ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ಟ್ರಿಯನ್ನು ಕೊಂದದ್ದು ಆ ಸೀಟ್ ಬೆಲ್ಟ್ ! ವಿವರಗಳಿಗೆ ಈ Video ಸಹಿತ ಪೋಸ್ಟ್ ಓದಿ
ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಅಹಮದಾಬಾದ್‍ನಿಂದ ಮುಂಬೈಗೆ ಹಿಂದಿರುಗುವಾಗ ನಡೆದ ರಸ್ತೆ ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್‌ನ ಚರೋತಿಯ ಸೂರ್ಯ ನದಿಯ ಸೇತುವೆಯ ಮೇಲೆ ಸೈರಸ್ ಮಿಸ್ತ್ರಿ ಅವರು ಪ್ರಯಾಣಿಸುತ್ತಿದ್ದ ವೇಳೆ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಈ ದುರ್ಘಟನೆ ಸಂಭವಿಸುವಾಗ ಕಾರಿನಲ್ಲಿ ಒಟ್ಟು ನಾಲ್ವರು ಜನರಿದ್ದರು. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಗಾಯಗೊಂಡ ಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಸಂಬಂಧ ತನಿಖೆ ವೇಳೆ ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ವಾಹನದ ಹಿಂದಿನ ಸೀಟಿನಲ್ಲಿ ಕುಳಿತಿದ್ದರು ಎನ್ನುವುದು ವಿಶೇಷವಾಗಿ ಗಮನಿಸಬೇಕಾದ ಅಂಶ. ಸಾಮಾನ್ಯವಾಗಿ ಹಿಂದಿನ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರು ಅಪಘಾತಗಳಲ್ಲಿ ಬಚಾವಾಗಿ ಬಿಡುತ್ತಾರೆ. ವಾಹನದ ಮುಂದಿನ ಸೀಟುಗಳೇ ತುಂಬಾ ಡೇಂಜರಸ್ ಸೀಟುಗಳು. ಆದರೆ, ಇಲ್ಲಿ ಹಿಂದಿನ ಸೀಟಿನಲ್ಲಿ ಕೂತು ಪ್ರಯಾಣಿಸುತ್ತಿದ್ದ ಇಬ್ಬರೂ ಪ್ರಯಾಣಿಕರು ಮೃತಪಟ್ಟಿದ್ದಾರೆ ಅದೃಷ್ಟವೆಂಬಂತೆ ಮುಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಇಬ್ಬರೂ ಬಚಾವಾಗಿದ್ದಾರೆ. ಇದ್ಯಾಕೆ ಹೀಗೆ ಅಂತ ನೋಡಿದರೆ ಕಾಣಸಿಗುವ ಉತ್ತರ ಸೀಟ್ ಬೆಲ್ಟ್.
ಕಾರು ವಿಪರೀತವಾದ ಸ್ಪೀಡಿನಲ್ಲಿ ಓಡುತ್ತಿತ್ತು. ಮಧ್ಯ ವಯಸ್ಕ ವೈದ್ಯೆಯೊಬ್ಬರು ಕಾರನ್ನು ಓಡಿಸುತ್ತಿದ್ದರು. ಅತಿಯಾದ ವೇಗವಾಗಿ ಹೋಗುತ್ತಿರುವ ಕಾರು ರಾಂಗ್ ಸೈಡ್ ನಲ್ಲಿ ಓವರ್ ಟೇಕ್ ಮಾಡಲು ಹೋಗದೆ. ಆದರೆ ಅಷ್ಟರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ರೋಡ್ ಡಿವೈಡರ್ ಗೆ ಬಡಿದಿದೆ. ಇಂತಹಾ ಅಪಘಾತಗಳಲ್ಲಿ ಅಂದರೆ ಫ್ರಂಟ್ ಸೈಡ್ ನಿಂದ ವಾಹನ ಡಿಕ್ಕಿ ಹೊಡೆಯುವ ಸಂದರ್ಭಗಳಲ್ಲಿ ಮೊದಲಿಗೆ ಎಗರಿ ಬೀಳುವುದೇ ಮುಂದಿನ ಚೀಟಿನಲ್ಲಿ ಕೂತ ಜನರು. ಆದರೆ ಆ ವೈದ್ಯೆ ಮತ್ತಾಕೆಯ ಗಂಡ ಪಾರಾಗಿದ್ದಾರೆ. ಅಪಘಾತದಲ್ಲಿ ಹಿಂದಿನ ಸೀಟಿನಲ್ಲಿ ಕೂತಿದ್ದ ಮಿಸ್ತ್ರಿ ಮತ್ತು ಜಹಾಂಗೀರ್ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸೀಟ್ ಬೆಲ್ಟ್ ಧರಿಸಿ ಮುಂಭಾಗದಲ್ಲಿ ಕುಳಿತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಿಸ್ತ್ರಿ ಮತ್ತು ಜಹಂಗೀರ್ ಅವರು ಸೀಲ್ಟ್ ಬೆಲ್ಟ್ ಹಾಕದೆ ಕೂತದ್ದು ಪ್ರಾಣಕ್ಕೆ ಮುಳುವಾಗಿದೆ.
