ಇನ್ನು ಮುಂದೆ ಮೂಗಿನ ಮೂಲಕ ಕೊರೋನಾ ಲಸಿಕೆ | ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ಲಸಿಕೆಗೆ ಡಿಸಿಜಿಐ ಅನುಮೋದನೆ

ನವದೆಹಲಿ : ಭಾರತ್ ಬಯೋಟೆಕ್‌ನ ಭಾರತದ ಮೊದಲ ಮೂಗಿನ ಕೋವಿಡ್ ಲಸಿಕೆಗೆ ಡಿಸಿಜಿಐ ಅನುಮೋದನೆ ನೀಡಿದೆ. ಇಂಟ್ರಾನಾಸಲ್ ಕೋವಿಡ್ -19 ಲಸಿಕೆಗಾಗಿ ಭಾರತ್ ಬಯೋಟೆಕ್ ಮಂಗಳವಾರ ಡಿಸಿಜಿಐನಿಂದ ತುರ್ತು ಬಳಕೆಯ ಅಧಿಕಾರವನ್ನು ಪಡೆದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

 

ಭಾರತ್ ಬಯೋಟೆಕ್‌ನ ಮೂಗಿನ ಕೋವಿಡ್ ಲಸಿಕೆಗೆ ಸಿಡಿಎಸ್‌ಸಿಒ ಅನುಮೋದನೆ ದೊರೆತ ನಂತರ, ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಇದನ್ನ ‘ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ ದೊಡ್ಡ ಉತ್ತೇಜನ’ ಎಂದು ಕರೆದಿದ್ದಾರೆ.

ಭಾರತ್ ಬಯೋಟೆಕ್ನ SARS-CoV-S ಕೋವಿಡ್-19 (ಚಿಂಪಾಂಜಿ ಅಡೆನೊವೈರಸ್ ವೆಕ್ಟರ್ಡ್) ಮರುಸಂಯೋಜಿತ ಮೂಗಿನ ಲಸಿಕೆಯನ್ನ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ 18+ ವಯೋಮಾನದವರಲ್ಲಿ ಕೋವಿಡ್ -19 ವಿರುದ್ಧ ಪ್ರಾಥಮಿಕ ರೋಗನಿರೋಧಕತೆಗಾಗಿ ಸಿಡಿಎಸ್‌ಸಿಒ ಅನುಮೋದಿಸಿದೆ.

ಇದು ಕೋವಿಡ್ -19 ಗಾಗಿ ಭಾರತದ ಮೊದಲ ಮೂಗಿನ ಮೂಲಕ ಹಾಕುವ ಲಸಿಕೆಯಾಗಿದೆ. ಇಂಟ್ರಾನೆಸಲ್ ಲಸಿಕೆ ಬಿಬಿವಿ154 (BBV154) ಆಗಿದ್ದು, ಇದರ ತಂತ್ರಜ್ಞಾನವನ್ನು ಭಾರತ್ ಬಯೋಟೆಕ್ ಸೆಂಟ್ ಲೂಯಿಸ್ ನಲ್ಲಿರುವ ವಾಷಿಂಗ್ಟನ್ ಯುನಿವರ್ಸಿಟಿಯಿಂದ ಪಡೆದುಕೊಂಡಿತ್ತು. ಇದು ಈ ರೀತಿಯ ಮೊದಲ ವ್ಯಾಕ್ಸಿನ್ ಆಗಿದ್ದು, ಭಾರತದಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲಾಗಿದೆ.

Leave A Reply

Your email address will not be published.