ಈ ಒಂದು ದಿನ ದೇಶದಾದ್ಯಂತ ಚಲನಚಿತ್ರ ಟಿಕೆಟ್ಗಳ ಬೆಲೆ ಕೇವಲ 75 ರೂ.!
ಸಿನಿಮಾ ಪ್ರಿಯರನ್ನು ತಮ್ಮಿಷ್ಟದ ಚಿತ್ರ ಮಂದಿರಗಳಲ್ಲಿ ಸಂತೋಷದಿಂದ ಒಂದು ದಿನ ಕಳೆಯಲು ದೇಶದಾದ್ಯಂತ ಚಲನಚಿತ್ರ ಟಿಕೆಟ್ಗಳ ಬೆಲೆ ಕೇವಲ ರೂ. 75 ಆಗಿರಲಿದೆ. ಹೌದು.ರಾಷ್ಟ್ರೀಯ ಸಿನಿಮಾ ದಿನವಾದ ಸೆಪ್ಟೆಂಬರ್ 16ರಂದು ಭಾರತದಲ್ಲಿ ದೇಶದಾದ್ಯಂತ ಚಲನಚಿತ್ರ ಟಿಕೆಟ್ಗಳ ಬೆಲೆ ಕೇವಲ ರೂ. 75 ಆಗಿರಲಿದೆ.
ಈ ಒಂದು ದಿನದ ರಿಯಾಯಿತಿಯು 4,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಲಭ್ಯವಿರುತ್ತದೆ. ಪಿವಿಆರ್ , ಐನೆಕ್ಸ್, ಸಿನಿಪೊಲಿಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಪ್ರಮುಖ ಥಿಯೇಟರ್ಗಳೂ ಕೂಡ ಈ ಆಫರ್ ನೀಡಲಿವೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ವೆಬ್ಸೈಟ್ಗಳಲ್ಲಿ ಮಾಹಿತಿ ಹೊರಬಿದ್ದಿಲ್ಲ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ) ಸಿನಿಮಾ ಪ್ರದರ್ಶನ ವ್ಯವಹಾರವನ್ನು ಮತ್ತೆ ಕುದುರಿಸುವಂತೆ ಮಾಡಿದ ಚಲನಚಿತ್ರ ವೀಕ್ಷಕರಿಗೆ ಧನ್ಯವಾದ ಸೂಚಿಸುವ ಭಾಗವಾಗಿ ಈ ಆಫರ್ ಅನ್ನು ಘೋಷಿಸಿದೆ ಎನ್ನಲಾಗಿದೆ. ರಾಷ್ಟ್ರೀಯ ಸಿನಿಮಾ ದಿನವು ಸಂಪೂರ್ಣವಾಗಿ ಹೊಸ ಕಾರ್ಯಕ್ರಮವಾಗಿದೆ. ಅಮೆರಿಕಾದಲ್ಲಿ ಈಗಾಗಲೇ ಎಎಂಸಿ ಹಾಗೂ ಸಿನಿಮಾರ್ಕ್ನಂತಹ ಥಿಯೇಟರ್ಗಳು ಈ ವಾರಾಂತ್ಯದಲ್ಲಿ 3 (ಸುಮಾರು ರೂ. 240) ಡಾಲರ್ಗೆ ಟಿಕೆಟ್ ದರವನ್ನು ಕಡಿತಗೊಳಿಸಿವೆ. ಯುಕೆಯಲ್ಲಿನ ಚಿತ್ರಮಂದಿರಗಳು ಸಹ ಇದನ್ನು ಅನುಸರಿಸುತ್ತಿವೆ. ಶನಿವಾರ ಸೆಪ್ಟೆಂಬರ್ 3 ರಂದು £3 (ಸುಮಾರು ರೂ. 277) ಕ್ಕೆ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.
ತಿಂಗಳ ಕೊನೆಯಲ್ಲಿ ಸೆಪ್ಟೆಂಬರ್ 16 ರಂದು ರಾಷ್ಟ್ರೀಯ ಸಿನಿಮಾ ದಿನದ ಆಚರಣೆಗೆ ಭಾರತೀಯ ಥಿಯೇಟರ್ಗಳು ಸೇರಿಕೊಳ್ಳಲಿವೆ. ರಾಷ್ಟ್ರೀಯ ಸಿನಿಮಾ ದಿನದ ಅಧಿಕೃತ ವೆಬ್ಸೈಟ್ ಯಾವುದೇ ಮಾಹಿತಿಯನ್ನು ಪಟ್ಟಿ ಮಾಡಿಲ್ಲ, ಸ್ವರೂಪ ಅಥವಾ ಭಾಷೆಯ ಹೊರತಾಗಿ ಪ್ರತಿ ಚಿತ್ರಕ್ಕೂ ಒಂದೇ ಬೆಲೆ ಇರುತ್ತದೆ ಎಂದು ಹೇಳುತ್ತದೆ.
ಆನ್ಲೈನ್ ಅಪ್ಲಿಕೇಶನ್ಗಳು ಅಥವಾ ವೆಬ್ಸೈಟ್ಗಳಿಂದ ಖರೀದಿಸಿದ ಮೇಲೆ ವಿಧಿಸಲಾಗುವ ಹೆಚ್ಚುವರಿ ತೆರಿಗೆಗಳನ್ನು ಮೊತ್ತವು ಒಳಗೊಂಡಿರುವುದಿಲ್ಲ ಎಂದು ಅದು ಹೇಳಿದೆ. ಉದಾಹರಣೆಗೆ ಭಾರತದಲ್ಲಿ ಬುಕ್ ಮೈ ಷೋ ಇನ್ನೂ ಹೆಚ್ಚುವರಿ ಇಂಟರ್ನೆಟ್ ಶುಲ್ಕಗಳು ಮತ್ತು ಜಿಎಸ್ಟಿಯನ್ನು ರೂ. 75 ಬೆಲೆಗೆ ಕೊಡಲಿವೆಯೇ ಎಂದು ತಿಳಿದಿಲ್ಲ.
ರಾಷ್ಟ್ರೀಯ ಸಿನಿಮಾ ದಿನ ವೆಬ್ಸೈಟ್ ಟ್ರೇಲರ್ ಅನ್ನು ಸಹ ಒಳಗೊಂಡಿದೆ. ಕೆಲವು ಚಲನಚಿತ್ರಗಳನ್ನು ಈ ಆಫರ್ ಬಗ್ಗೆ ಥಿಯೇಟರ್ಗಳಲ್ಲಿ ಪ್ರದರ್ಶನ ನೀಡಲಾಗುತ್ತದೆ. ಆದರೆ ಇದು ಅಮೆರಿಕಾದಲ್ಲಿ ಮಾತ್ರ ಎಂದೂ ಸಹ ಹೇಳಲಾಗುತ್ತಿದೆ.