ನಿಮ್ಮನೆಗೆ AC ತಗ್ಗೊಳ್ಳೋ ಪ್ಲ್ಯಾನ್ ಇದೆಯಾ? ಹಾಗಾದರೆ ಇಂದೇ ಖರೀದಿಸಿ

ರಾಜ್ಯದಲ್ಲಿ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ. ಇನ್ನು ಕೆಲವೆಡೆ ಚಳಿಗಾಲದ ಆರಂಭ ಕೂಡಾ ಆಗಿದೆ. ಇದು ಮನೆಯಲ್ಲೇ ಎಲ್ಲರೂ ಬೆಚ್ಚನೆ ಮಲಗೋ ಸಮಯ ಅಂತಾನೇ ಹೇಳಬಹುದು. ಆದರೂ ಇಂತಹ ಸಮಯದಲ್ಲಿ ಯಾಕಪ್ಪಾ ಈಗ ಎಸಿ ವಿಷಯ ಅಂತ ನಿಮಗೆ ಅನಿಸಬಹುದು. ಮೊದಲೇ ಮಳೆ, ಅದರಲ್ಲೂ ಚಳಿ ಬೇರೆ. ಇಂತಹ ಸಮಯದಲ್ಲಿ ಎಸಿ (Air Conditioners) ಯಾರಿಗೆ ಬೇಕು ಅಂತ ಯೋಚನೆ ಮಾಡ್ತಿದ್ದೀರಾ.? ನಿಮ್ಮ ಮನೆಗೆ ಮುಂದಿನ ಬೇಸಿಗೆಗಾಲದ ವೇಳೆಗೆ ಎಸಿ ಖರೀದಿಸುವ ಪ್ಲಾನ್ ಇದ್ಯಾ..? ಹಾಗಾದ್ರೆ, ಬೇಸಿಗೆವರೆಗೆ ಕಾಯೋದ್ಯಾಕೆ..? ಇದೇ ಸರಿಯಾದ ಸಮಯ. ಹೌದು, ನೀವು ಸ್ಪ್ಲಿಟ್ ಎಸಿ (Split AC) ಖರೀದಿಸಲು ಯೋಚಿಸುತ್ತಿದ್ದರೆ ಇದು ನಿಮಗೆ ಸರಿಯಾದ ಸಮಯ.

 

LG ಸೂಪರ್ ಕನ್ವರ್ಟಿಬಲ್ 5-ಇನ್-1 ಕೂಲಿಂಗ್ 1.5 ಟನ್ 3 ಸ್ಟಾರ್ ಸ್ಪ್ಲಿಟ್ ಎಸಿ

LG ಸೂಪರ್ ಕನ್ವರ್ಟಿಬಲ್ 5-ಇನ್-1 ಕೂಲಿಂಗ್ 1.5 ಟನ್ 3 ಸ್ಟಾರ್ ಸ್ಪ್ಲಿಟ್ ಎಸಿಯ MRP ರೂ. 68,990 ಆಗಿದೆ. ಆದರೆ, ಅದನ್ನು ನೀವು 48% ರಿಯಾಯಿತಿ ದರದಲ್ಲಿ ಅಂದರೆ ರೂ.35,490 ಕ್ಕೆ ಖರೀದಿಸಬಹುದು. ಇದರೊಂದಿಗೆ ಹಲವು ಬ್ಯಾಂಕ್ ಆಫರ್ ಗಳು ಕೂಡ ಇದರ ಮೇಲೆ ಇವೆ. ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದರೆ ನೀವು 1,500 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು. ನೀವು SBI ಮಾಸ್ಟರ್ ಕಾರ್ಡ್‌ನೊಂದಿಗೆ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

ಚಳಿಗಾಲ ಆರಂಭವಾದರೆ ಈ ಸಮಯದಲ್ಲಿ ಎಸಿ ಬೆಲೆ ಕುಸಿತಗೊಳ್ಳುತ್ತದೆ. ಹಾಗೆನೇ ಬೇಡಿಕೆ ಕುಸಿಯುವುದರಿಂದ ವ್ಯಾಪಾರವೂ ಕುಸಿಯುತ್ತದೆ. ಈ ಕಾರಣದಿಂದ ಸಾಮಾನ್ಯವಾಗಿ ಕಂಪನಿಗಳು ಪ್ರತಿ ವರ್ಷ ಈ ಟೈಂನಲ್ಲಿ ಬೆಲೆ ಕಡಿಮೆ ಮಾಡಿ ಗ್ರಾಹಕರನ್ನು ಆಕರ್ಷಿಸುತ್ತವೆ. ಹಾಗಾದ್ರೆ, ನೀವೂ ಎಸಿ ಖರೀದಿಸಬೇಕಾದರೆ, ಆನ್‌ಲೈನ್‌ನಲ್ಲಿ ಸುಲಭವಾಗಿ ಖರೀದಿಸಬಹುದಾದ ಕೆಲವು ಸ್ಪ್ಲಿಟ್ ಎಸಿಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ:

ವೋಲ್ಟಾಸ್ (Voltas) 1.5 ಟನ್ 3 ಸ್ಟಾರ್ ಇನ್ವರ್ಟರ್ ಎಸಿ

ವೋಲ್ಟಾಸ್ 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿಯ ಎಂಆರ್‌ಪಿ ರೂ. 61,990 ಆಗಿದ್ದು, ಆದರೆ ನೀವು ಅದನ್ನು 45% ರಿಯಾಯಿತಿ ದರದಲ್ಲಿ ಅಂದರೆ ರೂ. 33,990 ಗೆ ಖರೀದಿಸಬಹುದು. ಇದರೊಂದಿಗೆ ಹಲವು ಬ್ಯಾಂಕ್‌ ಆಫರ್‌ಗಳು ಕೂಡ ಇದರ ಮೇಲೆ ಚಾಲ್ತಿಯಲ್ಲಿವೆ. ಎಸ್‌ಬಿಐ ಮಾಸ್ಟರ್ ಕಾರ್ಡ್‌ನೊಂದಿಗೆ ಪಾವತಿಯ ಮೇಲೆ ನೀವು 10% ತ್ವರಿತ ರಿಯಾಯಿತಿ ಪಡೆಯುತ್ತೀರಿ. ನೀವು ಫಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿಯ ಮೇಲೆ 5% ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದಾಗಿದೆ.

ಪ್ಯಾನಸೋನಿಕ್ (Panasonic) 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ

ಪ್ಯಾನಸೋನಿಕ್ 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ AC ಯ ಎಂಆರ್‌ಪಿ ರೂ. 55,400 ಆಗಿದೆ. ಆದರೆ, ಅದನ್ನು ನೀವು 33% ರಿಯಾಯಿತಿ ದರದಲ್ಲಿ ಅಂದರೆ ರೂ.36,990 ಕ್ಕೆ ಖರೀದಿಸಬಹುದು. ಇದರೊಂದಿಗೆ ಹಲವು ಬ್ಯಾಂಕ್ ಆಫರ್‌ಗಳು ಕೂಡ ಇದೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ 1 ಸಾವಿರ ರೂಪಾಯಿ ರಿಯಾಯಿತಿ ಪಡೆಯಬಹುದು. ಹಾಗೂ, ನೀವು SBI ಮಾಸ್ಟರ್ ಕಾರ್ಡ್ ಡೆಬಿಟ್ ಕಾರ್ಡ್ ನೊಂದಿಗೆ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿ ಪಡೆಯಬಹುದಾಗಿದೆ.

Leave A Reply

Your email address will not be published.