ಮುರುಘಾಶ್ರೀಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ
ಬಂಧನಕ್ಕೀಡಾಗಿರುವ ಮುರುಘಾಮಠದ ಡಾ.ಶಿವಮೂರ್ತಿ ಶರಣರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಅವರ ಬಂಧನವಾಗಿ 14 ದಿನಗಳ ನ್ಯಾಯಾಂಗ ಬಂಧನ ನೀಡಲಾಗಿದೆ. ಬಂಧನದ ಹಿನ್ನೆಲೆ ಶ್ರೀಗಳಿಗೆ ಎದೆನೋವು ಪ್ರಾರಂಭವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗ ಮುರುಘಾಶ್ರೀಗಳ ವಿರುದ್ಧ ಇದೀಗ ಜಾಮೀನು ರಹಿತ ವಾರೆಂಟ್ ಒಂದು ಜಾರಿ ಮಾಡಲಾಗಿದೆ.
ಮುರುಘಾಶ್ರೀಗಳು ಮಠದ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ಶ್ರೀಗಳ ವಿರುದ್ಧ ಖಾಸಗಿ ದೂರು ದಾಖಲಾಗಿತ್ತು. ಆನಂದ ಕುಮಾರ್ ಎಂಬ ವ್ಯಕ್ತಿಗೆ ಕೆಂಗೇರಿಯ ಸೂಲಿಕೆರೆ ಗ್ರಾಮದಲ್ಲಿನ ಮಠದ ಆಸ್ತಿಯಲ್ಲಿ 7.18 ಎಕರೆ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾಶ್ರೀಗಳ ವಿರುದ್ಧ ಪಿ.ಎಸ್.ಪ್ರಕಾಶ್ ಎಂಬುವವರು ವಂಚನೆ, ವಿಶ್ವಾಸದ್ರೋಹ ಪ್ರಕರಣ ದಾಖಲಿಸಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಸಮನ್ಸ್ ಜಾರಿ ಮಾಡಿದರೂ ಮುರುಘಾಶ್ರೀಗಳು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲಿ ಇದೀಗ ಶ್ರೀಗಳಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆದೆ.