ಹಿಂದೂಗಳ ಪವಿತ್ರ ನದಿ ‘ಗಂಗಾ’ ನದಿ ಮೇಲೆ ಮಾಂಸ, ಹುಕ್ಕಾ ಪಾರ್ಟಿ | 8 ಮಂದಿ ಮೇಲೆ ಕೇಸ್, ವೀಡಿಯೋ ವೈರಲ್

ಹಿಂದೂಗಳ ಪವಿತ್ರ ಸ್ಥಾನವಾದ, ಗಂಗಾ ನದಿಯ ಮಧ್ಯೆ ದೋಣಿಯಲ್ಲಿ ಹುಕ್ಕಾ, ಮಾಂಸದೂಟದ ಪಾರ್ಟಿ ಮಾಡಿದ ಘಟನೆಯೊಂದು ನಡೆದಿದ್ದು, ಈಗ 8 ಮಂದಿ ವಿರುದ್ಧ ಕೇಸು ದಾಖಲಾಗಿದೆ.

 

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಗಮ ಸ್ಥಳವಾದ ‘ಸಂಗಮ್’ ಬಳಿ ದೋಣಿಯಲ್ಲಿ ‘ಹುಕ್ಕಾ, ನಾನ್ವೆಜ್ ಪಾರ್ಟಿ ನಡೆಸುತ್ತಿದ್ದ ವೀಡಿಯೋವೊಂದು ವೈರಲ್ ಆಗಿದೆ.

ಈ ದೋಣಿಯಲ್ಲಿದ್ದವರು, ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ ಕೋಳಿ ಬೇಯಿಸುವುದು ಜೊತೆಗೆ ಹುಕ್ಕಾ‌ ಮಾಡಿರುವುದನ್ನು ಪಾರ್ಟಿ ಮಾಡುವುದು ಕಾಣುತ್ತದೆ.
ದೋಣಿಯಲ್ಲಿದ್ದ 8 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ನಗರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರೋಪಿಗಳ ಮೇಲೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಹಾಗೂ ಪೂಜಾ ಸ್ಥಳವನ್ನು ಅಪವಿತ್ರಗೊಳಿಸಿದ ಆರೋಪವನ್ನು ಹೊರಿಸಲಾಗಿದೆ.

ಮೂರು ದಿನಗಳ ಹಿಂದೆ ಈ ವೀಡಿಯೋ ವೈರಲ್ ಆಗಿದೆ. 30 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಬಿಳಿ ಅಂಗಿ ಧರಿಸಿದ ವ್ಯಕ್ತಿಯೊಬ್ಬ ದೋಣಿಯಲ್ಲಿ ಹುಕ್ಕಾ ಸೇದುತ್ತಿರುವುದನ್ನು ನೋಡಬಹುದು. ನಂತರ, ದೋಣಿಯಲ್ಲಿ ಕೋಳಿ ಮಾಂಸ ಬೇಯಿಸುತ್ತಿರುವ ದೃಶ್ಯ ಸೆರೆಯಾಗಿದೆ.

Leave A Reply

Your email address will not be published.