ಸೀಟ್ ಬೆಲ್ಟ್ ಏಕೆ ಮುಖ್ಯ?
ಏರ್‌ಬ್ಯಾಗ್‌ಗಳು ಅಪಘಾತದ ವೇಲೆ ನಮ್ಮ ಜೀವವನ್ನು ಸಾವಿನ ದವಡೆಯಿಂದ ಪಾರು ಮಾಡುತ್ತದೆ ಎಂಬುವುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಭಾರತದಲ್ಲಿ ಕಾರಿನ ಮುಂಭಾಗದಲ್ಲಿ ಕುಳಿತುಕೊಳ್ಳುವವರು ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದರೂ, ಹಿಂದೆ ಕುಳಿತುಕೊಳ್ಳುವವರು ಸೀಟ್ ಬೆಲ್ಟ್ ಅನ್ನು ಧರಿಸುವುದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೂ ಸೀಟ್ ಬೆಲ್ಟ್ ಧರಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸೀಟ್ ಬೆಲ್ಟ್ ಧರಿಸುವುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ವೇಗವಾಗಿ ಹೋಗುತ್ತಿರುವ ಕಾರು ಎದುರಿನ ವಾಹನಕ್ಕೆ ಅಥವಾ ಯಾವುದೇ ತಡೆಗೋಡೆಗೆ ಏಕಾಏಕಿ ಬಡಿದಾಗ, ಒಂದೇ ಕ್ಷಣದಲ್ಲಿ ಕಾರು ತನ್ನ ವೇಗವನ್ನು ಕಳೆದುಕೊಂಡು ಝೀರೋ ಸ್ಪೀಡ್ ಗೆ ಬಂದು ನಿಲ್ಲುತ್ತದೆ. ಆ ಸಂದರ್ಭದಲ್ಲಿ ಆಚಾರನಕ್ಕಾಗಿ ಕಾರಿನಲ್ಲಿ ಕುಳಿತವರ ದೇಹಗಳು ಮುಂದಕ್ಕೆ ಎಸೆಯಲ್ಪಡುತ್ತವೆ. ಅದನ್ನು ತಪ್ಪಿಸಲೆಂದೇ ಇರುವವು ಕಾರಿನಲ್ಲಿರುವ ಸೇಫ್ಟಿ ಬೆಲ್ಟ್ ಗಳು. ಅಪಘಾತದ ಸಂದರ್ಭದಲ್ಲಿ ಹಿಂಬದಿಯ ಸೀಟಿನ ಪ್ರಯಾಣಿಕರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಹೈವೇ ಸೇಫ್ಟಿಗಾಗಿ (IIHS) ಹೆಚ್ಚು ಪ್ರತಿಷ್ಠಿತ ವಿಮಾ ಸಂಸ್ಥೆಯು ವೀಡಿಯೋ ಮೂಲಕ ತೋರಿಸಿದೆ. ಪ್ರಪಂಚಾದ್ಯಂತ ಶೇ. 90ರಷ್ಟು ಮಂದಿ ಪ್ರಯಾಣದ ವೇಳೆ ಸೀಟ್ ಬೆಲ್ಟ್ ಅನ್ನು ಧರಿಸುವುದಿಲ್ಲ, ಅದರಲ್ಲಿಯೂ ಟ್ಯಾಕ್ಸಿಯಲ್ಲಿ ಪ್ರಯಾಣಿಸುವಾಗ ಹೆಚ್ಚಾಗಿ ಸೀಟ್ ಬೆಲ್ಟ್ ಧರಿಸಿರುವುದಿಲ್ಲ. ಹೀಗಾಗಿ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಸೀಟ್ ಬೆಲ್ಟ್‌ಗಳ ಪ್ರಾಮುಖ್ಯತೆಯನ್ನು ತಿಳಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವಾಹನದ ಸೇಫ್ಟಿ ರೇಟಿಂಗ್, ವಾಹನದಲ್ಲಿ ಇರುವ ಸೇಫ್ಟಿ ಬೆಲ್ಟ್, ವಾಹನ ನಡೆಸುವ ಚಾಲಕನ ಚಾಕಚಕ್ಯತೆ ಮತ್ತು ಜಾಗರೂಕತೆ – ಇವಿಷ್ಟೇ ಸುರಕ್ಷತೆಗೆ ಸಾಕಾಗುವುದಿಲ್ಲ. ಸೇಫ್ಟಿ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುವ ಪ್ರಯಾಣಿಕರ ಜವಾಬ್ದಾರಿ ಅತ್ಯಂತ ಹೆಚ್ಚಿನದು. ಒಂದೊಮ್ಮೆ ಅದನ್ನು ಮರೆತರೆ ಮರ್ಸಿಡಿಸ್ ಬೆಂಜ್ ನಂತರ ಅತ್ಯಂತ ಸುರಕ್ಷಿತ ಐಷಾರಾಮಿ ಕಾರುಗಳು ಕೂಡ ಸಣ್ಣ ಅಪಘಾತದಲ್ಲಿಯೂ ಪ್ರಾಣ ಹಿಂಡಬಲ್ಲವು.