Viral video : ಮಹಿಳಾ ವೇಷಧಾರಿ ಕಲಾವಿದ, ಅದ್ಭುತ ನೃತ್ಯ ಮಾಡುತ್ತಿರುವಾಗಲೇ ಕುಸಿದು ಸಾವು
ಇತ್ತೀಚೆಗೆ ಸಣ್ಣ ಪ್ರಾಯದಲ್ಲೇ ಹೃದಯಾಘಾತವಾಗುವ ವರದಿಯನ್ನು ನಾವು ಕೇಳ್ತಾ ಇರುತ್ತೇವೆ. ಇಲ್ಲೊಂದು ಆದ ಘಟನೆ ನಿಜಕ್ಕೂ ದುರದೃಷ್ಟಕರ ಎಂದೇ ಹೇಳಬಹುದು. ಏಕೆಂದರೆ, ಗಣೇಶೋತ್ಸವ ಸಂದರ್ಭದಲ್ಲಿ ಹೆಣ್ಣು ವೇಷಧಾರಿ ಯುವಕನೋರ್ವ ಹಠಾತ್ ಹೃದಯಾಘಾತಗೊಂಡ ಘಟನೆಯೊಂದು ನಡೆದಿದ್ದು, ಅಲ್ಲಿ ಇದ್ದ ಪ್ರೇಕ್ಷಕರು ಇದೊಂದು ನಟನೆಯೇನೋ ಅನ್ನೋವಾಗೇ ನೋಡಿದ್ದಾರೆ.
ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಕಲಾವಿದ ಯೋಗೇಶ್ ಮಹಿಳೆಯಂತೆ ವೇಷ ಧರಿಸಿ ನೃತ್ಯ,
ಪ್ರೇಕ್ಷಕರ ಮುಂದೆ ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿದೆ.
ಬುಧವಾರ ಜಮ್ಮುವಿನ ಬಿಷಾಹ್ ಪ್ರದೇಶದಲ್ಲಿ ಹೃದಯಾಘಾತದಿಂದ (Heart Attack) ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿದ್ದಾಗ ಕಲಾವಿದ ಸಾವನ್ನಪ್ಪಿದ್ದಾರೆ. ಜಮ್ಮುವಿನ ಕೋಥೇ ಗ್ರಾಮದಲ್ಲಿ ಗಣೇಶ ಉತ್ಸವ ಕಾರ್ಯಕ್ರಮದ ವೇಳೆ ನೃತ್ಯ ಪ್ರದರ್ಶನ ನೀಡುತ್ತಿದ್ದ ವೇಳೆ 20 ವರ್ಷದ ಕಲಾವಿದ ಕುಸಿದು ಬಿದ್ದಿದ್ದಾರೆ.
ಈ ವಿಡಿಯೋ ಕ್ಲಿಪ್‌ನಲ್ಲಿ, ಕಲಾವಿದ ಯೋಗೇಶ್ ಮಹಿಳೆಯಂತೆ ವೇಷ ಧರಿಸಿ ನೃತ್ಯ ಮಾಡುತ್ತಿದ್ದರು. ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮುಂದೆ ನೃತ್ಯ ಮಾಡುತ್ತಿರುವಾಗಲೇ ದಿಢೀರ್ ಹೃದಯಾಘಾತಗೊಂಡಿದ್ದು, ಕೂಡಲೇ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಆ ನಾಟಕದಲ್ಲಿ ತಮ್ಮ ಪಾತ್ರ ಮಾಡುತ್ತಾ ಕೆಳಗೆ ಬಿದ್ದಿರಬಹುದು ಎಂದು ಪ್ರೇಕ್ಷಕರು ಭಾವಿಸಿದ್ದರು. ಆದರೆ, ಕೆಳಗೆ ಬಿದ್ದ ಕಲಾವಿದ ಎಷ್ಟು ಹೊತ್ತಾದರೂ ಏಳದಿದ್ದಾಗ, ಪ್ರಜ್ಞೆ ತಪ್ಪಿ ಬಿದ್ದಿರುವುದು ಎಂದು ಜನರಿಗೆ ಅರಿವಾಗಿದೆ.
20 ವರ್ಷದ ಈ ಯುವಕಲಾವಿದನ ಸಾವು ನಿಜಕ್ಕೂ ಅಲ್ಲಿನ ಜನರನ್ನು ದಿಗ್ಭ್ರಮೆ ಗೊಳಿಸಿದೆ.