BIG NEWS | ಚಾಮರಾಜಪೇಟೆಯಲ್ಲಿ ನಾಳೆ ಜಮೀರ್ ಅಹಮ್ಮದ್ ನೇತೃತ್ವದಲ್ಲೇ ಗಣೇಶೋತ್ಸವ !

Share the Article

ಬೆಂಗಳೂರು ನಗರದ ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಆಚರಿಸಲು ಮುಂದಾಗಿದ್ದಾರೆ ಜಮೀರ್ ಅಹ್ಮದ್. ಆ ಮೂಲಕ ಹಿಂದೂ ಸಂಘಟನೆಗಳಿಗೆ ಜಮೀರ್ ಖಾನ್ ಟಕ್ಕರ್ ಕೊಡಲು ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ ಜಮೀರ್.

ಈದ್ಗಾ ಮೈದಾನದ ವಿವಾದಲ್ಲಿ ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಜಮೀರ್ ವಿರುದ್ಧ ಹಲವಾರು ಹಿಂದೂ ಸಂಘಟನೆಗಳು ಟೀಕಾ ಪ್ರಹಾರ ನಡೆಸಿತ್ತು. ಇದರ ಬೆನ್ನಲ್ಲೇ ಇದೀಗ ಗಣೇಶೋತ್ಸವಕ್ಕೆ ಅಖಿಲ ಕರ್ನಾಟಕ ಜಿ.ಜೆಡ್ ಜಮೀರ್ ಅಹ್ಮದ್ ಖಾನ್ ಒಕ್ಕೂಟ ಮುಂದಾಗಿದ್ದು ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿದೆ. ಶಾಸಕರ ಕಚೇರಿಯಲ್ಲಿ ಸೋಮವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಎದುರು ಪಾಳಯಕ್ಕೆ ತಿರುಮಂತ್ರ ಹೆಣದಿದ್ದಾರೆ ಜಮೀರ್ ಅಹ್ಮದ್.

ಚಾಮರಾಜಪೇಟೆಯ ವರ್ತಕರ ಬೀದಿಯಲ್ಲಿನ, 4ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆಯಲ್ಲಿರುವ ಶಾಸಕರ ಕಛೇರಿಯಲ್ಲಿ ಒಂದು ದಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಸೋಮವಾರ ಬೆಳಗ್ಗೆ 9:15 ರಿಂದ 10 ಗಂಟೆಯೊಳಗೆ ವಿದ್ಯಾಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಸಂಜೆ 4 ಗಂಟೆಗೆ ಬಾಣ ಬಿರುಸುಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಸಿ ನಂತರ ವಿದ್ಯಾಗಣಪತಿ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಜಮೀರ್ ಅಹಮದ್ ಅವರು ನಡೆಸುವ ಗಣೇಶೋತ್ಸವಕ್ಕೂ ಕೂಡ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತವ ಇಲ್ಲವಾ ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.