ಸುಷ್ಮಿತಾ ಸೇನ್ ಗೆ ಕೇವಲ ಒಂದು ತಿಂಗಳಲ್ಲೇ ಆಯಿತು ಬೋರ್ । ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ !

ಒಂದೂವರೆ ತಿಂಗಳ ಹಿಂದೆ, ಜನುಮದ ಜೋಡಿ ಥರ ಇದ್ದ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಮತ್ತು ಐಪಿಲ್ ಕ್ರಿಕೆಟ್ ನ ಜನಕ ಲಲಿತ್ ಮೋದಿ ಬ್ರೇಕಪ್ ಮಾಡಿಕೊಂಡ ಸುದ್ದಿ ಬಂದಿದೆ. ಕೆಲವೇ ವಾರಗಳ ಹಿಂದೆ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಆಕೆಯೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ಘೋಷಿಸಿದ್ದರು. ಸುಷ್ಮಿತಾ ಜೊತೆಗೆ ತಾವು ಅತೀ ಸಲುಗೆಯಿಂದ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ತಿಂಗಳ ಕೆಳಗೆ ಹುಟ್ಟಿಕೊಂಡ ಈ ಸಂಬಂಧ ಅಷ್ಟರಲ್ಲೇ ಹಳಸಿದೆ.

 

ಸುಷ್ಮಿತಾ ಜೊತೆ ತಾವು ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಮೋದಿ ಬಹಿರಂಗ ಪಡಿಸುತ್ತಿದ್ದಂತೆಯೇ ಸುಷ್ಮಿತಾ ವಿದೇಶಕ್ಕೆ ಹಾರಿದರು. ಈಜುಡುಗೆಯಲ್ಲಿ ಸುಶ್ಮಿತಾ ಸೇನ್ ಸಮುದ್ರಕ್ಕೆ ಹಾರಿರುವ ವಿಡಿಯೋ ವೈರಲ್ ಆಗಿತ್ತು. ಕೇವಲ ಬೆನ್ನು ಮಾತ್ರ ಕಾಣುವ ಈ ವೀಡಿಯೋ ನೋಡಿ, ಅವರ ಪ್ರಿಯಕರ ಲಲಿತ್ ಮೋದಿ ಮಾಡಿರುವ ಕಮೆಂಟ್ ಇದೀಗ ಭಾರೀ ಸುದ್ದಿಯಾಗಿತ್ತು. ಆಗ ಲಲಿತ್ ಮೋದಿ ಆಕೆಗೆ ಲುಕಿಂಗ್ ಸೆಕ್ಸಿ ಎಂದು ಕಾಮೆಂಟ್ ಮಾಡಿದ್ದರು. ಆದರೆ ಈಗ ಅದೆಲ್ಲ ಯಾವುದೂ ಇಲ್ಲ, ಇಬ್ಬರಿಗೂ ಬ್ರೇಕಪ್ ಮಾಡಿಕೊಂಡ ಸುದ್ದಿ ಕನ್ಫರ್ಮ್ ಆಗಿದೆ. ಅದಕ್ಕೆ ಕಾರಣ ಯಾರು ಎಂದು ಹುಡುಕುತ್ತಾ ಹೋಗಲು ಸಿಗುವುದು ಸುಷ್ಮಿತಾ ಸೇನ್ ಳ ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್.

“ಕುಟುಂಬಗಳೊಂದಿಗೆ ಸುತ್ತುತ್ತಿರುವ ಜಾಗತಿಕ ಪ್ರವಾಸದ ನಂತರ ಲಂಡನ್‌ಗೆ ಹಿಂತಿರುಗಿ #ಮಾಲ್ಡೀವ್ಸ್ #ಸಾರ್ಡಿನಿಯಾ – ನನ್ನ #ಬೆಟರ್‌ಹಾಫ್ @sushmitasen47. ಅಂತಿಮವಾಗಿ ಹೊಸ ಜೀವನಕ್ಕೆ ಹೊಸ ಆರಂಭ. ಚಂದ್ರನ ಮೇಲೆ,” ಎಂದು ಮೋದಿ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದರು. ಈ ಹಳೆಯ ಜೋಡಿ ಹೊಸ ಮಧು ಚಂದ್ರದ ಮೂಡ್ ನಲ್ಲಿತ್ತು. ಈಗ ಮಧು ಕರಗಿ ಮನಸ್ಸು ಕಹಿಯಾಗಿದೆ. ಸಿಂಪಲ್ಲಾಗಿ ಬ್ರೇಕ್ ಅಫ್ ಆಗಿದೆ.

