ಆಪಲ್ ಫೋನ್ ಬಳಕೆದಾರರಿಗೆ ಬಿಗ್ ಶಾಕಿಂಗ್ ನ್ಯೂಸ್!

ಆಪಲ್ ಫೋನ್ ಬಳಕೆದಾರರಿಗೆ ದೈತ್ಯ ಮೆಸೇಜಿಂಗ್ ಆಪ್ ದೊಡ್ಡ ಶಾಕಿಂಗ್ ನ್ಯೂಸ್ ಅನ್ನು ನೀಡಿದ್ದು, ಇನ್ನು ಮುಂದೆ ಆಪಲ್ ಮೊಬೈಲ್ ಗಳಲ್ಲಿ ವಾಟ್ಸಪ್ ಇರುವುದಿಲ್ಲ ಎಂದು ತಿಳಿಸಿದೆ.

 

ಆಪಲ್‌ನ ಇತ್ತೀಚಿನ ಬೆಂಬಲ ನವೀಕರಣದ ಪ್ರಕಾರ, ಇದೇ ಅಕ್ಟೋಬರ್ 1, 2022 ರಿಂದ ಕೆಲವು ಐಫೋನ್‌ ಮಾಡೆಲ್‌ಗಳಲ್ಲಿ ಶಾಶ್ವತವಾಗಿ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ ಎಂದು ಸೂಚಿಸಲಾಗಿದೆ.

ಅಕ್ಟೋಬರ್ 1 ರಿಂದ ಕೆಲವು ಹಳೆಯ ಐಫೋನ್‌ ಮಾದರಿಯ ಫೋನ್‌ಗಳಲ್ಲಿ ವಾಟ್ಸಾಪ್‌ ಕಾರ್ಯ ನಿರ್ವಹಣೆಯನ್ನು ಶಾಶ್ವತವಾಗಿ ನಿಲ್ಲಿಸುತ್ತದೆ ಎಂದು WABetaInfo ವರದಿಯೊಂದರಿಂದ ತಿಳಿದುಬಂದಿದೆ. ಐಒಎಸ್ 10 ಅಥವಾ ಐಒಎಸ್ 11 ಆವೃತ್ತಿಗಳಲ್ಲಿ ಆಪ್ ಚಾಲನೆ ಮಾಡುವ ಐಫೋನ್ ಬಳಕೆದಾರರಿಗೆ ವಾಟ್ಸಾಪ್ ಈಗಾಗಲೇ ಎಚ್ಚರಿಕೆ ನೀಡಲು ಪ್ರಾರಂಭಿಸಿದೆ ಎಂದು ವರದಿ ಉಲ್ಲೇಖಿಸಿದೆ.

ವಾಟ್ಸಾಪ್‌ ಮೆಸೆಜ್‌ ಆಪ್‌ ಈ ಬಗ್ಗೆ ಈಗಾಗಲೇ ಬಳಕೆದಾರರಿಗೆ ಸೂಚನೆಯನ್ನು ಕಳುಹಿಸಿದ್ದು, ಅಪ್ಲಿಕೇಶನ್ ಶೀಘ್ರದಲ್ಲೇ ಅವರ ಫೋನ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ತಿಳಿಸುತ್ತದೆ. ಹೀಗಾಗಿ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ತಮ್ಮ ಐಫೋನ್‌ಗಳನ್ನು ನವೀಕರಿಸಬೇಕಾಗುತ್ತದೆ.

ಅಪ್‌ಡೇಟ್‌ ಓಎಸ್‌ ಇದ್ದರೆ ಮಾತ್ರ, ವಾಟ್ಸಾಪ್‌ ಸಪೋರ್ಟ್‌ ಆಪಲ್‌ ಐಓಎಸ್‌ 12 ಅಥವಾ ಅದಕ್ಕಿಂತ ಮುಂದಿನ ಓಎಸ್‌ ಹೊಂದಿರುವ ಐಫೋನ್‌ಗಳಲ್ಲಿ ಯಾವುದೇ ಅಡೆ ತಡೆಯಿಲ್ಲದೆ ವಾಟ್ಸಾಪ್‌ ಕಾರ್ಯನಿರ್ವಹಿಸಲಿದೆ. ಹಾಗೆಯೇ ಐಒಎಸ್ 10 ಮತ್ತು ಐಒಎಸ್ 11 ಓಎಸ್‌ ಹಳೆಯ ಆಪರೇಟಿಂಗ್ ಸಿಸ್ಟಂಗಳಾಗಿದ್ದು, ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಅನ್ನು ಸ್ವೀಕರಿಸಿರಬಹುದು.

ಅದಕ್ಕಾಗಿ ಫೋನಿನಲ್ಲಿ ಸೆಟ್ಟಿಂಗ್‌ಗಳು (Settings ) > ಜನರೇಲ್‌ (General) ಹೋಗಬಹುದು, ನಂತರ ಇತ್ತೀಚಿನ iOS ಆವೃತ್ತಿಯನ್ನು ಪಡೆಯಲು ಸಾಫ್ಟ್‌ವೇರ್ ಅಪ್‌ಡೇಟ್‌ (Software Update) ಆಯ್ಕೆ ಟ್ಯಾಪ್ ಮಾಡಿ. ಹೀಗೆ ಮಾಡಿದರೆ ಮಾತ್ರ ಇನ್ನು ನಿಮ್ಮಲ್ಲಿರೋ ಐಫೋನ್ ನಲ್ಲಿ ವಾಟ್ಸ್‌ಆಪ್ ಉಪಯೋಗಿಸಬಹುದಾಗಿದೆ.

Leave A Reply

Your email address will not be published.