Skin Care : ನಿಮ್ಮ ನುಣುಪಾದ ಚರ್ಮದ ಆರೋಗ್ಯಕ್ಕಾಗಿ ಕಾಸ್ಮೆಟಿಕ್ ಬಳಕೆ ಬೇಡ | ಈ ಸಿಂಪಲ್ ಸಲಹೆ ಫಾಲೋ ಮಾಡಿ

ಇತ್ತೀಚಿನ ದಿನಗಳಲ್ಲಿ ನಮ್ಮ ಚರ್ಮವು ಒತ್ತಡ ಯುತ ಜೀವನಶೈಲಿಯಿಂದಾಗಿ
ಬದಲಾಗಿರುವ ಆಹಾರ ಕ್ರಮ, ಧೂಮಪಾನ, ಮತ್ತು ಮಾಲಿನ್ಯ ಈ ಎಲ್ಲ ಕಾರಣದಿಂದ ಚರ್ಮದ ಕಾಂತಿ ಕಳೆದುಕೊಳ್ಳುತ್ತಿದೆ. ಅಷ್ಟೇ ಅಲ್ಲದೇ,
ಚರ್ಮವು ನಿರ್ಜೀವ ಮತ್ತು ಮಂದವಾಗುತ್ತದೆ.

 

ಹೆಚ್ಚಿನ ಕಾರ್ಯನಿರತ ವೇಳಾಪಟ್ಟಿಯ ಕಾರಣ ಹಲವು ಮಹಿಳೆಯರು ತಮ್ಮ ಚರ್ಮದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾರೆ. ಕಪ್ಪು ಕಲೆಗಳು, ಶುಷ್ಕತೆ ಕಾಣಿಸುತ್ತದೆ. ವಯಸ್ಸಿಗೆ ಮುಂಚೆಯೇ ಮುಖದ ಮೇಲೆ ವಯಸ್ಸಾಗುವಿಕೆಯ ಲಕ್ಷಣಗಳು ಕಾಣಿಸುತ್ತದೆ.

ಸುಂದರ ಹಾಗು ಕಾಂತಿಯುತ ತ್ವಚೆಯನ್ನು ಪಡೆಯಬೇಕೆಂಬ ಹಂಬಲ ಪ್ರತಿಯೊಬ್ಬರಲ್ಲೂ ಇರುವುದು ಸಹಜ. ಆದರೆ ಕಾಂತಿಯುತ ತ್ವಚೆ ಪಡೆಯಲು ತುಂಬಾ ಶ್ರಮ ವಹಿಸಬೇಕಾಗುತ್ತದೆ. ಆರೋಗ್ಯಕಾರಿ ಆಹಾರ ಸೇವನೆಯ ಜೊತೆಗೆ ಜೀವನಶೈಲಿ ಕೊಂಚ ಬದಲಾಯಿಸಿಕೊಳ್ಳ ಬೇಕಾಗುತ್ತದೆ.

ಆರೋಗ್ಯಕರ ಮತ್ತು ಹೊಳೆಯುವ ಚರ್ಮಕ್ಕಾಗಿ ತಜ್ಞರು ಕೆಲವು ತ್ವಚೆಯ ಆರೈಕೆ ಸಲಹೆ ನೀಡಿದ್ದಾರೆ.
ಕಾಸ್ಮೆಟಿಕ್ಸ್ ಉತ್ಪನ್ನಗಳ ಅಧಿಕ ಬಳಕೆ ಬೇಡ. ಮಂದ ಮತ್ತು ಶುಷ್ಕ ತ್ವಚೆಯಲ್ಲಿ ಹೊಳಪನ್ನು ಮರಳಿ ತರುವ ಸಲುವಾಗಿ ಮಹಿಳೆಯರು ಅನೇಕ ದುಬಾರಿ ಮತ್ತು ಅಲಂಕಾರಿಕ ಸೌಂದರ್ಯವರ್ಧಕ ಉತ್ಪನ್ನಗಳ ಜೊತೆಗೆ ಔಷಧ ಸೇವನೆ ಮಾಡುತ್ತಾರೆ. ಇದರಿಂದ ತಾತ್ಕಲಿಕ ವಾಗಿ ಚರ್ಮದಲ್ಲಿ ಬದಲಾವಣೆಗಳಾದರೂ ಕೂಡ ಕ್ರಮೇಣ ಚರ್ಮದ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತವೆ.

