ಐತ್ತೂರು ಗ್ರಾ.ಪಂ. ಅಧ್ಯಕ್ಷರ ವಿರುದ್ದ ಉಪಾಧ್ಯಕ್ಷರ ಸಹಿತ ಆರು ಸದಸ್ಯರಿಂದ ಅವಿಶ್ವಾಸ ನಿರ್ಣಯ ಮಂಡನೆ | ಗುಪ್ತ ಸ್ಥಳದಲ್ಲಿ ಸದಸ್ಯರು- ಹೈಡ್ರಾಮ
ಕಡಬ: ಹಲವಾರು ವಿಚಾರಗಳಿಗೆ ಸಂಬಂಧಿಸಿ ಸುದ್ದಿಯಲ್ಲಿರುವ ಐತ್ತೂರು ಗ್ರಾ.ಪಂ.ನಲ್ಲಿ ಇದೀಗ ಅಧ್ಯಕ್ಷರ ವಿರುದ್ದ ವೇ ಉಪಾಧ್ಯಕ್ಷ ರ ಸಹಿತ ಆರು ಮಂದಿ ಸದಸ್ಯ ರು ಅವಿಶ್ವಾಸ ನಿರ್ಣಯ ಎ.ಸಿ.ಯವರಿಗೆ ಸಲ್ಲಿಸಿದ್ದು ಈ ಸಂಬಂಧ ಅವಿಶ್ವಾಸ ಗೊತ್ತುವಳಿ ಸಭೆಯು ಐತ್ತೂರು ಗ್ರಾಮ ಪಂಚಾಯತ್ ನಲ್ಲಿ ಆ.8ರಂದು ನಡೆಯಲಿದೆ.
ಒಟ್ಟು 11 ಸದಸ್ಯ ಬಲದ ಪಂಚಾಯತ್ ನಲ್ಲಿ ಆರು ಜನ ಬಿಜೆಪಿ ಬೆಂಬಲಿತ ಸದಸ್ಯರು ಮತ್ತು ಐದು ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಸ್ಥಾನಕ್ಕೆ ನಿಗದಿಯಾಗಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶ್ಯಾಮಲ ಅವರಿಗೆ ಅದೃಷ್ಟ ಒಲಿದು ಬಂದಿತ್ತು. ಆದರೆ ಬಳಿಕದ ಬೆಳವಣಿಗೆಯಲ್ಲಿ ಅಧ್ಯಕ್ಷರ ವಿರುದ್ದ ಹೆಚ್ಚಿನ ಸದಸ್ಯ ರಿಗೆ ಕೆಲವೊಂದು ವಿಚಾರದಲ್ಲಿ ಅವಿಶ್ವಾಸ ಮೂಡಿತ್ತು. ಈ ಸಮಸ್ಯೆಯು ತಲ ಮಟ್ಟದಲ್ಲಿ ಇತ್ಯರ್ಥವಾಗದೆ ಇರುವುದರಿಂದ ಇಂದು ಅವಿಶ್ವಾಸ ಮಂಡನೆ ಹಂತಕ್ಕೆ ತಲುಪಿದೆ.
ಈಗಾಗಲೇ ಬಿಜೆಪಿ ಬೆಂಬಲಿತ ಆರು ಸದಸ್ಯರಿಗೆ ಕಾಂಗ್ರೆಸ್ ಬೆಂಬಲಿತ ಎರಡು ಅಥವಾ ಮೂರು ಸದಸ್ಯರು ಬೆಂಬಲ ನೀಡಿರುವುದರಿಂದ ಅಧ್ಯಕ್ಷರು ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವುದು ಬಹುತೇಕ ಖಚಿತವಾಗಿದೆ
ಸದಸ್ಯರು ಗುಪ್ತ ಜಾಗದಲ್ಲಿ!
ಮುಖಂಡರಿಂದ ಮೀಟಿಂಗ್…ಮೀಟಿಂಗ್
ಈಗಾಗಲೇ ಕಾಂಗ್ರೆಸ್ ನ ಇಬ್ಬರು ಅಥವಾ ಮೂವರು ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರಿಗೆ ಬೆಂಬಲ ನೀಡಿರುವುದರಿಂದ ಸಹಜವಾಗಿ ಪಕ್ಷ ರಾಜಕೀಯ ಮಧ್ಯಪ್ರವೇಶ ಆಗಿದ್ದು ಇನ್ನಷ್ಟು ರಂಗು ಪಡೆದಿದೆ. ಈಗಾಗಲೇ ಹೆಚ್ವಿನ ಸದಸ್ಯರು ಗುಪ್ತ ಜಾಗದಲ್ಲಿ ಇದ್ದು ಸಭೆಗೆ ಒಟ್ಟಿಗೆ ಬಂದು ಹಾಜರಾಗಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ನಿನ್ನೆಯಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಸಭೆಗಳನ್ನು ನಡೆಸಿದ್ದು ಹೈಡ್ರಾಮಗಳೇ ನಡೆಯುತ್ತಿದೆ.