ರೈಲಿನಲ್ಲಿ ಪ್ರಯಾಣಿಸುತ್ತಲೇ ವಾಟ್ಸಾಪ್ ಮೂಲಕ ಮಾಡಬಹುದು ಫುಡ್ ಆರ್ಡರ್ ; ಹೇಗೆ ಗೊತ್ತಾ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆಪ್ (WhatsApp) ಅಗತ್ಯ ಫೀಚರ್ಗಳನ್ನು ಪರಿಚಯಿಸಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಹೊಸ ಹೊಸ ಫೀಚರ್ ಅಪ್ಡೇಟ್ ಮಾಡುವ ಮೂಲಕ ಗ್ರಾಹಕಾರನ್ನು ಹೆಚ್ಚಿಸುತ್ತಿದೆ. ಇದೀಗ ರೈಲ್ವೆ (Railway) ಪ್ರಯಾಣಿಕರಿಗಾಗಿ ಉಪಯುಕ್ತವಾದ ಆಯ್ಕೆಯೊಂದನ್ನು ವಾಟ್ಸ್ಆ್ಯಪ್ ನೀಡಿದೆ. ಇದಕ್ಕಾಗಿ ಜಿಯೋ ಹ್ಯಾಪ್ಟಿಕ್, ವಾಟ್ಸ್ಆ್ಯಪ್ ಚಾಟ್‌ಬಾಟ್ ಪ್ರೊವೈಡರ್ ಮತ್ತು ಝೂಪ್ ಐರ್ಸಿಟಿಸಿ ಜೊತೆ ಕೈಜೋಡಿಸಿದೆ.

ಹೌದು. ಭಾರತೀಯ ರೈಲ್ವೆಯ ಪ್ರಯಾಣಿಕರು ಇದೀಗ ಪ್ರಯಾಣ ಮಾಡುವಾಗ WhatsApp ಮೂಲಕ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಬಹುದಾದ ಹೊಸ ಸೇವೆಯನ್ನು IRCTC ತಂದಿದೆ. ಮಾತ್ರವಲ್ಲದೆ ಆರ್ಡರ್ ಅನ್ನು ಲೈವ್ ಟ್ರ್ಯಾಕಿಂಗ್ ಆಡುವ ಅವಕಾಶದ ಜೊತೆ ತಮ್ಮ ಡೆಲಿವರಿಯನ್ನು ನೇರವಾಗಿ ಸೀಟುಗಳಿಗೆ ಪಡೆಯುವ ಆಯ್ಕೆ ನೀಡಲಾಗಿದೆ. ಇದರ ಮೂಲಕ ಪ್ರಯಾಣಿಕರು ವಾಟ್ಸಾಪ್ ನಲ್ಲಿ ಆಹಾರದ ಆರ್ಡರ್ ಮಾಡಬಹುದು. ನೀವು ಕುಳಿತಲ್ಲಿಗೆ ಆಹಾರವನ್ನು ತಲುಪಿಸಲಾಗುತ್ತದೆ.
WhatsApp ಚಾಟ್‌ಬಾಟ್ ಸೇವೆಯ ಮೂಲಕ ಆಹಾರವನ್ನು ಆರ್ಡರ್ ಮಾಡಲು ಬಯಸುವ ರೈಲ್ವೆ ಪ್ರಯಾಣಿಕರು ತಮ್ಮ PNR ಸಂಖ್ಯೆಯನ್ನು ಬಳಸುವ ಮೂಲಕ ತಮ್ಮ ರೈಲಿನ ಸೀಟಿನಿಂದಲೇ ಆಹಾರವನ್ನು ಆರ್ಡರ್ ಮಾಡಬಹುದು. ಇದಕ್ಕಾಗಿ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ Zoop WhatsApp ಚಾಟ್‌ಬಾಟ್ ಸಂಖ್ಯೆ +91 7042062070 ಅನ್ನು ಸೇವೆ ಮಾಡಿಕೊಳ್ಳಬೇಕು. ಇದಾದ ನಂತರ ಚಾಟ್‌ಬಾಕ್ಸ್ ತೆರೆದು ನಿಮ್ಮ 10-ಅಂಕಿಯ PNR ಸಂಖ್ಯೆಯನ್ನು ನಮೂದಿಸಿದರೆ Zoop WhatsApp ಚಾಟ್‌ಬಾಟ್ ನಿಮ್ಮ ಮನವಿಯನ್ನು ಪರಿಗಣಿಸುತ್ತದೆ. ನಂತರ ನಿಮಗೆ ಬೇಕಿರುವ ಆಯ್ದ ರೆಸ್ಟೊರೆಂಟ್‌ಗಳಿಂದ ಆಹಾರವನ್ನು ಬುಕ್ ಮಾಡಬಹುದು ಹಾಗು ನಿಮ್ಮ ಆಯ್ಕೆಯ ಮುಂದಿನ ನಿಲ್ದಾಣದಲ್ಲಿ ನಿಮ್ಮ ಆಹಾರವನ್ನು ಸ್ವೀಕರಿಸಬಹುದು.