ಕೆಲವು ಚರ್ಮರೋಗ ತಜ್ಞರ ಪ್ರಕಾರ, ಚರ್ಮದ ಮೇಲೆ ಸನ್‌ಸ್ಕ್ರೀನ್ ಅನ್ವಯಿಸುವುದು ಬಹಳ ಮುಖ್ಯ. ಸೂರ್ಯನ ಹಾನಿಕಾರಕ ಕಿರಣಗಳಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ಚರ್ಮದ ಸಮಸ್ಯೆ, ಸುಕ್ಕು ವಯಸ್ಸಿನ ಕಲೆಗಳು ಮತ್ತು ಇತರ ಅನೇಕ ಚರ್ಮದ ಸಮಸ್ಯೆ ಹೆಚ್ಚುತ್ತವೆ. ಮನೆಯಿಂದ ಹೊರಗೆ ಹೋಗದಿದ್ದರೂ ಅಥವಾ ಮನೆಯಿಂದ ಕೆಲಸ ಮಾಡುತ್ತಿದ್ದರೂ ಸಹ ಸನ್‌ಸ್ಕ್ರೀನ್ ಬಳಸುವುದು ಉತ್ತಮ ಎಂದಿದ್ದಾರೆ.

ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯುವುದರಿಂದ ಚರ್ಮದ ಮೇಲೆ ನೈಸರ್ಗಿಕ ಹೊಳಪು ಬರುತ್ತದೆ. ದಿನವಿಡೀ ಕನಿಷ್ಠ 8 ಗ್ಲಾಸ್ ನೀರು ಕುಡಿಯುವುದರಿಂದ ಕೇವಲ ಚರ್ಮಕ್ಕೆ ಕಾಂತಿ ಹೆಚ್ಚುವುದಲ್ಲದೆ ಆರೋಗ್ಯದ ದೃಷ್ಟಿ ಯಿದಲೂ ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ನೀರಿಗಿದೆ.

ಚರ್ಮಶಾಸ್ತ್ರಜ್ಞರ ಪ್ರಕಾರ, ಧೂಮಪಾನ ಚರ್ಮದ ಮೇಲೆ ಸುಕ್ಕು ಉಂಟಾಗಲು ಕಾರಣವಾಗುತ್ತದೆ. ಜೊತೆಗೆ ಅಕಾಲಿಕ ವಯಸ್ಸಾದ ಚಿಹ್ನೆಗಳನ್ನು ಹುಟ್ಟು ಹಾಕುತ್ತದೆ. ಚರ್ಮದ ಮೇಲ್ಪದರದಲ್ಲಿರುವ ರಕ್ತನಾಳಗಳನ್ನು ಕುಗ್ಗಿಸುತ್ತದೆ. ಇದರಿಂದ ರಕ್ತದ ಹರಿವು ಕಡಿಮೆಯಾಗುತ್ತದೆ. ಮತ್ತು ಚರ್ಮವು ನಿರ್ಜೀವವಾಗುತ್ತದೆ.

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಒತ್ತಡವು ದೇಹದಲ್ಲಿ ಒಂದು ರೀತಿಯ ರಾಸಾಯನಿಕ ಉತ್ಪನ್ನ ಉಂಟು ಮಾಡುವುದರಿಂದ ಮೊಡವೆ ಸಮಸ್ಯೆ ಕಾಣಿಸುತ್ತದೆ. ಒತ್ತಡದಿಂದ ಕಾರ್ಟಿಸೋಲ್ ಹಾರ್ಮೋನ್ ಬಿಡುಗಡೆಯಾಗಿ ಚರ್ಮದಲ್ಲಿ ತೈಲ ಉತ್ಪಾದನೆ ಹೆಚ್ಚಿಸುತ್ತದೆ.

