 01-10-2022
ಅರ್ಜಿ ಶುಲ್ಕ : ಅರ್ಜಿಯನ್ನು ಸಲ್ಲಿಸುವ ಎಲ್ಲಾ ಅಧಿಕಾರಿಗಳು ರೂ.600 ಜತೆಗೆ, ಕಡ್ಡಾಯವಾಗಿ ರೂ.35 ರ ಪ್ರಕ್ರಿಯೆ ಶುಲ್ಕವನ್ನು ಪಾವತಿ ಮಾಡಬೇಕು.
ವಯೋಮಿತಿ : ಅಭ್ಯರ್ಥಿಯ ವಯೋಮಿತಿ 2021 ರ ಜನವರಿ ತಿಂಗಳ ಮೊದಲನೇ ದಿನಕ್ಕೆ (01-01 2021) 56 ವರ್ಷಕ್ಕಿಂತ ಕಡಿಮೆ ಇರತಕ್ಕದ್ದು.
ಇತರೆ ಅರ್ಹತೆ : ರಾಜ್ಯ ನಾಗರಿಕ ಸೇವಾ ವೃಂದದಲ್ಲಿ ಡೆಪ್ಯೂಟಿ ಕಲೆಕ್ಟರ್ (ಸಹಾಯಕ ಆಯುಕ್ತರು, ಕಂದಾಯ ಉಪ-ವಿಭಾಗ) ಹುದ್ದೆಗೆ ತತ್ಸಮಾನವೆಂದು ನಿಗದಿಪಡಿಸಿದ ರಾಜ್ಯ ಸರ್ಕಾರದ ಗ್ರೂಪ್ ಎ ವೃಂದದ ಗೆಜೆಟೆಡ್ ಹುದ್ದೆಯಲ್ಲಿ ಜನವರಿ ತಿಂಗಳ ಮೊದಲನೇ ದಿನದಂದು 08 ವರ್ಷಗಳಿಗೆ ಕಡಿಮೆ ಅಲ್ಲದ ನಿರಂತರ ಸೇವೆಯನ್ನು ಸಲ್ಲಿಸಿರತಕ್ಕದ್ದು.
ದಿನಾಂಕ 10-02- 2022 ಹಾಗೂ ತಿದ್ದುಪಡಿಗಳನ್ವಯ ಗ್ರೂಪ್ ‘ಎ’ ವೃಂದದ ಒಟ್ಟು 04 ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ನಿರ್ಧರಿಸಿದೆ. ಆಯೋಗವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಅರ್ಹ ಅಧಿಕಾರಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತಾತ್ಕಾಲಿಕವಾಗಿ ಪರೀಕ್ಷೆಯನ್ನು ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ನಡೆಸಲಾಗುವುದು ಎಂದು ತಿಳಿಸಲಾಗಿದೆ. ನಿರ್ದಿಷ್ಟ ದಿನಾಂಕವನ್ನು ನಂತರದಲ್ಲಿ ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