ನೀವು WhatsApp ಚಾಟ್‌ಬಾಟ್ ಸೇವೆಯ ಮೂಲಕ ಆಹಾರವನ್ನು ಆರ್ಡರ್ ಮಾಡಿದ ನಂತರ, Zoop ನಿಮ್ಮ ವಿವರಗಳನ್ನು ಪರಿಶೀಲಿಸುತ್ತದೆ ಮತ್ತು ನೀವು ಆಹಾರವನ್ನು ಆರ್ಡರ್ ಮಾಡಲು ಬಯಸುವ ಮುಂಬರುವ ನಿಲ್ದಾಣವನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳುತ್ತದೆ. ಇಷ್ಟೇ ಅಲ್ಲದೇ, ಆಹಾರವನ್ನು ಆರ್ಡರ್ ಮಾಡಿದ ನಂತರ ಮತ್ತು ವಹಿವಾಟು ಪೂರ್ಣಗೊಳಿಸಿದ ನಂತರ ನೀವು ಚಾಟ್‌ಬಾಟ್‌ನಿಂದಲೇ ನಿಮ್ಮ ಆಹಾರವನ್ನು ಟ್ರ್ಯಾಕ್ ಸಹ ಮಾಡಬಹುದು ಎಂದು IRCTC ತಿಳಿಸದೆ. ರೈಲ್ವೆ ಪ್ರಯಾಣಿಕರು ಚಾಟ್‌ಬಾಟ್‌ನಲ್ಲಿ ಆರ್ಡರ್ ಮತ್ತು ಪಾವತಿ ಮೋಡ್‌ಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಹ ಪಡೆಯುತ್ತಾರೆ. ರೈಲು ಆಯ್ದ ನಿಲ್ದಾಣವನ್ನು ತಲುಪಿದ ನಂತರ Zoop ನಿಮ್ಮ ಆಹಾರವನ್ನು ನಿಗಧಿತ ಸಮಯಕ್ಕೆ ತಲುಪಿಸುವ ಭರವಸೆಯನ್ನು ಸಹ ನೀಡಲಾಗಿದೆ.
ವಾಟ್ಸ್ಆ್ಯಪ್ ಚಾಟ್‌ಬಾಟ್ ಪ್ಲಾಟ್‌ಫಾರ್ಮ್ ಪ್ರಯಾಣಿಕರಿಗೆ ನೆಟ್‌ವರ್ಕ್ ಸಂಪರ್ಕದ ಸಮಸ್ಯೆಗಳನ್ನು ನಿವಾರಿಸಲು ಮತ್ತು ರೈಲು ಪ್ರಯಾಣದ ಸಂದರ್ಭ ಉತ್ತಮ ಗುಣಮಟ್ಟದ ಆಹಾರ ಕಲ್ಪಿಸಲು ಸಹಾಯ ಮಾಡುತ್ತದೆ. ನೀವು +91 7042062070 ನಂಬರ್ ನೊಂದಿಗೆ ವಾಟ್ಸ್ಆ್ಯಪ್ನಲ್ಲಿ ಜೂಪ್ನೊಂದಿಗೆ ಚಾಟ್ ಮಾಡಬಹುದು. ಆಹಾರ ಮಾರ್ಡರ್ ಮಾಡುವ ಕ್ರಮ ಇಲ್ಲಿದೆ.
