ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಅಪಘಾತ,ಬೈಕ್ ಸವಾರ ಮೃತ್ಯು

Share the Article

ಪುತ್ತೂರು : ಡ್ಯೂಕ್ ಬೈಕ್ ಮತ್ತು ಬಸ್ ನಡುವೆ ಪುತ್ತೂರಿನಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದಿಂದಾಗಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಗಾಯಾಳು ಭರತ್ ರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೃತರನ್ನು ವೀರಮಂಗಿಲ ಖಂಡಿಗ ನಿವಾಸಿ ಚಂದ್ರಶೇಖರ್ ರವರ ಪುತ್ರ ಭರತ್(23) ಎಂದು ಗುರುತಿಸಲಾಗಿದೆ.

Leave A Reply