ಕಾಸರಗೋಡು ರೈಲು ಹಳಿಯಲ್ಲಿ ಕಬ್ಬಿಣದ ಸಲಾಕೆ ಪತ್ತೆ – ಆರೋಪಿ ಬಂಧನ ; ಈ ಕೆಲಸದ ಹಿಂದಿನ ಕಾರಣ ಕೇಳಿ ಅಧಿಕಾರಿಗಳೇ ಶಾಕ್!

ಕಾಸರಗೋಡು -ಕಾಞಂಗಾಡ್ ಮಧ್ಯೆ ಹಾದುಹೋಗುವ ಕೋಟಿಕುಳಂ- ಬೇಕಲ ನಡುವೆ ರೈಲು ಹಳಿಗಳಲ್ಲಿ 3 ಕಾಂಕ್ರೀಟ್ ತುಂಡುಗಳನ್ನು ಹತ್ತುದಿನಗಳ ಹಿಂದೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿತ್ತು. ಅಲ್ಲದೆ ರೈಲು ಹಳಿಯಲ್ಲಿ ಕಬ್ಬಿಣದ ಸಲಾಕೆ ಕೂಡ ಕಂಡು ಬಂದಿತ್ತು. ಆದರೆ ರೈಲ್ವೆ ಗಾರ್ಡ್ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿತ್ತು.

 

ಈ ಘಟನೆ ಪೊಲೀಸ್ ಇಲಾಖೆ ಹಾಗೂ ರೈಲ್ವೆ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತು. ಯಾರು ಈ ಕೃತ್ಯ ಎಸಗಿದ್ದಾರೆ ಎಂಬ ಪ್ರಶ್ನೆಯಲ್ಲಿ ಇದರ ಹಿಂದೆ ಭಯೋತ್ಪಾದಕ ಕರಿ ನೆರಳು ಇರಬಹುದೇ ಎಂಬ ಗೊಂದಲವೂ ಮೂಡಿತ್ತು. ಆದ್ರೆ, ಇದೀಗ ಕಾಂಕ್ರೀಟ್ ತುಂಡುಗಳನ್ನು ಹಿಟ್ಟಿದ್ದವರು ಯಾರು ಎಂಬುದು ತಿಳಿದಿದ್ದು, ಇದು ದುರುದ್ದೇಶಪೂರಿತವಲ್ಲ ಎಂದು ತಿಳಿದು ಬಂದಿದೆ.

ಅಷ್ಟಕ್ಕೂ ಈ ಪ್ರಕರಣದ ಆರೊಪಿ ಒಬ್ಬರು ಮಹಿಳೆ. ಹೌದು. ರೈಲ್ವೆ ಭದ್ರತಾಪಡೆ ಹಾಗೂ ರೈಲ್ವೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಕೃತ್ಯ ಎಸಗಿದ ಆರೋಪಿ ತಮಿಳುನಾಡಿನ ವಿಲ್ಲಾಪುರದ ಕನಕವಳ್ಳಿ (22). ಈಕೆ ಗುಜುರಿ ಹೆಕ್ಕುವ ಕೆಲಸ ಮಾಡುತ್ತಿದ್ದು, ಸದ್ಯ ಕೇರಳದಲ್ಲಿ ನೆಲೆಸಿದ್ದಾಳೆ. ಶಂಕೆಯ ಹಿನ್ನೆಲೆಯಲ್ಲಿ ಈಕೆಯನ್ನು ಕೋಟಿಕುಳಂನಲ್ಲಿ ಮಂಗಳವಾರ ಸಂಜೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಿದ್ದರು. ಈ ವೇಳೆ ಆಕೆ ರೈಲು ಹಳಿಯಲ್ಲಿ ಕಬ್ಬಿಣದ ಸಲಾಕೆ ಇರಿಸಿದು ತಾನೆಂದು ತಪೊಪ್ಪಿಕೊಂಡಿದ್ದಾಳೆ. ಅಲ್ಲದೆ ಅದರ ಹಿಂದಿನ ಕಾರಣವನ್ನೂ ಹೇಳಿದ್ದಾಳೆ.

ಈಕೆ ಗುಜುರಿ ಹೆಕ್ಕುವ ಕಾಯಕ ನಡೆಸುತ್ತಿದ್ದು, ಸಿಮೆಂಟ್ ಒಳಗೊಂಡ ಕಬ್ಬಿಣದ ಸರಳು ಆ ದಿನ ಆಕೆಗೆ ಸಿಕ್ಕಿತ್ತು. ಸರಳಿನಿಂದ ಸಿಮೆಂಟ್ ಬೇರ್ಪಡಿಸುವ ಉದ್ದೇಶದಿಂದ ಆಕೆ ಅದನ್ನು ರೈಲು ಹಳಿಯಲ್ಲಿ ಇಟ್ಟಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಕೆಯ ವಿರುದ್ಧದ ಪ್ರಕರಣ ಗಂಭೀರ ಸೆಕ್ಷನ್ ಗಳನ್ನು ಒಳಗೊಂಡಿದೆ. ಹೀಗಾಗಿ ಆಕೆಗೆ ಕನಿಷ್ಠ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆಯಾಗಬಹುದು, ಕನಕವಲ್ಲಿ ಅವರ ಉದ್ದೇಶಗಳು ದುರುದ್ದೇಶಪೂರಿತವಾಗಿರಲಿಲ್ಲ ಎಂದು ಪೊಲೀಸರು ಹೇಳುತ್ತಾರೆ. ಇದು ವಿಧ್ವಂಸಕ ಯತ್ನವಲ್ಲ, ಆದರೆ ಕನಕವಲ್ಲಿ ಅವರು ಮುಗ್ಧ ಮನಸ್ಸಿನಿಂದ ವೇಗವಾಗಿ ಬರುವ ರೈಲನ್ನು ಬಳಸಿ ಲೋಹದ ತುಂಡನ್ನು ಕತ್ತರಿಸಲು ಪ್ರಯತ್ನಿಸಿದರು ಎಂದು ಬೇಕಲ ಠಾಣಾಧಿಕಾರಿ ವಿಪಿನ್ ಯು ಪಿ ಹೇಳಿದ್ದಾರೆ.

ಕೇವಲ 2ನೇ ತರಗತಿವರೆಗೆ ಓದಿರುವ ಕನಕವಲ್ಲಿ ಐದು ವರ್ಷದ ಬಾಲಕನ ತಾಯಿ. ಸರಳಿಗೆ ಅಂಟಿದ ಕಾಂಕ್ರೀಟ್ ಬೇಸ್ ಕತ್ತರಿಸಿ 1,000 ರೂಪಾಯಿ ಮೌಲ್ಯದ ಲೋಹದ ತುಂಡನ್ನು ಮನೆಗೆ ತೆಗೆದುಕೊಂಡು ಹೋಗುವುದು ಅವಳ ಹವಣಿಕೆಯಾಗಿತ್ತು. ಆದರೆ, ಇಂತಹ ಹೆವಿ ಮೆಟಲ್ ತುಂಡನ್ನು ರೈಲ್ವೇ ಹಳಿ ಮೇಲೆ ಇಡುವುದರಿಂದ ರೈಲು ಹಳಿತಪ್ಪುತ್ತದೆ ಎಂದು ಆಕೆಗೆ ತಿಳಿದಿರಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

Leave A Reply

Your email address will not be published.