*ವಾಟ್ಸ್ಆ್ಯಪ್ ತೆರೆಯಿರಿ ಮತ್ತು ‘ಹಾಯ್‘ ಸಂದೇಶವನ್ನು +91 7042062070 ಗೆ ಕಳುಹಿಸಿ Zoop ನೊಂದಿಗೆ ಚಾಟ್ ಮಾಡಿ.
*ನಂತರ ನೀವು ಆರ್ಡರ್ ಫುಡ್, ಚೆಕ್ PNR ಸ್ಟೇಟಸ್, ಟ್ರ್ಯಾಕ್ ಆರ್ಡರ್ ಮುಂತಾದ ಹಲವಾರು ಆಯ್ಕೆಗಳು Zoop ನಿಂದ ಬರುತ್ತದೆ.
*ಈಗ ನೀವು ಆಹಾರವನ್ನು ಆರ್ಡರ್ ಮಾಡಲು ಬಯಸಿದರೆ, ಅಲ್ಲಿರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
*ನಂತರ ನಿಮ್ಮ 10-ಅಂಕಿಯ PNR ಸಂಖ್ಯೆಯನ್ನು ನಮೋದಿಸಬೇಕಾಗುತ್ತದೆ. ಜೊತೆಗೆ ನಿಮ್ಮ PNR ಮತ್ತು ಇತರ ವಿವರಗಳನ್ನು ಖಚಿತಪಡಿಸಲು ನಿಮ್ಮನ್ನು ಕೇಳಲಾಗುತ್ತದೆ.
*ನೀವು ಎಲ್ಲಾ ವಿವರಗಳನ್ನು ನಿಖರವಾಗಿ ಖಚಿತಪಡಿಸಿದರೆ, ಆರ್ಡರ್ ಅನ್ನು ಎಲ್ಲಿ ರಿಸಿವ್ ಮಾಡಲು ಬಯಸುತ್ತೀರಿ ಎಂಬ ಆಯ್ಕೆ ಕೇಳಲಾಗುತ್ತದೆ.
*ನಿಲ್ದಾಣವನ್ನು ಆಯ್ಕೆ ಮಾಡಿದ ನಂತರ ನೀವು ನಿಮ್ಮ ಆಹಾರವನ್ನು ಯಾವ ರೆಸ್ಟೋರೆಂಟ್ನಿಂದ ಆಯ್ಕೆ ಮಾಡುತ್ತೀರಿ ಎಂದು ಆರಿಸಬೇಕಾಗುತ್ತದೆ. ಈಗ ನಿಮಗೆ ಬೇಕಾದ ಆಹಾರವನ್ನು ಸೆಲೆಕ್ಟ್ ಮಾಡಿ.
*ಆರ್ಡರ್ ಮಾಡಿದ ನಂತರ, ನಿಮ್ಮ ಆದೇಶದ ವಿವರವನ್ನು ನೀವು ಪಡೆಯುತ್ತೀರಿ. ಜೊತೆಗೆ ಬಿಲ್ಗೆ ಸಂಬಂಧಿಸಿದ ಕೆಲ ವಿಧಾನಗಳಿರುತ್ತವೆ. ಅಂತಿಮವಾಗಿ ನಿಮ್ಮ ಸಂಖ್ಯೆಯನ್ನು ಖಚಿತಪಡಿಸಿ ಫುಡ್ ಆರ್ಡರ್ ಆಗುತ್ತದೆ.
IRCTC ಅಧಿಕೃತ ಆಹಾರ ಆನ್ ಟ್ರ್ಯಾಕ್ ಸೇವೆಗೆ ಯಾವುದೇ ಹೆಚ್ಚುವರಿ ಸೇವಾ ಶುಲ್ಕದ ಅಗತ್ಯವಿಲ್ಲ. ಪ್ರಸ್ತುತ ಈ ಸೇವೆಗಳು 200 ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಲಭ್ಯವಿದೆ. ಪ್ರವಾಸಿಗರು ಈಗ ನೀಡಿರುವ ಲಿಂಕ್ ಅನ್ನು ಚಾಟ್ ಮತ್ತು ಪ್ಲೇಸ್ ಆರ್ಡರ್ ಮೂಲಕ ಪ್ರವೇಶಿಸುವ ಮೂಲಕ Zoop ನಿಂದ ಆರ್ಡರ್ ಮಾಡಬಹುದು. – https://wa.me