ಆರೋಗ್ಯಕರ ಜೀರ್ಣಕ್ರಿಯೆ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆ ಆಗಿದೆ. ಹೊಳೆಯುವ ಮತ್ತು ಸುಂದರ ಚರ್ಮಕ್ಕಾಗಿ ಮೊದಲು ಕರುಳಿನ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಜೀರ್ಣಾಂಗ ವ್ಯವಸ್ಥೆಗೆ ಅನಾರೋಗ್ಯಕರ, ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತ ಉಂಟು ಮಾಡುವ ಪದಾರ್ಥಗಳ ಸೇವನೆಯಿಂದ ದೂರವಿರಬೇಕು. ಇದರಿಂದ ಕರುಳಿನ ಮೇಲೆ ಮಾತ್ರವಲ್ಲ ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ

ಚರ್ಮದ ಕಾಂತಿ ಹೆಚ್ಚಿಸಲು ಮನೆಯ ಸುತ್ತಮುತ್ತ ಸಿಗುವ ಪದಾರ್ಥ ಗಳ ಬಳಸಿ ಚರ್ಮ ಸಂಬಂಧಿ ಸಮಸ್ಯೆ ಗಳಿಂದ ಪರಿಹಾರ ಪಡೆಯಬಹುದು.
ಅರಿಶಿನವು ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ . ಇದು ನಮ್ಮ ಮೈಕಾಂತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ರೋಸ್ ವಾಟರ್ ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದ್ದು, ಇದು ಚರ್ಮದ ಕೆಂಪಗಾಗುವಿಕೆ ಮತ್ತು ಉಬ್ಬರಕಡಿಮೆ ಮಾಡುತ್ತದೆ. ಚರ್ಮದ ಟೋನ್ ಅನ್ನು ಸಹ ಹೊರ ಹಾಕಲು ಸಹಾಯ ಮಾಡುತ್ತದೆ.

ಮನೆಯಲ್ಲೇ ತಯಾರಿಸಿದ ಸ್ಕಿನ್ ಟೋನರ್ – ಅಲೋವೆರಾ ಮತ್ತು ರೋಸ್ ವಾಟರ್ ಇವೆರಡೂ ಚರ್ಮಕ್ಕೆ ಅದ್ಭುತಗಳನ್ನು ಉಂಟುಮಾಡುತ್ತದೆ . ಅಲೋವೆರಾವು ಚರ್ಮಕ್ಕೆ ಮಾಯಿಶ್ಚರೈಸ್ ಮಾಡಲು ಮತ್ತು ಮೊಡವೆ, ಸನ್ ಬರ್ನ್ ಮತ್ತು ಇತರ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಚರ್ಮಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್​ ಬಿ2 ಮತ್ತು ವಿಟಮಿನ್​ ಇ ಅಂಶ ಗ್ರೀನ್​​ ಟೀಯಲ್ಲಿದೆ. ಹೀಗಾಗಿ ಚರ್ಮದ ಸುರಕ್ಷತೆಯಲ್ಲಿ ಗ್ರೀನ್​ ಟೀ ಮಹತ್ವದ ಪಾತ್ರವಹಿಸುತ್ತದೆ.ಅವಕಾಡೊ ಅಥವಾ ಬಟರ್​​ ಫ್ರುಟ್​​ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ್ ಇ ಮತ್ತು ಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

ಕಲ್ಲಂಗಡಿ ಹಣ್ಣು ಮುಖದ ಮೇಲಿನ ಕಲೆಯನ್ನು ನಿವಾರಿಸಲು ಸಹಾಯವಾಗಿದೆ. ಹೆಚ್ಚು ನೀರನಂಶವುಳ್ಳ ಈ ಹಣ್ಣಿನ ಸೇವನೆ ನಿಮ್ಮ ಚರ್ಮವನ್ನು ಕಾಂತಿಯುತವಾಗಿಸುತ್ತದೆ.

ಸುಂದರ ಕಾಂತಿಯುತ ತ್ವಚೆಯನ್ನು ಪಡೆಯಲು ಹೊರಗಿನ ಕ್ರೀಮ್ ಅಥವಾ ಇನ್ನಿತರ ಸೌಂದರ್ಯ ವರ್ಧಕಗಳನ್ನು ಬಳಸುವ ಬದಲಾಗಿ ನೈಸರ್ಗಿಕವಾಗಿ ದೊರೆಯುವ ವಸ್ತುಗಳಿಂದ ಚರ್ಮದ ರಕ್ಷಣೆ ಮಾಡಬಹುದು.

Leave A Reply

Your email address will not be published.