ಉಚಿತ ಅಕ್ಕಿ ವಿತರಣೆ ವಾಪಾಸ್ ಪಡೆಯುವ ಮೂಲಕ ಬಿಜೆಪಿ ಬಡವರ ಅನ್ನದ ತಟ್ಟೆಗೆ ಒದೆಯುವ ಕೆಲಸ ಮಾಡಿದೆ-ನಾಗರಾಜ್ ಎಸ್ ಲಾಯಿಲ
ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ಉಚಿತ ಅಕ್ಕಿಯನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ವಾಪಸ್ ಪಡೆಯುವ ಮೂಲಕ ಬಡವರ ಅನ್ನದ ತಟ್ಟೆಗೆ ಒದೆಯುವ ನೀಚ ರಾಜಕೀಯ ಮಾಡಿದೆ.
ರಾಜ್ಯದಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಮತ್ತು ಬಡತನ ಮುಕ್ತ ರಾಜ್ಯದ ಪರಿಕಲ್ಪನೆಯೊಂದಿಗೆ ಜಾರಿಗೆ ತಂದ ಉಚಿತ ಅಕ್ಕಿ ವಿತರಣೆಯನ್ನು ರಾಜ್ಯದ ಬಿಜೆಪಿ ಸರ್ಕಾರ ವಾಪಸ್ ಪಡೆಯುವ ಮೂಲಕ ಇದೊಂದು ಶ್ರೀಮಂತರ ಬೂಟ್ ನೆಕ್ಕುವ ಪಕ್ಷವೆಂದು ಸಾಬೀತಾಗಿದೆ. ಭಜನೆ ಮಾಡುವ ಮೂಲಕ ಅಪೌಷ್ಟಿಕತೆ ನಿರ್ಮೂಲನೆ ಆಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿದರೆ ಅಪೌಷ್ಟಿಕತೆ ನಿರ್ಮೂಲನೆ ಆಗುವುದಿಲ್ಲ . ಬದಲಾಗಿ ಪಡಿತರ ಚೀಟಿಯಲ್ಲಿ ಅಕ್ಕಿ , ಗೋಧಿ ಸೇರಿದಂತೆ ಕೇರಳ ಸರ್ಕಾರದ ಮಾದರಿಯಲ್ಲಿ ದಿನಬಳಕೆಯ ವಸ್ತುಗಳನ್ನು ಉಚಿತವಾಗಿ ನೀಡಬೇಕು. ಬಿಜೆಪಿ ಪಕ್ಷದ ರಾಜ್ಯ ಸರ್ಕಾರವು ರಾಜ್ಯದಲ್ಲಿ ಬಡತನ ನಿರ್ಮೂಲನೆ ಮಾಡುವ ಬದಲಾಗಿ ಬಡವರನ್ನೇ ನಿರ್ಮೂಲನೆ ಮಾಡುತ್ತಿದೆಯೇ ಎಂಬ ಸಂಶಯ ಉಂಟಾಗಿದೆ. ಉಚಿತ ಅಕ್ಕಿಯನ್ನು ವಾಪಸ್ ಪಡೆದು ಬಡವರ ಹೊಟ್ಟೆಗೆ ಹೊಡೆಯುವ ನೀಚತನ ಪ್ರದರ್ಶಿಸಿದರೆ ಇಡೀ ರಾಜ್ಯದಾದ್ಯಂತ ಜನರು ಜಾತಿ , ಧರ್ಮ ಮರೆತು ಉಗ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ.
ನಾಗರಾಜ್ ಎಲ್ ಲಾಯಿಲ
ಸದಸ್ಯರು
ಕೆಪಿಸಿಸಿ ಎಸ್ಸಿ ಘಟಕ