T 20 World Cup : ವಿಶ್ವಕಪ್ ತಂಡದಿಂದ ಕೆ ಎಲ್ ರಾಹುಲ್ ಔಟ್?
T – 20 ವಿಶ್ವಕಪ್ ನಡೆಯಲು ಕೆಲ ದಿನಗಳು ಬಾಕಿ ಇರುವಾಗ ಕೆ.ಎಲ್ ರಾಹುಲ್ ಅವರಿಗೆ ಪಂದ್ಯದಲ್ಲಿ ಅವಕಾಶ ದೊರೆಯುವುದೇ ? ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.
ಹಲವು ದಿನಗಳಿಂದ ಇಂಜ್ಯುರಿ ಸಮಸ್ಯೆಯಿಂದ ಬಳಲುತ್ತಿದ್ದ ಟೀಂ ಇಂಡಿಯಾ ಓಪನರ್ ಕೆಎಲ್ ರಾಹುಲ್ ತಂಡಕ್ಕೆ ಪುನರಾಗಮಿಸಿದ್ದಾರೆ. ಐಪಿಎಲ್ 2022ರಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಈ ಫಾರ್ಮ್ ಅನ್ನು ಟೀಮ್ ಇಂಡಿಯಾದ ಆಟಗಳಲ್ಲಿ ಕಳಪೆ ಪ್ರದರ್ಶನ ತೋರಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ರಾಹುಲ್ ಅವರ ಫಾರ್ಮ್ ಬಗ್ಗೆ ಕ್ರಿಕೆಟ್ ಪಂಡಿತರು ಪ್ರಶ್ನೆ ಎತ್ತುತ್ತಿದ್ದು ಫಾರ್ಮ್‌ನಲ್ಲಿರುವ ಗಿಲ್‌ಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಿ ಎಂಬ ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯ ನೆಲದಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಈ ಬಾರಿಯ ಏಷ್ಯಾಕಪ್ ಟೂರ್ನಿ ಟಿ ಟ್ವೆಂಟಿ ಮಾದರಿಯಲ್ಲಿ ನಡೆಯುತ್ತಿರುವ ಕಾರಣ ಈ ಏಷ್ಯಾ ಕಪ್ ಟೂರ್ನಿ ಟೀಮ್ ಇಂಡಿಯಾಗೆ ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸಿಕೊಳ್ಳಲು ಸಿಕ್ಕಿರುವ ಬೃಹತ್ ವೇದಿಕೆ ಎಂದೇ ಹೇಳಬಹುದು. ಇನ್ನು ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿರುವ ಅನುಭವಿ ಆಟಗಾರರಿಗೆ ಈ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಪರ ಆಡುವ ಅವಕಾಶ ಲಭಿಸಿದ್ದು, ಗಾಯದ ಸಮಸ್ಯೆಯಿಂದಾಗಿ ಹೊರಗುಳಿದು ಹಲವಾರು ಪಂದ್ಯಗಳಿಗೆ ಅಲಭ್ಯರಾಗಿದ್ದ ಕೆಎಲ್ ರಾಹುಲ್ ಅವರಿಗೂ ಸಹ ಅವಕಾಶ ಲಭಿಸುವ ಸಾಧ್ಯತೆ ಕಡಿಮೆ ಎಂದು ಭಾವಿಸಲಾಗಿದೆ.
ಟೀಂ ಇಂಡಿಯಾ ತನ್ನ ಪ್ರಮುಖ ಬೌಲರ್‌ಗಳ ಇಂಜ್ಯುರಿ ನಡುವೆ ಟಿ20 ವಿಶ್ವಕಪ್‌ಗೆ ಸ್ಕ್ವಾಡ್ ಅನ್ನು ಅಂತಿಮಗೊಳಿಸುವ ತರಾತುರಿಯಲ್ಲಿದೆ. ಹೀಗಿರುವಾಗ ತಂಡಕ್ಕೆ ಕಂಬ್ಯಾಕ್ ಮಾಡಿರುವ ಆಟಗಾರರಲ್ಲಿ ಫಾರ್ಮ್ ಕೊರತೆ ಕೂಡ ಎದ್ದು ಕಾಣುತ್ತಿದೆ. ಇದರಲ್ಲಿ ಓಪನರ್ ಕೆ.ಎಲ್ ರಾಹುಲ್ ಕೂಡ ಒಬ್ಬರಾಗಿದ್ದು, ಜಿಂಬಾಬ್ವೆ ಸರಣಿಯಲ್ಲಿ ಟೀಂ ಇಂಡಿಯಾಗೆ ದೀರ್ಘ ಸಮಯದ ಬಳಿಕ ಕಂಬ್ಯಾಕ್ ಮಾಡಿದ ರಾಹುಲ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಕೆ.ಎಲ್ ರಾಹುಲ್ ಸ್ಟ್ರೈಕ್‌ರೇಟ್ ವೇಗಗೊಳಿಸಿ ರನ್‌ಗಳಿಸಲು ಪರದಾಡುತ್ತಿರುವುದರಿಂದ
ಏಷ್ಯಾಕಪ್‌ನಲ್ಲಿ ಮಿಂಚಲು ಸಾಧ್ಯವಾಗಿರಲಿಲ್ಲ.