ಮೊನ್ನೆಯಷ್ಟೇ ಸುಷ್ಮಿತಾ ಸೇನ್ ತಮ್ಮ ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ವಿದೇಶದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಮೋದಿ ಮತ್ತು ಸುಷ್ ನಡುವೆ ಹಿಂದೆ ಇದ್ದ ಸಮೀಕರಣಗಳು ಬದಲಾಗಿವೆ. ಮಾಜಿ ಬಾಯ್ ಫ್ರೆಂಡ್ ಜೊತೆ ಮತ್ತೆ ಸುಷ್ಮಿತಾ ಟೈ ಅಪ್ ಮಾಡ್ಕೊಂಡ್ರಾ ಎನ್ನುವ ಪ್ರಶ್ನೆಗಳು ಕೂಡ ಮೂಡಿದ್ದವು. ಈ ವಿಷಯ ಲಲಿತ್ ಮೋದಿಗೆ ಗೊತ್ತಾಗಿ ಸಿಡಿದು ಕೂತಿದ್ದರಂತೆ. ಅವರಿಗೆ ಭಾರೀ ಮುಜುಗರ ಆಗಿ ಸುಷ್ಮಿತಾ ಜತೆ ಮನಸ್ತಾಪ ಆಗಿದೆ ಅನ್ನುವುದು ಈಗಿನ ಫ್ರೆಶ್ ನ್ಯೂಸ್.

ಮಾಜಿ ಬಾಯ್ ಫ್ರೆಂಡ್ ಜೊತೆ ಸುಷ್ಮಿತಾ ವಿದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಲಲಿತ್ ಮೋದಿ, ಆಕೆಯನ್ನು ಸೋಷಿಯಲ್ ಮೀಡಿಯಾದಿಂದ ಅನ್ ಫ್ರೆಂಡ್ ಮಾಡಿದ್ದಾನೆ. ಇನ್ಸ್ಟಾದಲ್ಲಿ ತಮ್ಮ ಹೆಸರಿನ ಮುಂದೆ ಸುಷ್ಮಿತಾ ಹೆಸರು ಹಾಕಿಕೊಂಡಿದ್ದರು. ಅದನ್ನೂ ಕೂಡ ಅವರು ತಗೆದಿದ್ದಾರೆ. ಅಲ್ಲಿಗೆ ಸುಷ್ಮಿತಾ ಪ್ರೀತಿ ಸಮುದ್ರದ ತಿಳಿ ನೀರಿನಲ್ಲಿ ಎಳ್ಳಿನ ಜತೆ ತೇಲಿ ಬಿಟ್ಟಂತಾಗಿದೆ. ಕಂಡ ಕಂಡ ವಿಕೆಟ್ ಕೆಡವಿದ ಸುಶ್ಮಿತಾ ಸೇನ್, ಐಪಿಎಲ್ ಜನಕ ಲಲಿತ್ ಮೋದಿ ಸೇರಿ 12 ಜನ ಬ್ಯಾಟ್ಸ್ ಮ್ಯಾನ್ ಪ್ರೀತಿಯ ಆಟ ಆಡಿ ಈಗ ಮತ್ತೆ ಹೊಸ ಬ್ಯಾಟ್ ಮ್ಯಾನ್ ನ ಹುಡುಕಾಟದಲ್ಲಿದ್ದಾಳೆ. ಆಗ ಸಿಕ್ಕಿದ್ದು ಹಳೆಯದೇ ಗೆಳೆಯ. ಬದುಕಿನ ಕ್ರಿಕೆಟ್ಟಿನಲ್ಲಿ ಒಮ್ಮೆ ಔಟಾದರೂ ಮತ್ತೆ ಮತ್ತೆಯೇ ಆಡುವ ಅವಕಾಶ ಸಿಗುತ್ತೆ. ಹಾಗಾಗಿ ರೋಹ್ಮನ್ ಶಾಲ್ ಜತೆ ಹೊಸ ಆಟ ಶುರುವಾಗಿದೆ.

Leave A Reply

Your email address will not be published.