ಸೊಳ್ಳೆ ಓಡಿಸಲೆಂದೇ ಇದೆ ಮೊಬೈಲ್ ಫೋನ್ ಗಳಲ್ಲಿ ಆಪ್!
ಅಯ್ಯೋ, ಈ ಮಳೆಗಾಲ ಬಂತೆಂದರೆ ಸಾಕು ಎಲ್ಲೆಲ್ಲೂ ಗುಯ್ ಗುಯ್ ಅನ್ನೋ ಸೊಳ್ಳೆಗಳದ್ದೇ ಕಾಟ. ಅದು ಬೇರೆ ಒಂದೋ ಎರಡೋ, ರಾಶಿ ರಾಶಿ ಬಂದು ಮೆಲ್ಲಗೆ ರಕ್ತ ಹೀರುತ್ತದೆ. ಇಂತಹ ಅಪಾಯಕಾರಿ ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಬರೋದಂತೂ ಕನ್ಫರ್ಮ್. ಹೀಗಾಗಿ ಇದನ್ನು ಓಡಿಸಲೆಂದೇ ಜನ ಹಲವು ಅಸ್ತ್ರಗಳನ್ನು ಬಳಸುತ್ತಾರೆ.
ಹೌದು. ಸಾಮಾನ್ಯವಾಗಿ ನಾವು ನೋಡಿರೋ ಪ್ರಕಾರ ಸೊಳ್ಳೆ ಕಾಯಿಲ್, ಊದುಬತ್ತಿ ಹೊಗೆ ಹಾಕಿ ಸೊಳ್ಳೆ ಓಡಿಸಲು ಪರದಾಡುತ್ತಿರುತ್ತಾರೆ. ಆದ್ರೆ, ಇನ್ನು ಇಷ್ಟೊಂದು ಕಷ್ಟ ಪಡಬೇಕಾದ ಪರಿಸ್ಥಿತಿಯೇ ಇಲ್ಲ. ಯಾಕಂದ್ರೆ ನಮ್ಮ ದೇಶ ಡಿಜಿಟಲೀಕರಣವಾಗಿದೆ ಅಲ್ವಾ.. ಹೀಗಿದ್ದ ಮೇಲೆ ಸೊಳ್ಳೆ ಓಡಿಸಲು ಟೆಕ್ನಾಲಜಿ ಇಲ್ಲದೆ ಇರುತ್ತದ?
ಇದೀಗ ಹೊಗೆ ಇಲ್ಲದೇ ಸೊಳ್ಳೆಗಳನ್ನು ಓಡಿಸುವ ಗ್ಯಾಜೆಟ್ಗಳು ಬಂದಿವೆ. ಈಗ ಸ್ಮಾರ್ಟ್ ಫೋನ್ ಗಳಲ್ಲೂ ಇಂತಹ ಆಪ್ ಗಳು ಬಂದಿದ್ದು, ಸೊಳ್ಳೆಗಳನ್ನು ಇಲ್ಲವಾಗಿಸಬಹುದು. ಅದು ಹೇಗೆ ಆಪ್ ಮೂಲಕ ಸೊಳ್ಳೆ ಹೋಗುತ್ತೆ ಅನ್ನೋರು ಮುಂದಕ್ಕೆ ಓದಿ..
ಸೊಳ್ಳೆಗಳನ್ನು ಕೊಲ್ಲಲು ಸಹಾಯ ಮಾಡುವ ಇಂತಹ ಹಲವು ಆಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿವೆ. ಮಸ್ಕಿಟೋ ಕಿಲ್ಲರ್, ಮಸ್ಕಿಟೋ ಸೌಂಡ್, ಫ್ರೀಕ್ವೆನ್ಸಿ ಜನರೇಟರ್ ಹೀಗೆ ಹಲವು ಆಪ್ ಗಳಿವೆ. ಈ ಅಪ್ಲಿಕೇಶನ್ಗಳನ್ನು ಮಿಲಿಯನ್ಗಿಂತಲೂ ಹೆಚ್ಚು ಬಾರಿ ಡೌನ್ಲೋಡ್ ಆಗಿವೆ.
