ಪುತ್ತೂರು ಮುಕ್ರಂಪಾಡಿಯಲ್ಲಿ ಕಾರು-ಸ್ಕೂಟರ್ ಡಿಕ್ಕಿ, ಇಬ್ಬರಿಗೆ ಗಾಯ

ಪುತ್ತೂರು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರಿನ ಮುಂಕ್ರಂಪಾಡಿ ಮುಂಡೂರು ಕ್ರಾಸ್ ಬಳಿ ಮುಂಡೂರು ಕಡೆಯಿಂದ ಪುತ್ತೂರು ಪೇಟೆಯ ಕಡೆ ಬರುತ್ತಿದ್ದ ಹೋಂಡಾ ಡಿಯೋ ಸ್ಕೂಟರ್ ಮತ್ತು ಪುತ್ತೂರಿನಿಂದ ಕುಂಬ್ರ ಕಡೆ ಹೋಗುತ್ತಿದ್ದ ಮಾರುತಿ ಸುಜುಕಿ ಆಲ್ಟೊ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಸ್ಕೂಟರ್ ಸವಾರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

 

ಗಾಯಗೊಂಡ ವಿನೋದ್.ಪಿ ,
ಅಜಿತ್ ಇಬ್ಬರೂ ಮುಂಡೂರು ಸಮೀಪದ ಕಂಪ ನಿವಾಸಿಗಳು. ಇಬ್ಬರಿಗೂ ತುರ್ತು ಪ್ರಥಮ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಇತರೆ ವಾಹನ ಅಥವಾ ಅಂಬ್ಯುಲೆನ್ಸ್ ಗೆ ಕಾಯದೆ ಗಣೇಶೋತ್ಸವದಿಂದ ಹಿಂದುರುಗುತ್ತಿದ್ದ ಯುವಕರು ತಮ್ಮ ಸ್ಕೂಟರ್ ಮತ್ತು ಇನ್ನೊಂದು ಬೈಕಿನಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.

ಕಾರಿನಲ್ಲಿದ್ದ ಸವಾರರೊಬ್ಬರಿಗೆ ತಲೆಗೆ ಗಾಯವಾಗಿತ್ತು ಪ್ರಥಮ ಚಿಕಿತ್ಸೆಗಾಗಿ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ‌

ಅಪಘಾತದ ತೀವ್ರತೆಗೆ ಡಿಕ್ಕಿಯಾದ ಸ್ಥಳದಿಂದ ಅಂದಾಜು ಹತ್ತು ಮೀಟರ್ ದೂರಕ್ಕೆ ರಸ್ತೆಯಲ್ಲಿ ಸ್ಕೂಟರ್ ಬಿದ್ದಿತ್ತು. ವಾಹನದ ಬಿಡಿಭಾಗಗಳು ಪುಡಿಯಾಗಿ ರಸ್ತೆಯಲ್ಲಿ ಹರಡಿಕೊಂಡಿತ್ತು.

ಕೂಡಲೇ ಪುತ್ತೂರು ಸಂಚಾರಿ ಠಾಣೆಯ ಎಸೈ ರಾಮ ನಾಯ್ಕ್ ಮತ್ತು ಇತರ ಪೋಲಿಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಪಘಾತ ನಡೆದ ಸ್ಥಳ ಪರಿಶೀಲನೆ ನಡೆಸಿ ಸ್ಥಳದಲ್ಲಿ ನೆರೆದಿದ್ದವರಿಂದ ಮಾಹಿತಿ ಪಡೆದರು, ಅಪಘಾತ ಗೊಂಡ ವಾಹನಗಳನ್ನು ತೆರವುಗೊಳಿಸಿ ಟೋಯಿಂಗ್ ವಾಹನದ ಮೂಲಕ ಠಾಣೆಗೆ ಸಾಗಿಸುವ ಕಾರ್ಯ ನಡೆಸಿದರು.

Leave A Reply

Your email address will not be published.