ಪಾಕಿಸ್ತಾನ ವಿರುದ್ಧ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲೂ ಕೂಡ ಕೆ ಎಲ್ ರಾಹುಲ್ ಶೂನ್ಯಕ್ಕೆ ಔಟಾದರು. ಮೊದಲ ಎಸೆತದಲ್ಲಿ ನಾಸಿನ್ ಶಾ ರಾಹುಲ್ ಅವರನ್ನು ಬೌಲ್ಡ್ ಮಾಡಿದರು. ಅಲ್ಲದೆ ಸ್ಟ್ರೈಕ್ ರೇಟ್ 100 ಕ್ಕಿಂತ ಕಡಿಮೆ ಇದ್ದು, ರಾಹುಲ್‌ಗೆ ಮಧ್ಯಮ ಓವರ್‌ಗಳಲ್ಲಿ ಬೌಂಡರಿ ಬಾರಿಸಲು , ರನ್ ಗಳಿಸಲು ಕೂಡ ಸಾಧ್ಯವಾಗದೆ ಇದ್ದುದರಿಂದ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕಿದ್ದಾರೆ.
ಕೆಎಲ್ ರಾಹುಲ್ ಶೀಘ್ರದಲ್ಲೇ ಫಾರ್ಮ್‌ಗೆ ಬರದಿದ್ದರೆ ಸಮಸ್ಯೆಗಳು ಹೆಚ್ಚಾಗಲಿವೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಅವರ ಫಾರ್ಮ್ ಬಗ್ಗೆ ಕ್ರಿಕೆಟ್ ಪಂಡಿತರು ಪ್ರಶ್ನೆ ಎತ್ತುತ್ತಿದ್ದು ಫಾರ್ಮ್‌ನಲ್ಲಿರುವ ಗಿಲ್‌ಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಿ ಎಂಬ ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಟಿ20 ವಿಶ್ವಕಪ್ ಹತ್ತಿರದಲ್ಲಿರುವುದರಿಂದ ಆಯ್ಕೆಗಾರರು ಇನ್ ಫಾರ್ಮ್ ಆಟಗಾರರಿಗೆ ಆಸ್ಟ್ರೇಲಿಯಾಕ್ಕೆ ಹೋಗಲು ಅವಕಾಶ ನೀಡುತ್ತಾರೆ. ಈ ಬಗ್ಗೆ ಮಾತನಾಡಿದ ಗವಾಸ್ಕರ್, ರಾಹುಲ್ ನ ಬದಲಾಗಿ ಶುಭಮನ್ ಗಿಲ್ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್‌ನ ಪಂದ್ಯದಲ್ಲಿ ಉತ್ತಮ ಫಾರ್ಮ್ ತೋರಿದ್ದು, ಅವರು ಖಂಡಿತವಾಗಿಯೂ ರಾಹುಲ್‌ಗೆ ಪರ್ಯಾಯವಾಗಬಲ್ಲರು” ಎಂದಿದ್ದಾರೆ. “ಫಾರ್ಮ್‌ನಲ್ಲಿಲ್ಲದ ಆಟಗಾರನನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡುವುದರಿಂದ ಪ್ರಯೋಜನವಿಲ್ಲ”. “ಟಿ20 ವಿಶ್ವಕಪ್‌ನಲ್ಲಿ ಎರಡರಿಂದ ಮೂರು ಪಂದ್ಯಗಳಲ್ಲಿ ವಿಫಲರಾದ ನಂತರ ಅವರು ಫಾರ್ಮ್‌ಗೆ ಬರುತ್ತಾರೆ ಎಂದು ನೀವು ನಿರೀಕ್ಷಿಸಲಾಗುವುದಿಲ್ಲ”. ಉಳಿದ ಆಟಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಆಯ್ಕೆ ಸಮಿತಿ ಅವರನ್ನು ಪರಿಗಣಿಸಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.
ರಾಹುಲ್ ಅವರ ಕಳಪೆ ಪ್ರದರ್ಶನದಿಂದ ಅವರ ಫಾರ್ಮ್ ಬಗ್ಗೆ ಕ್ರಿಕೆಟ್ ಪಂಡಿತರು ತೀವ್ರ ಅಸಮಾಧಾನ ಹೊರಹಾಕಿದ್ದು, ಫಾರ್ಮ್ ನಲ್ಲಿರುವ ಗಿಲ್ ಗೆ ವಿಶ್ವಕಪ್ ನಲ್ಲಿ ಅವಕಾಶ ಕಲ್ಪಿಸಬೇಕೆಂದು ಮಾಜಿ ಕ್ರಿಕೆಟಿಗರು ಅಭಿಪ್ರಾಯ ಪಟ್ಟಿದ್ದಾರೆ.