ಅಪ್ಲಿಕೇಶನ್ಗಳು ಆವರ್ತನದ ಧ್ವನಿಯನ್ನು ಉತ್ಪಾದಿಸುತ್ತವೆ ಮತ್ತು ಸೊಳ್ಳೆಗಳು ತಮ್ಮ ಧ್ವನಿಯಿಂದ ದೂರ ಹೋಗುತ್ತವೆ. ಶಬ್ದದ ಶಬ್ದವು ತುಂಬಾ ಕಡಿಮೆಯಾಗಿದೆ. ಅದರ ಧ್ವನಿಯು ಯಾವುದೇ ವ್ಯಕ್ತಿಗೆ ಕೇಳಿಸುವುದಿಲ್ಲ, ಆದರೆ ಸೊಳ್ಳೆಗಳನ್ನು ತಲುಪಲು ಮತ್ತು ಅವುಗಳನ್ನು ಓಡಿಸಲು ಇದು ತುಂಬಾ ಉಪಯುಕ್ತವಾಗಿದೆ ಎಂದು ಡೆವಲಪರ್ಗಳು ಹೇಳಿಕೊಳ್ಳುತ್ತಾರೆ.
ಆದರೆ, ಈ ಅಪ್ಲಿಕೇಶನ್ ಗಳು ಅತ್ಯಂತ ಕಡಿಮೆ ರೇಟಿಂಗ್ ಗಳನ್ನು ಪಡೆದಿವೆ. ಕೆಲವರು 5 ರಲ್ಲಿ 2 ಮತ್ತು ಕೆಲವರು 3. ರೇಟಿಂಗ್ ನೀಡಿದ್ದಾರೆ. ಹೀಗಾಗಿ, ಈ ಆಪ್ ಎಷ್ಟು ಉತ್ತಮ ಎಂಬುದು ನೀವೂ ಬಳಸಿದ ಮೇಲಷ್ಟೇ ತಿಳಿಯಬೇಕಾಗಿದೆ. ಡೌನ್ಲೋಡ್ ಮಾಡಿ ರೇಟಿಂಗ್ ನೀಡಿದವರ ಪ್ರಕಾರ ಈ ಅಪ್ಲಿಕೇಶನ್ಗಳು ಕಡಿಮೆ ಪರಿಣಾಮಕಾರಿ. ಯಾಕಂದ್ರೆ, ಆನ್ ಮಾಡಿದ ನಂತರವೂ ಸೊಳ್ಳೆಗಳು ಕಿರುಕುಳ ನೀಡುತ್ತವೆ. ಕೆಲವು ಜನರಿಗೆ ಈ ಅಪ್ಲಿಕೇಶನ್ ಉತ್ತಮವಾಗಿದೆ ಎಂದು ಸಾಬೀತಾಗಿದೆ. ಈ ಆಪ್ ಗಳಲ್ಲಿ ಜಾಹೀರಾತುಗಳ ಸಂಖ್ಯೆಯೂ ಹೆಚ್ಚು. ಇನ್ಸ್ಟಾಲ್ ಮಾಡಿದ ತಕ್ಷಣ ನೀವು ಸಾಕಷ್ಟು ಜಾಹೀರಾತುಗಳನ್ನು ನೋಡುತ್ತೀರಿ.
ಒಟ್ಟಾರೆ, ಈ ಸೊಳ್ಳೆ ಕಾಟ ಒಮ್ಮೆ ಹೋಗ್ಲಿ ದೇವಾ ಅನ್ನೋರು ಒಮ್ಮೆ ಆಪ್ ಡೌನ್ಲೋಡ್ ಮಾಡಿಕೊಂಡು ನೋಡಿ. ಸೊಳ್ಳೆ ನಿಮ್ಮ ಬಳಿ ಬಂದಿಲ್ಲ ಅಂದ್ರೆ 5 ಸ್ಟಾರ್ ಅನ್ನೇ ನೀಡಿ ಇತರರಿಗೂ ಬಳಸುವಂತೆ ಮಾಹಿತಿ ನೀಡಿ. ಆದ್ರೆ, ಬಳಸಿದ ಮೇಲೂ ಸೊಳ್ಳೆ ನಿಮಗೆ ಕಾಯಿಸುತ್ತಲೇ ಇದ್ರೆ, ನಿಮ್ಮ ಹಿಂದಿನ ಅಸ್ತ್ರನೇ ಫಾಲೋ ಮಾಡಿ ಅನ್ನಬೇಕಷ್ಟೆ..