ಪುತ್ತೂರು: ಜ್ವರದಿಂದ 7ನೇ ತರಗತಿಯ ಬಾಲಕಿ ಮೃತ್ಯು

ಪುತ್ತೂರು:ಜ್ವರದಿಂದ ಬಳಲುತ್ತಿದ್ದ 13 ರ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಚಿಕ್ಕಮುಡ್ನೂರು ಗ್ರಾಮದ ಆರಿಗೊ ನಿವಾಸಿ ರಿತೀಕ್ಷಾ(13 ವ) ಮೃತಪಟ್ಟವರು.

 

ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಸೆ.3ರಂದು ನಸುಕಿನ ಜಾವ ಅವರು ಕೊನೆಯುಸಿರೆಳೆದಿದ್ದಾರೆ.

ಇವರು ಚಿಕ್ಕಮುನ್ನೂರು ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿದ್ದರು. ರಿತೀಕ್ಷಾರವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಸೆ.3ರಂದು ಶಾಲೆಯಲ್ಲಿ ನುಡಿನಮನ ಸಲ್ಲಿಸಿ ಶಾಲೆಗೆ ರಜೆ ನೀಡಲಾಗಿದೆ.

ಮೃತರು ತಂದೆ ರಾಜೇಶ್, ತಾಯಿ ಶೋಭಾ, ಸಹೋದರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ರಿತೀಕ್ಷಾ ಸಾವಿಗೆ ನೂರಾರು ಮಂದಿ ಕಂಬನಿ ಮಿಡಿದಿದ್ದಾರೆ.

Leave A Reply

Your email address will not be published.