ಸಿಮ್ ಕಾರ್ಡ್ ನ ಒಂದು ಮೂಲೆಯಲ್ಲಿ ಕಟ್ ಆಗಿರುವುದಕ್ಕೆ ಕಾರಣ ಏನು ಗೊತ್ತೇ?
ಇಂದು ಪ್ರತಿಯೊಬ್ಬರ ಕೈ ಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಹೀಗಿರುವಾಗ ಸಿಮ್ ಕಾರ್ಡ್ ಬಳಸಿಯೇ ಇರುತ್ತೇವೆ. ಸಿಮ್ ಕಾರ್ಡ್ ನ ಒಂದು ಮೂಲೆಯಲ್ಲಿ ಕಟ್ ಆಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದಲ್ಲವೇ. ಆದ್ರೆ, ಇದಕ್ಕೆ ಕಾರಣ ಏನೆಂಬುದನ್ನು ತಿಳಿದುಕೊಳ್ಳಲು ಉತ್ಸಾಹ ನಿಮ್ಮಲ್ಲಿದೆಯೇ? ಹಾಗಿದ್ರೆ ಇಲ್ಲಿದೆ ನೋಡಿ ಉತ್ತರ..
ಮೊದಲ ಸಿಮ್ ಕಾರ್ಡ್‌ಗಳನ್ನು ತಯಾರಿಸಿದಾಗ ಈಗಿನ ಸಿಮ್ ಕಾರ್ಡ್‌ಗಳಂತೆ ಮೂಲೆಯಲ್ಲಿ ಯಾವುದೇ ಕಟ್ ಇರಲಿಲ್ಲ. ಮೊಬೈಲ್ ಬಳಕೆದಾರರು ಸಿಮ್ ಅನ್ನು ಮೊಬೈಲ್ ಒಳಗೆ ನಿರ್ದಿಷ್ಟ ಸ್ಲಾಟ್ನಲ್ಲಿ ಸ್ಥಾಪಿಸಲು ಕಷ್ಟಪಡುತ್ತಿದ್ದರು. ಪ್ರತಿ ಬಾರಿ ಮೊಬೈಲ್ ಸ್ಲಾಟ್ನಲ್ಲಿ ಸಿಮ್ ಅನ್ನು ಹಿಮ್ಮುಖವಾಗಿ ಹಾಕಲಾಗುತಿತ್ತು. ಆದರೆ ಅದನ್ನು ಹೊರತೆಗೆಯಲು ಮತ್ತು ಅದನ್ನು ಮತ್ತೆ ಹಾಕಲು ಕಷ್ಟವಾಗುತ್ತಿತ್ತು. ಸಿಮ್ ಅಳವಡಿಸಲು ಎದುರಾಗುವ ತೊಂದರೆಗಳನ್ನು ಪರಿಗಣಿಸಿ ಟೆಲಿಕಾಂ ಕಂಪನಿಗಳು ಒಂದು ಮಹತ್ವದ ನಿರ್ಧಾರ ಕೈಗೊಂಡಿತು.
ಹೀಗಾಗಿ, ಅವರು ಸಿಮ್ ಕಾರ್ಡ್ ಅನ್ನು ಒಂದೇ ಬಾರಿಗೆ ಸರಿಯಾಗಿ ಒಳಗೆ ಕೂಡಿಸಲು ಅದರ ಮೂಲೆಯನ್ನು ಕತ್ತರಿಸುವುದಕ್ಕೆ ಅನುಮತಿಸಿದರು. ಸಿಮ್ ಕಟ್ ಮಾಡಲು ಆರಂಭಿಸಿದ ನಂತರ ಸಿಮ್ ಕಾರ್ಡ್‌ಗಳ ವಿನ್ಯಾಸದಲ್ಲಿ ನಿಧಾನವಾಗಿ ಇನ್ನೂ ಕೆಲ ಬದಲಾವಣೆಗಳು ಆಗುತ್ತಿವೆ. ಈ ಹಿಂದೆ ಸಿಮ್ ಗಾತ್ರ ದೊಡ್ಡದಾಗಿತ್ತು. ಅದು ಈಗ ಅದು ತುಂಬಾ ಚಿಕ್ಕದಾಗಿ, ಕ್ಯೂಟ್ ಆಗಿದೆ ಎಂಬುದು ನೀವೂ ಗಮನಿಸಿರುತ್ತೀರಿ. ಏಕೆಂದರೆ ಈಗ ಬರುತ್ತಿರುವ ಮೊಬೈಲುಗಳಲ್ಲಿ ಸಣ್ಣ ಸಿಮ್ ಅನ್ನು ಮಾತ್ರ ಹೊಂದಿರುವಂತೆ ಸ್ಲಾಟ್ ಮಾಡಲಾಗುತ್ತಿದೆ.