ಗಣೇಶ ವಿಸರ್ಜನಾ ಶೋಭಾಯಾತ್ರೆ ಹಿನ್ನೆಲೆ!! ಎರಡು ದಿನಗಳ ಕಾಲ ಹಲವೆಡೆ ಮದ್ಯ ಮಾರಾಟ ಬಂದ್!!

Share the Article

ಬೆಂಗಳೂರು: ರಾಜಧಾನಿಯಲ್ಲಿ ಎರಡು ದಿನಗಳ ಕಾಲ ಗಣೇಶ ವಿಸರ್ಜನೆ, ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದರಿಂದ ನಗರದ ಹಾಗೂ ಹೊರವಲಯದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಸೆಪ್ಟೆಂಬರ್ 03 ರ ಸಂಜೆ 06 ಗಂಟೆಯಿಂದ ಸೆ.05ರ ಮುಂಜಾನೆ 06ರ ವರೆಗೆ ಮದ್ಯ ಮಾರಾಟ ನಿಷೇಧಸಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳ ಸಹಿತ ಯಲಹಂಕ, ವಿದ್ಯಾರಣ್ಯಪುರ, ಯಲಹಂಕ ನ್ಯೂ ಟೌನ್, ಗೋವಿಂದಪುರ, ಡಿಜೆ ಹಳ್ಳಿ, ಶಿವಾಜಿ ನಗರ, ಭಾರತಿನಗರ, ಪುಲಿಕೇಶಿನಗರ, ಹಲಸೂರ್ ವ್ಯಾಪ್ತಿಯಲ್ಲಿ ಮದ್ಯ ಸಂಪೂರ್ಣ ನಿಷೇಧಿಸಲು ಅದೇಶಿಸಲಾಗಿದ್ದು, ಅಲ್ಲದೇ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave A Reply