ಜಮೀರ್ ಗಣೇಶಾಸ್ತ್ರ ಪ್ರಯೋಗ | ‘ ಮೈದಾನದಲ್ಲೇ ಗಣೇಶ ಕೂರಿಸಲು ಬಿಟ್ಟಿಲ್ಲ, ಆಫೀಸಲ್ಲಿ ತಾವೇ ಕೂರಿಸ್ತಾರಂತೆ ‘ ಶಾಸಕರ ನಡೆಗೆ ಸ್ಥಳೀಯರಿಂದ ಆಕ್ರೋಶ !
ಚಾಮರಾಜಪೇಟೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಕಚೇರಿಯಲ್ಲಿ ಇಂದು ಗಣೇಶೋತ್ಸವ ನಡೆಸಲು ಮುಂದಾಗಿದ್ದು, ಈಗ ಅದಕ್ಕೆ ಸರ್ವ ಸಿದ್ಧತೆಗಳೂ ಪೂರ್ಣಗೊಂಡಿವೆ. ಆದರೆ ಈಗ ಶಾಸಕರ ಈ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರಾರು ಬಸ್ ಗಳ ದೊಡ್ಡ ಧಣಿ ಜಮೀರ್ ಅವರು ಇಂದು ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ. ಚಾಮರಾಜಪೇಟೆಯ ತಮ್ಮ ಕಛೇರಿಯಲ್ಲಿ ಬೆಳಗ್ಗೆ 9.15 ರಿಂದ 10 ಗಂಟೆಯೊಳಗೆ ಗಣಪತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ಲೈಟಿಂಗ್ಸ್, ಫ್ಲೆಕ್ಸ್ ಎಲ್ಲವನ್ನು ಕೂಡಾ ಭರ್ಜರಿಯಾಗಿ ಸಿದ್ದಪಡಿಸಿದ್ದಾರೆ ಜಮೀರ್. ಇಂದೇ ಸಂಜೆ 4 ಗಂಟೆಗೆ ಅದ್ಧೂರಿ ಮೆರವಣಿಗೆ ಮೂಲಕ ಗಣಪತಿ ಮೂರ್ತಿ ವಿಸರ್ಜನೆ ಕೂಡಾ ಮಾಡಲಿದ್ದಾರೆ.
ಈ ವಿಚಾರವಾಗಿ ಸ್ಥಳೀಯರು ಮತ್ತು ಜಮೀರ್ ವಿರುದ್ಧ ವಾಗ್ದಾಳಿ ಮುಂದುವರೆದಿದೆ. ಈ ಬಾರಿ ಹಿಂದೂಗಳ ಜತೆ ಮುಸ್ಲಿಮರು ಕೂಡ ಗಣೇಶೋತ್ಸವ ಆಚರಿಸುವುದನ್ನು ವಿರೋಧಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಜಮೀರ್ ಅವರು 4 ಬಾರಿ ಗೆದ್ದಿದ್ದರೂ ಈವರೆಗೆ ಇಲ್ಲದ ಗಣೇಶನ ಮೇಲಿನ ಭಕ್ತಿ ಈಗ್ಯಾಕೆ ? ಸೌಹಾರ್ದತೆ ಎಂಬುದು ನೆಪ ಆಗಿದ್ದರೆ, ಪೇಟೆ aಮೈದಾನದಲ್ಲೇ ಗಣೇಶ ಕೂರಿಸಲು ಮುಂದಾಗುತ್ತಿದ್ದರು. ಮೈದಾನದಲ್ಲಿ ಗಣೇಶನ ಕೂರಿಸೋಕೆ ಬಿಡದ ಇವರು, ಕಛೇರಿಯಲ್ಲಿ ಗಣೇಶನನ್ನು ಕೂರಿಸಿ, ಹಿಂದೂ ಕಾರ್ಯಕರ್ತರ ಕಾರ್ಯಗಳಿಗೆ ಟಕ್ಕರ್ ಕೊಡಲು ಸಿದ್ದವಾದದ್ದು ಜತೆಗೆ ಎರಡೂ ಕಡೆಯ ಓಲೈಕೆ ರಾಜಕಾರಣ ಎಂಬುದು ಬಹುಸಂಖ್ಯಾತ ಸ್ಥಳೀಯರ ಅಭಿಪ್ರಾಯ.